ಐಪಿಎಲ್ : ಪಂಜಾಬ್ ತಂಡಕ್ಕೆ ಕನ್ನಡಿಗ ಅರುಣ್ ಕೋಚ್

Posted By:
Subscribe to Oneindia Kannada

ಬೆಂಗಳೂರು, ಫೆಬ್ರವರಿ 17: ಕಿಂಗ್ಸ್ XI ಪಂಜಾಬ್ ತಂಡಕ್ಕೆ ಹೊಸ ಕೋಚ್ ಗಳನ್ನು ನೇಮಿಸಲಾಗಿದೆ. ಕರ್ನಾಟಕದ ಯಶಸ್ವಿ ಕೋಚ್, ಮಾಜಿ ಆಟಗಾರ ಜೆ ಅರುಣ್ ಕುಮಾರ್ ಅವರು ಪಂಜಾಬಿಗೆ ಬ್ಯಾಟಿಂಗ್ ಕೋಚ್ ಆಗಿ ಆಯ್ಕೆಯಾಗಿದ್ದಾರೆ.

ಯಾವ ತಂಡದಲ್ಲಿ ಯಾವ ಆಟಗಾರರು ಉಳಿದುಕೊಂಡಿದ್ದಾರೆ?|ಯಾವ ತಂಡದಿಂದ ಯಾವ ಕ್ರಿಕೆಟರ್ ಗೆ ಕೊಕ್!

ಮಿಥುನ್ ಮನಾಸ್ ಅವರು ಸಹಾಯಕ ಕೋಚ್ ಆಗಿ ನೇಮಕಗೊಂಡಿದ್ದರೆ, ಈ ತಂಡಕ್ಕೆ ವೀರೇಂದ್ರ ಸೆಹ್ವಾಗ್ ಅವರು ಮಾರ್ಗದರ್ಶಿಯಾಗಿದ್ದಾರೆ.[ಐಪಿಎಲ್ 2017 ಸಂಪೂರ್ಣ ವೇಳಾಪಟ್ಟಿ]

IPL 2017: Kings XI Punjab get new coaches

100ಕ್ಕೂ ಹೆಚ್ಚು ಪ್ರಥಮದರ್ಜೆ ಪಂದ್ಯಗಳನ್ನಾಡಿ, 20ಕ್ಕೂ ಅಧಿಕ ಶತಕ ಬಾರಿಸಿದ ಅನುಭವವಿರುವ ಜೆ ಅರುಣ್ ಕುಮಾರ್ ಅವರು 2008ರ ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡಿದ್ದರು. 2012ರಿಂದ ಕರ್ನಾಟಕ ರಣಜಿ ತಂಡದ ಬ್ಯಾಟಿಂಗ್ ಕೋಚ್ ಆಗಿ ಯಶಸ್ಸು ಗಳಿಸಿದ್ದಾರೆ.[ಐಪಿಎಲ್ 2017: ಆರ್ ಸಿಬಿ ಪಂದ್ಯಗಳ ಪೂರ್ಣ ವೇಳಾಪಟ್ಟಿ]

100ಕ್ಕೂ ಹೆಚ್ಚು ಪ್ರಥಮದರ್ಜೆ ಪಂದ್ಯಗಳನ್ನಾಡಿ, 20ಕ್ಕೂ ಅಧಿಕ ಶತಕ ಬಾರಿಸಿದ ಅನುಭವವಿರುವ ಜೆ ಅರುಣ್ ಕುಮಾರ್ ಅವರು 2008ರ ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡಿದ್ದರು. 2012ರಿಂದ ಕರ್ನಾಟಕ ರಣಜಿ ತಂಡದ ಬ್ಯಾಟಿಂಗ್ ಕೋಚ್ ಆಗಿ ಯಶಸ್ಸು ಗಳಿಸಿದ್ದಾರೆ.

ಐಪಿಎಲ್ 10 ನಲ್ಲಿ ಅಮಿತ್ ತ್ಯಾಗಿ ಹೊಸ ಫಿಜಿಯೋಥೆರಪಿಸ್ಟ್ ಹಾಗೂ ಮನೋಜ್ ಕುಮಾರ್ ಅವರು ಯೋಗ ಟೀಚರ್ ಅಗಿ ತಂಡ ಸೇರಿದ್ದಾರೆ. ಆರ್ ಶ್ರೀಧರ್ ಫೀಲ್ಡಿಂಗ್ ಕೋಚ್ ಆಗಿದ್ದರೆ, ನಿಶಾಂತ್ ಠಾಕೂರ್ ಹಾಗೂ ನರೇಶ್ ಕುಮಾರ್ ಎಲ್ಲರೂ ಟೀಂ ಇಂಡಿಯಾದ ಮಾಜಿ ಸ್ಫೋಟಕ ಬ್ಯಾಟ್ಸ್ ಮನ್ ವೀರೇಂದ್ರ ಸೆಹ್ವಾಗ್ ಅವರ ಮಾರ್ಗದರ್ಶನದಲ್ಲಿ ನಡೆಯಲಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Mithun Manhas and J Arun Kumar have been roped in as the assistant coach and batting coach by Kings XI Punjab respectively for the upcoming season of the Indian Premier League (IPL).
Please Wait while comments are loading...