ಪೀಟರ್ಸನ್ ಗೆ ಮಲ್ಟಿಪಲ್ ಎಂಟ್ರಿ ವೀಸಾ ಬೇಕಂತೆ!

Posted By:
Subscribe to Oneindia Kannada

ನವದೆಹಲಿ, ಏಪ್ರಿಲ್ 12: ಇಂಗ್ಲೆಂಡ್ ನ ಮಾಜಿ ಕ್ರಿಕೆಟಿಗ ಕೆವಿನ್ ಪೀಟರ್ಸನ್ ಅವರಿಗೆ ಪದೇ ಪದೇ ಭಾರತಕ್ಕೆ ಭೇಟಿ ನೀಡಲು ತಮಗೆ ಅನುಕೂಲವಾಗುವ ನಿಟ್ಟಿನಲ್ಲಿ ಮಲ್ಟಿಪಲ್ ಎಂಟ್ರಿ ವೀಸಾ ಅಗತ್ಯವಿದ್ದು, ಇದಕ್ಕೆ ಸೂಕ್ತ ಮಾರ್ಗ ದರ್ಶನ ಮಾಡಬೇಕೆಂದು ಟ್ವಿಟರ್ ನಲ್ಲಿ ಕೋರಿದ್ದಾರೆ.

ಮಲ್ಲಿಪಲ್ ಎಂಟ್ರಿ ವೀಸಾಕ್ಕಾಗಿ ತಾವು ಲಂಡನ್ ನಲ್ಲಿರುವ ಭಾರತೀಯ ಧೂತಾವಾಸ ಕಚೇರಿಗೆ ಅರ್ಜಿ ಸಲ್ಲಿಸಿದ್ದು, ಈ ಬಗ್ಗೆ ಸಂಬಂಧಪಟ್ಟವರು ಬೇಗನೇ ಸಹಾಯ ಮಾಡಿ ಎಂದು ಮನವಿ ಮಾಡಿದ್ದಾರೆ.

IPL 2017: Kevin Pietersen seeks help on Twitter for Indian visa

ಸದ್ಯಕ್ಕೆ ಪೀಟರ್ಸನ್, ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ (ಐಪಿಎಲ್) ವೀಕ್ಷಕ ವಿವರಣೆಗಾರರಾಗಿ ಸೇವೆ ಸಲ್ಲಿಸುತ್ತಿದ್ದು, ಇದರ ನಿಮಿತ್ತ ಅವರು ಭಾರತದಲ್ಲೇ ವಾಸ್ತವ್ಯ ಹೂಡಿದ್ದಾರೆ.

ಆದರೆ, ಅವರು ಹೇಳುವ ಪ್ರಕಾರ, ಅವರು ಕ್ರಿಕೆಟ್ ಹಿನ್ನೆಲೆಯಲ್ಲಿ ಆಗಾಗ್ಗೆ ಭಾರತಕ್ಕೆ ಬರಬೇಕಿರುತ್ತದೆ. ಹಾಗಾಗಿ, ತಮಗೆ ಮಲ್ಟಿಪಲ್ ವೀಸಾ ಎಂಟ್ರಿ ಅಗತ್ಯವಿದೆ. ಸದ್ಯಕ್ಕೆ ನೀಡಲಾಗಿರುವ ಸಿಂಗಲ್ ಎಂಟ್ರಿ ವೀಸಾದಿಂದ ತಮಗೆ ಭಾರತಕ್ಕೆ ಪದೇ ಪದೇ ಭೇಟಿ ನೀಡಲು ಸಾಧ್ಯವಾಗುವುದಿಲ್ಲ ಎಂದಿದ್ದಾರೆ.

ಅವರ ಈ ಟ್ವೀಟ್ ಗೆ ಉತ್ತರಿಸಿರುವ ಅವರ ಕೆಲವು ಅಭಿಮಾನಿಗಳು, ಈ ಬಗ್ಗೆ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರೊಂದಿಗೆ ಮಾತನಾಡುವಂತೆ ಸಲಹೆ ನೀಡಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Former England captain Kevin Pietersen has sought the help of the Indian High Commission in London for multiple entry visa to India. Pietersen, who is currently in India to do commentary for the Indian Premier League (IPL), took to the micro-blogging website Twitter to seek help as he wants to be back in India again.
Please Wait while comments are loading...