ಐಪಿಎಲ್ 2017: 2ನೇ ಗೆಲುವಿಗೆ ಆರ್ ಸಿಬಿ, ಕಿಂಗ್ಸ್ ಪಂಜಾಬ್ ಕಾದಾಟ

Posted By:
Subscribe to Oneindia Kannada

ಇಂದೋರ್, ಏಪ್ರಿಲ್ 10 : ಸ್ಟಾರ್ ಆಟಗಾರರ ಅನುಪಸ್ಥಿತಿಯ ನಡುವೆಯೂ ಉತ್ತಮ ಆಟವಾಡಿ ಹಿಂದಿನ ಪಂದ್ಯದಲ್ಲಿ ಗೆಲುವು ಸಾಧಿಸಿರುವ ರಾಯಲ್‌ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ಮತ್ತೊಂದು ಜಯದ ನಿರೀಕ್ಷೆಯಲ್ಲಿದೆ.

ಇಲ್ಲಿನ ಹೋಳ್ಕರ್ ಕ್ರೀಡಾಂಗಣದಲ್ಲಿ ಸೋಮವಾರ ನಡೆಯಲಿರುವ ಪಂದ್ಯದಲ್ಲಿ ಶೇನ್ ವಾಟ್ಸನ್ ನಾಯಕತ್ವದ ಆರ್‌ಸಿಬಿ ತಂಡ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಎದುರು ಪೈಪೋಟಿ ನಡೆಸಲಿದೆ.

ಚೊಚ್ಚಲ ಪ್ರಶಸ್ತಿಯ ನಿರೀಕ್ಷೆಯಲ್ಲಿರುವ ಬೆಂಗಳೂರಿನ ತಂಡಕ್ಕೆ ವಿರಾಟ್‌ ಕೊಹ್ಲಿ ಮತ್ತು ಎ.ಬಿ. ಡಿವಿಲಿಯರ್ಸ್ ಅವರ ಅನುಪಸ್ಥಿತಿ ಕಾಡುತ್ತಿದೆ. ಗಾಯಗೊಂಡಿರುವ ಕೆ.ಎಲ್. ರಾಹುಲ್‌ ಈ ಬಾರಿಯ ಐಪಿಎಲ್ ನಿಂದಲೇ ಹೊರಬಿದ್ದಿದ್ದಾರೆ.

IPL 2017, KXIP Vs RCB Preview: Punjab And RCB Face Off In Search Of Second Win

ಯುವ ಪ್ರತಿಭೆ ಸರ್ಫರಾಜ್ ಖಾನ್ ಕೂಡ ಅಭ್ಯಾಸದ ವೇಳೆ ಗಾಯಗೊಂಡಿರುವ ಕಾರಣ ಇನ್ನೂ ಕೆಲ ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ.

ಎರಡು ಸಲ ರನ್ನರ್ ಅಪ್‌ ಆಗಿರುವ ಆರ್‌ಸಿಬಿ ಈ ಬಾರಿಯ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಸನ್‌ರೈಸರ್ಸ್ ಹೈದರಾಬಾದ್ ಎದುರು ಸೋಲು ಕಂಡಿತ್ತು.

ಶನಿವಾರ ಬೆಂಗಳೂರಿನಲ್ಲಿ ನಡೆದಿದ್ದ ಪಂದ್ಯದಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ತಂಡವನ್ನು 15 ರನ್‌ಗಳಿಂದ ಮಣಿಸಿತ್ತು. ಈಗ ಎರಡನೇ ಗೆಲುವಿನ ನಿರೀಕ್ಷೆಯಲ್ಲಿದೆ.

ಇನ್ನು ಹಿಂದಿನ ಪಂದ್ಯದಲ್ಲಿ ಪುಣೆ ರೈಸಿಂಗ್ ಸೂಪರ್‌ಜೈಂಟ್ ಎದುರು ಗೆಲುವು ಪಡೆದು ವಿಶ್ವಾಸದಲ್ಲಿರುವ ಕಿಂಗ್ಸ್ ಇಲೆವೆನ್ ಪಂಜಾಬ್ ಸತತ ಎರಡನೇ ಗೆಲುವಿನ ನಿರೀಕ್ಷೆಯಲ್ಲಿದೆ.

ಪಂದ್ಯ ಆರಂಭ ಸಮಯ: ರಾತ್ರಿ 8 ಗಂಟೆಗೆ
ನೇರಪ್ರಸಾರ: Sony SIX, Sony Max, Sony ESPN

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Having notched up a morale-boosting win over Delhi Daredevils without some of their star players, Royal Challengers Bangalore face another test of character when they face Kings XI Punjab in their third IPL match here on Monday.
Please Wait while comments are loading...