ವಿಡಿಯೋ: ಧೋನಿಯಿಂದ ಮಿಂಚಿನ ವೇಗದಲ್ಲಿ ಸ್ಟಂಪಿಂಗ್!

Posted By:
Subscribe to Oneindia Kannada

ಬೆಂಗಳೂರು, ಏಪ್ರಿಲ್ 17: ಎಂಎಸ್ ಧೋನಿ ಅವರು ಐಪಿಎಲ್ 2017ರಲ್ಲಿ ಮೊದಲ ಬಾರಿಗೆ ಸ್ವಲ್ಪ ಮಟ್ಟಿಗೆ ಅಬ್ಬರಿಸಿ, ಬ್ಯಾಟಿಂಗ್ ಲಯಕ್ಕೆ ಬಂದಿದ್ದಾರೆ. ಜತೆಗೆ ವಿಕೆಟ್ ಕೀಪಿಂಗ್ ನಲ್ಲಿ ಮಿಂಚಿದ್ದಾರೆ. ಎಬಿ ಡಿ ವಿಲಿಯರ್ಸ್ ಅವರ ಸ್ಟಂಪಿಂಗ್ ಮಾಡುವ ಮೂಲಕ ಎಲ್ಲರ ಗಮನ ಸೆಳೆದರು.

ಐಪಿಎಲ್ 2017: ಆರ್ ಸಿಬಿ ವೇಳಾಪಟ್ಟಿ | ಸಂಪೂರ್ಣ ವೇಳಾಪಟ್ಟಿ | ಆರ್ ಸಿಬಿ ಪಡೆ | ಗ್ಯಾಲರಿ

25 ಎಸೆತಗಳಲ್ಲಿ 28ರನ್ (3 ಬೌಂಡರಿ, 1ಸಿಕ್ಸರ್) ಬಾರಿಸಿದ ಧೋನಿ, ನಂತರ ಸೂಪರ್ ಸ್ಟಂಪಿಂಗ್ ಮಾಡಿ, ಪಂದ್ಯಕ್ಕೆ ತಿರುವು ತಂದರು. [ಧೋನಿ ಹೊಡೆದ ಸಿಕ್ಸರ್ ಹರ್ಷ್ ಗೋಯೆಂಕಾ ಸ್ಪೆಕ್ಸ್ ಮುರಿತಂತೆ!]

ಪಂದ್ಯದ 11ನೇ ಓವರ್ ನಲ್ಲಿ ಲೆಗ್ ಸ್ಪಿನ್ನರ್ ಇಮ್ರಾನ್ ತಾಹೀರ್ ಅವರ ಎಸೆತವನ್ನು ಆಡಲು ಮುಂದಕ್ಕೆ ಬಾಗಿದ ಆರ್ ಸಿಬಿ ಆಟಗಾರ ಎಬಿ ಡಿ ವಿಲಿಯರ್ಸ್ ಅವರು ಕ್ರೀಸ್ ನಿಂದ ಮುಂದಕ್ಕೆ ಹೋಗಿದ್ದರು.

IPL 2017: Lightning fast stumping from MS Dhoni ABD wicket

ಈ ಸಂದರ್ಭದಲ್ಲಿ ತ್ವರಿತವಾಗಿ ಬೇಲ್ ಎಗರಿಸಿದ ಧೋನಿ, ವಿಕೆಟ್ ಉದುರಿಸುವಲ್ಲಿ ಯಶಸ್ವಿಯಾದರು.ಈ ಸಂದರ್ಭದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 70 ಸ್ಕೋರ್ ಮಾಡಿ 2 ವಿಕೆಟ್ ಕಳೆದುಕೊಂಡಿತ್ತು.

59 ಎಸೆತಗಳಲ್ಲಿ 92ರನ್ ಗಳಿಸುವ ಗುರಿ ಹೊಂದಿತ್ತು. ಡಿ ವಿಲಿಯರ್ಸ್ ಅವರು 29ರನ್ ಮಾಡಿ ಆಡುತ್ತಿದ್ದರು. ಇನ್ನೊಂದೆಡೆ ಕ್ರೀಸ್ ನಲ್ಲಿ ಜಾಧವ್ 9ರನ್ ಗಳಿಸಿದ್ದರು.

ಎಬಿಡಿ ಔಟಾದ ಬಳಿಕ ತಂಡದ ಚೇಸಿಂಗ್ ರೀತಿಯೇ ಬದಲಾಯಿತು. ಕೊನೆಗೆ 27ರನ್ ಗಳಿಂದ ಆರ್ ಸಿಬಿ ಪಂದ್ಯವನ್ನು ಕಳೆದುಕೊಂಡಿತು. ಧೋನಿ ಅವರ ಸ್ಟಂಪಿಂಗ್ ವಿಡಿಯೋ ನೋಡಲು ಕ್ಲಿಕ್ ಮಾಡಿ. ಚಿತ್ರ ಹಾಗೂ ವಿಡಿಯೋ ಕೃಪೆ : ಐಪಿಎಲ್ ಟಿ20.ಕಾಂ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
MS Dhoni showed some lightning fast skills with the gloves during the match against Royal Challengers Bangalore sent AB de Villiers make the long walk back to the pavilion in the match.
Please Wait while comments are loading...