ಆರ್ ಸಿಬಿ V/s ಡೆಲ್ಲಿ ಡೇರ್ ಡೆವಿಲ್ಸ್ ಪಂದ್ಯದ ಹೈಲೈಟ್ಸ್

Posted By:
Subscribe to Oneindia Kannada

ಬೆಂಗಳೂರು, ಏಪ್ರಿಲ್ 9: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ ಸಿಬಿ) ಹಾಗೂ ಡೆಲ್ಲಿ ಡೇರ್ ಡೆವಿಲ್ಸ್ (ಡಿಡಿ) ನಡುವಿನ ಐಪಿಎಲ್ ಪಂದ್ಯದಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ತಂಡದ ವಿರುದ್ಧ ಆರ್ ಸಿಬಿ 15 ರನ್ ಅಂತರದ ಜಯ ಸಂಪಾದಿಸಿತು.

ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆರ್ ಸಿಬಿ, ನಿಗದಿತ 20 ಓವರ್ ಗಳಲ್ಲಿ 157 ರನ್ ಗಳ ಸಾಧಾರಣ ಮೊತ್ತ ದಾಖಲಿಸಿತು. ಆನಂತರ ಬ್ಯಾಟಿಂಗ್ ನಡೆಸಿದ ಡೆಲ್ಲಿ ಪಡೆ, 20 ಓವರ್ ಗಳಲ್ಲಿ 9 ವಿಕೆಟ್ ಗಳಲ್ಲಿ 142 ರನ್ ಗಳಿಸಿ ಸೋಲೊಪ್ಪಿಕೊಂಡಿತು.[ಸೋಲಿನ ಕಹಿ ಮರೆತ ಆರ್ ಸಿಬಿ; ಡೆಲ್ಲಿ ವಿರುದ್ಧ ರೋಚಕ ಜಯ]

IPL 2017: Highlights of the match: Royal Challengers of Bengaluru Vs Delhi Daredevils

ಈ ಗೆಲುವಿನ ಮೂಲಕ, ಕಳೆದ ಪಂದ್ಯದಲ್ಲಿ ಹೈದರಾಬಾದ್ ವಿರುದ್ಧ ಅನುಭವಿಸಿದ್ದ ಸೋಲಿನ ಕಹಿಯನ್ನು ಮರೆತ ಆರ್ ಸಿಬಿ, ಗೆಲವಿನ ಹಾದಿಯನ್ನು ಕಂಡುಕೊಂಡಂತಾಗಿದೆ.[ಗೆದ್ದ ಖುಷಿಯಲ್ಲಿ ವಾಸ್ತವ ಮರೆಯಬಾರದು: ಆರ್ ಸಿಬಿಗೆ ಕಿವಿಮಾತು]

ಈ ಪಂದ್ಯದ ಮುಖ್ಯಾಂಶಗಳು ಹೀಗಿವೆ:

- ಆರ್ ಸಿಬಿ ತಂಡದ ಬಿಲ್ಲಿ ಸ್ಟಾನ್ಲೇಕ್ ತಮ್ಮ ಮೊದಲ ಐಪಿಎಲ್ ಪಂದ್ಯದಲ್ಲೇ 2 ವಿಕೆಟ್ ಪಡೆದರು.

- ಯಜುವೇಂದ್ರ ಚಾಹಲ್ ಅವರು ಈ ಪಂದ್ಯದಲ್ಲಿ ಗಳಿಸಿದ್ದು ಕೇವಲ 1 ವಿಕೆಟ್ ಆದರೂ, ಈವರೆಗಿನ ಐಪಿಎಲ್ ನಲ್ಲಿ ಅತಿ ಹೆಚ್ಚು ವಿಕೆಟ್ ಗಳಿಸಿದ ಲೆಗ್ ಸ್ಪಿನ್ನರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಈವರೆಗೆ ಅವರು, 58 ವಿಕೆಟ್ ಗಳಿಸಿದ್ದಾರೆ.

- ಆರ್ ಸಿಬಿ ಪರವಾಗಿ 4ನೇ ವಿಕೆಟ್ ಗೆ 66 ರನ್ ಜತೆಯಾಟ ನೀಡಿದ ಕೇದಾರ್ ಜಾಧವ್ ಹಾಗೂ ಸ್ಟುವರ್ಟ್ ಬಿನ್ನಿ.

- ಈ ಪಂದ್ಯದ ಮೂಲಕ ಐಪಿಎಲ್ ಗೆ ಕಾಲಿಟ್ಟಿರುವ, ಆರ್ ಸಿಬಿಯ ವಿಕೆಟ್ ಕೀಪರ್ ವಿಷ್ಣು ವಿನೋದ್ 5 ಎಸೆತಗಳಲ್ಲಿ 9 ರನ್ ಗಳಿಸಿದರು.

- ಆರ್ ಸಿಬಿಯ37 ಎಸೆತದಲ್ಲಿ 69 ರನ್ ದಾಖಲಿಸಿದ ಕೇದಾರ್ ಜಾಧವ್ ಅವರ ಸ್ಟ್ರೈಕ್ ರೇಟ್ 186.

- ಡೆಲ್ಲಿ ತಂಡದ ಇನಿಂಗ್ಸ್ ನ ಅತ್ಯಂತ ನಿರ್ಣಾಯಕ ಓವರ್ ಎನಿಸಿದ್ದ 20ನೇ ಓವರ್ ಎಸೆದ ಪವನ್ ನೇಗಿ, ಕೇವಲ 3 ರನ್ ನೀಡಿ 2 ವಿಕೆಟ್ ಕಬಳಿಸಿದರು.

- ಡೆಲ್ಲಿ ತಂಡದ ರಿಷಬ್ ಪಂತ್ ಭರ್ಜರಿ ಅರ್ಧಶತಕ (57 ರನ್, 36 ಎಸೆತ) ದಾಖಲಿಸಿದ್ದು ಗಮನಾರ್ಹ.

(ಚಿತ್ರ ಕೃಪೆ: ಪಿಟಿಐ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Royal challengers Bengaluru tasted its first victory in IPL 10 season by beating Delhi Daredevils in its home pitch on 8th April, 2017. Here are the highlights of the match.
Please Wait while comments are loading...