ಕೊಹ್ಲಿ vs ಸ್ಮಿತ್ ಪಡೆಗಳ ಹಣಾಹಣಿ, ಗೆದ್ದವರಿಗೆ ಉಳಿಗಾಲ

Posted By:
Subscribe to Oneindia Kannada

ಬೆಂಗಳೂರು, ಏಪ್ರಿಲ್ 16: ಇಂಡಿಯನ್ ಪ್ರೀಮಿಯರ್ ಲೀಗ್ ನ ಮಹತ್ವದ ಪಂದ್ಯದಲ್ಲಿ ಸತತ ಸೋಲು ಕಾಣುತ್ತಿರುವ ತಂಡಗಳು ಮುಖಾಮುಖಿಯಾಗಲಿವೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ರೈಸಿಂಗ್ ಪುಣೆ ಸೂಪರ್ ಜೈಂಟ್ ತಂಡಕ್ಕೆ ಗೆಲುವು ಅನಿವಾರ್ಯವಾಗಿದ್ದು, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಜಿದ್ದಾಜಿದ್ದಿಯ ಹೋರಾಟದ ನಿರೀಕ್ಷೆಯಿದೆ.

ಐಪಿಎಲ್ 2017: ಆರ್ ಸಿಬಿ ವೇಳಾಪಟ್ಟಿ | ಸಂಪೂರ್ಣ ವೇಳಾಪಟ್ಟಿ | ಆರ್ ಸಿಬಿ ಪಡೆ | ಗ್ಯಾಲರಿ

ಐಪಿಎಲ್‌ನಲ್ಲಿ ಆಡಿರುವ ತನ್ನ ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಏಳು ವಿಕೆಟ್‌ಗಳ ಜಯ ಸಾಧಿಸಿ ಶುಭಾರಂಭ ಮಾಡಿದ್ದ ರೈಸಿಂಗ್ ಪುಣೆ ಸೂಪರ್‌ ಜೈಂಟ್ ನಂತರ ಸತತ ಮೂರು ಸೋಲು ಕಂಡು ಈಗ ಅಂಕಪಟ್ಟಿಯಲ್ಲಿ ಕೊನೆ ಸ್ಥಾನದಲ್ಲಿದೆ.[ಐಪಿಎಲ್ 2017: ಅಂಕಪಟ್ಟಿ]

IPL 2017: Here is RCB's likely Playing XI against Rising Pune Supergiant

ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ ಸಿಬಿ) ತಂಡ ಆರಂಭದಲ್ಲಿ ನಾಯಕತ್ವದ ಕೊರತೆ ಅನುಭವಿಸಿತ್ತು. ಹಂಗಾಮಿ ನಾಯಕರಾಗಿ ಶೇನ್ ವಾಟ್ಸನ್ ಒಂದು ಗೆಲುವು ಮಾತ್ರ ಸಾಧಿಸಿದರು. ವಿರಾಟ್ ಕೊಹ್ಲಿ ರೀ ಎಂಟ್ರಿ ಮಿಂಚಿದರೂ ತಂಡಕ್ಕೆ ಗೆಲುವಿನ ಪಂಚ್ ಬೇಕಿದೆ.[ಧೋನಿಯ ಬೆಸ್ಟ್ ಫಿನಿಷಿಂಗ್ ಮ್ಯಾಚ್ ಗಳು]

ತಂಡದ ಆಯ್ಕೆ ಸಮಸ್ಯೆ: ಎರಡು ತಂಡಗಳಿಗೂ ವಿದೇಶಿ ಆಟಗಾರರ ಆಯ್ಕೆ ಸಮಸ್ಯೆ ಮುಂದುವರೆದಿದೆ. ಆರ್ ಸಿಬಿಯಲ್ಲಿ ಕ್ರಿಸ್ ಗೇಲ್ ಆಡುತ್ತಾರೋ ಇಲ್ಲವೋ ಎಂಬ ಕುತೂಹಲವಿದೆ. ನಾಲ್ಕು ವಿದೇಶಿ ಆಟಗಾರರ ಪೈಕಿ ಕ್ರಿಸ್ ಗೇಲ್, ಎಬಿ ಡಿ ವಿಲಿಯರ್ಸ್, ಶೇನ್ ವಾಟ್ಸನ್ ಹಾಗೂ ತೈಮುಲ್ ಮಿಲ್ಸ್ ಆಯ್ಕೆಯಾಗುವ ಸಾಧ್ಯತೆಯಿದೆ.

ಪುಣೆ ತಂಡದಲ್ಲಿ ಬ್ಯಾಟಿಂಗ್ ಬ್ಯಾಲೆನ್ಸ್ ಇನ್ನೂ ಸಿಕ್ಕಿಲ್ಲ. ನಾಯಕ ಸ್ಮಿತ್ ಬಿಟ್ಟರೆ ಉಳಿದವರು ಸ್ಥಿರತೆ ಕಾಯ್ದುಕೊಂಡಿಲ್ಲ. ಆಡಂ ಝಂಪಾ ಹಾಗೂ ಇಮ್ರಾನ್ ತಾಹೀರ್ ಇಬ್ಬರಲ್ಲಿ ಒಬ್ಬರಿಗೆ ಅವಕಾಶ ಸಿಗಬಹುದು, ಬೆನ್ ಸ್ಟೋಕ್ಸ್, ಫಾಫ್ ಡುಪ್ಲೆಸಿಸ್ ಗೆ ಅವಕಾಶ ಸಿಗಲಿದೆ.

ಆರ್ ಸಿಬಿ ತಂಡ ಸಂಭಾವ್ಯ XI :
ಕ್ರಿಸ್ ಗೇಲ್/ ಬದ್ರಿ, ವಿರಾಟ್ ಕೊಹ್ಲಿ, ಮನ್ದೀಪ್ ಸಿಂಗ್, ಎಬಿ ಡಿ ವಿಲಿಯರ್ಸ್, ಕೇದಾರ್ ಜಾಧವ್ (ವಿಕೆಟ್ ಕೀಪರ್), ಸ್ಟುವರ್ಟ್ ಬಿನ್ನಿ, ತೈಮುಲ್ ಮಿಲ್ಸ್, ಎಸ್ ಅರವಿಂದ್, ಯಜುವೇಂದ್ರ ಚಾಹಲ್, ಶೇನ್ ವಾಟ್ಸನ್,

ಪುಣೆ ಸಂಭಾವ್ಯ ತಂಡ : ಅಜಿಂಕ್ಯ ರಹಾನೆ, ಫಾಫ್ ಡುಪ್ಲೆಸಿಸ್, ಸ್ಟೀವ್ ಸ್ಮಿತ್,ಎಂಎಸ್ ಧೋನಿ(ವಿಕೆಟ್ ಕೀಪರ್), ಮನೋಜ್ ತಿವಾರಿ, ಬೆನ್ ಸ್ಟೋಕ್ಸ್, ರಜತ್ ಭಾಟಿಯಾ, ಇಮ್ರಾನ್ ತಾಹೀರ್, ಜಯದೇವ್ ಉನದ್ಕತ್, ಈಶ್ವರ್ ಪಾಂಡೆ,ರಾಹುಲ್ ಚಾಹರ್.

ಸಂಜೆ 8ಕ್ಕೆ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯ, ಸೋನಿ ಪಿಕ್ಚರ್ಸ್ ನೆಟ್ವರ್ಕ್, ಹಾಟ್ ಸ್ಟಾರ್ ನಲ್ಲಿ ನೇರ ಪ್ರಸಾರ ವೀಕ್ಷಿಸಬಹುದು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Virat Kohli will be back to lead Royal Challengers Bangalore (RCB) in today's Indian Premier League (IPL) 2017 match against Rising Pune Supergiant here in M Chinnaswamy stadium, Bengaluru.
Please Wait while comments are loading...