ಮಳೆಯ ಕಾಟದ ನಡುವೆ ಹೈದ್ರಾಬಾದ್ ವಿರುದ್ಧ ಕೆಕೆಆರ್ ಗೆ ಜಯ

Posted By:
Subscribe to Oneindia Kannada

ಬೆಂಗಳೂರು, ಮೇ 17: ಐಪಿಎಲ್ 10ರ ಎಲಿಮಿನೇಟರ್ ಪಂದ್ಯ ಮಳೆ ಕಾಟದ ನಡುವೆ ಮಧ್ಯರಾತ್ರಿ ನಂತರ ಕೊನೆಗೂ ಆರಂಭವಾಗಿ ಚುಟುಕಾಗಿ ಮುಕ್ತಾಯವಾಗಿದೆ.

ಕೆಕೆಆರ್ ಹಾಗೂ ಹೈದರಾಬಾದ್ ನಡುವಿನ ಪಂದ್ಯದಲ್ಲಿ ಹೈದರಾಬಾದ್ ಮೊದಲು ಬ್ಯಾಟ್ ಮಾಡಿ 128/7 ಸ್ಕೋರ್ ಮಾಡಿತ್ತು. ಮಳೆ ಕಾರಣ ಕೆಕೆಆರ್ ಗೆ 6 ಓವರ್ ಗಳಲ್ಲಿ 48ರನ್ (ಡಕ್ ವರ್ಥ್ ಲೂಯಿಸ್ ನಿಯಮದಂತೆ) ಮಾಡುವ ಪರಿಷ್ಕೃತ ಗುರಿ ಸಿಕ್ಕಿತು. 3 ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿದ ಕೆಕೆಆರ್ ಜಯಭೇರಿ ಬಾರಿಸಿದೆ.

ಗೌತಮ್ ಗಂಭೀರ್ ನೇತೃತ್ವದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ಈಗ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಮೇ 19ರಂದು ಇದೇ ಮೈದಾನದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದೆ.

ಕೆಕೆಆರ್ ರನ್ ಚೇಸ್ ಮಾಡಲು ಮಳೆ ಅಡ್ಡಿಯಾಗಿದೆ. ಒಂದು ವೇಳೆ ಮಳೆಯಿಂದ ಪಂದ್ಯ ರದ್ದಾದರೆ ಮುಂದೇನು?[ಚಿನ್ನಸ್ವಾಮಿ ಸ್ಟೇಡಿಯಂನ ಮಳೆ ಪ್ರೀತಿ, ಐಪಿಎಲ್ ಪಂದ್ಯಕ್ಕೇನು ಗತಿ?]

IPL 2017: Kolkata restrict Hyderabad to 128/7, need 129 to win Eliminator

ಹೈದರಾಬಾದ್ ಇನ್ನಿಂಗ್ಸ್:
* ನಾಯಕ ಡೇವಿಡ್ ವಾರ್ನರ್ 35 ಎಸೆತಗಳಲ್ಲಿ 37ರನ್ (2 ಬೌಂಡರಿ, 2 ಸಿಕ್ಸರ್)
* ಶಿಖರ್ ಧವನ್ 11, ಕೇನ್ ವಿಲಿಯಮ್ಸನ್ 24, ವಿಜಯ್ ಶಂಕರ್ 22, ನಮನ್ ಓಜಾ 16ರನ್ ಗಳಿಸಿದರೂ ರನ್ ಗತಿ ಹೆಚ್ಚಾಗಲಿಲ್ಲ.
* ಕೆಕೆಆರ್ ಪರ ನಾಥನ್ ಕೌಲ್ಟರ್ ನಿಲ್ 20 ರನ್ನಿತ್ತು3, ಉಮೇಶ್ ಯಾದವ್ 21 ರನ್ನಿತ್ತು 2 ವಿಕೆಟ್ ಗಳಿಸಿದರು.
* ಹೈದರಾಬಾದ್ 20 ಓವರ್ ಗಳಲ್ಲಿ 128/7 ಸ್ಕೋರ್ ಮಾಡಿತು.

* ಪ್ಲೇ ಆಫ್ ನ ಎಲಿಮಿನೇಟರ್ ಹಾಗೂ ಕ್ವಾಲಿಫೈಯರ್ 2 ಪಂದ್ಯಗಳಿಗೆ ಯಾವುದೇ ಬದಲಿ ದಿನವನ್ನು ನಿಗದಿ ಮಾಡಿಲ್ಲ. ಅಂಕ ಹಂಚಿಕೆಯಂತೂ ಸಾಧ್ಯವಿಲ್ಲ.
* ಒಂದು ವೇಳೆ ಎರಡೂ ಪಂದ್ಯಗಳು ಮಳೆಯಿಂದ ಸಂಪೂರ್ಣ ವಾಶ್ ಔಟ್ ಆದರೆ, ಲೀಗ್ ಹಂತದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ತಂಡವು ಫೈನಲ್ ಪ್ರವೇಶಿಸಲಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Kolkata Knight Riders beat Sunrisers Hyderabad in the eliminator game of the Indian Premier League (IPL) 2017 here on Wednesday (May 17) will play Mumbai Indians in the Qualifier 2 on May 19.
Please Wait while comments are loading...