ಮುಂಬೈ ವಿರುದ್ಧ ಬದ್ರಿ ಹ್ಯಾಟ್ರಿಕ್, ಐಪಿಎಲ್ ಹ್ಯಾಟ್ರಿಕ್ ಸಾಧಕರ ಪಟ್ಟಿ

Posted By:
Subscribe to Oneindia Kannada

ಬೆಂಗಳೂರು, ಏಪ್ರಿಲ್ 14: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2017ರ ಮೊದಲ ಹ್ಯಾಟ್ರಿಕ್-ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಸ್ಯಾಮುಯಲ್ ಬದ್ರಿ ಪಾಲಾಗಿದೆ. ಮುಂಬೈ ವಿರುದ್ಧ ಬದ್ರಿ ಈ ಸಾಧನೆ ಮಾಡಿದ್ದಾರೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ ಸಿಬಿ) ಹಾಗೂ ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ನ ಲೆಗ್ ಸ್ಪಿನ್ನರ್ ಸ್ಯಾಮುಯಲ್ ಬದ್ರಿ ಅವರು ಹ್ಯಾಟ್ರಿಕ್ ಗಳಿಸಿದ್ದಾರೆ. ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ 10ರ ಮೊದಲ ಹ್ಯಾಟ್ರಿಕ್ ಇದಾಗಿದೆ.

Full list of IPL hat-tricks after RCB's Samuel Badree joins elite list

ಬದ್ರಿ ಅವರು ಇದೇ ಮೊದಲ ಬಾರಿಗೆ ಆರ್ ಸಿಬಿ ಪರ ಆಡುತ್ತಿದ್ದು, ಐಪಿಎಲ್ 10ರ ಮೊದಲ ಪಂದ್ಯದಲ್ಲೇ ಹ್ಯಾಟ್ರಿಕ್ ಗಳಿಸಿದ್ದಾರೆ. 36 ವರ್ಷ ವಯಸ್ಸಿನ ಬದ್ರಿ ಅವರು ಪಾರ್ ಪಾರ್ಥೀವ್ ಪಟೇಲ್ (3), ಮಿಚೆಲ್ ಮೆಕ್ಲೆನೆಗನ್ (0)ಹಾಗೂ ನಾಯಕ ರೋಹಿತ್ ಶರ್ಮ (0) ವಿಕೆಟ್ ಗಳಿಸಿದರು. ಐಪಿಎಲ್ 2017ರ ಮೊದಲ ಹ್ಯಾಟ್ರಿಕ್ ಸೇರಿದಂತೆ ಐಪಿಎಲ್ ಇತಿಹಾಸದಲ್ಲಿ 15 ಬಾರಿ ಹ್ಯಾಟ್ರಿಕ್ ಸಾಧನೆ ಕಂಡು ಬಂದಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

Read in English: Full list of IPL hat-tricks
English summary
Royal Challengers Bangalore (RCB) legspinner Samuel Badree today (April 14) took the first hat-trick of the 10th edition of the Indian Premier League (IPL) here at M Chinnaswamy Stadium.
Please Wait while comments are loading...