ಐಪಿಎಲ್ ಸಂಭ್ರಮದಲ್ಲಿ ಅಮ್ಮಂದಿರ ದಿನವನ್ನು ಆಚರಿಸಿದ ಕ್ರಿಕೆಟರ್ಸ್

Posted By:
Subscribe to Oneindia Kannada

ಬೆಂಗಳೂರು, ಮೇ 14 : ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 10ನೇ ಆವೃತ್ತಿಯಲ್ಲಿ ವಿಶ್ವದ ಅನೇಕ ಆಟಗಾರರು ವಿಶ್ವ ತಾಯಂದಿರ ದಿನವನ್ನು ವಿಶಿಷ್ಟವಾಗಿ ಆಚರಿಸಿದ್ದಾರೆ.

ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್, ರಿಷಬ್ ಪಂತ್, ಸ್ಟೀವ್ ಸ್ಮಿತ್ ಸೇರಿದಂತೆ ಅನೇಕ ಆಟಗಾರರು ತಮ್ಮ ತಾಯಿಯ ಜತೆಗಿನ ಚಿತ್ರಗಳನ್ನು ಹಾಕಿ ಶುಭ ಹಾರೈಸಿದ್ದಾರೆ.

ಅಮ್ಮಂದಿರ ದಿನಾಚರಣೆಯಲ್ಲಿ ವಿಶ್ವದೆಲ್ಲೆಡೆ ಪ್ರತಿ ವರ್ಷ ಮೇ ತಿಂಗಳ ಎರಡನೇ ಭಾನುವಾರದಂದು ಆಚರಿಸಲಾಗುತ್ತದೆ. ವಿಶ್ವದ ಎಲ್ಲಾ ತಾಯಂದಿರಿಗೆ ಈ ದಿನ ಅರ್ಪಿತವಾಗಿದೆ. ಭಾರತ ಹಾಗೂ ವಿದೇಶಿ ಕ್ರಿಕೆಟರ್ಸ್ ವಿಶ್ವ ಅಮ್ಮಂದಿರವನ್ನು ಆಚರಿಸಿ ಟ್ವಿಟ್ಟರ್ ಇನ್ಸ್ಟಾಗ್ರಾಮ್ ಮೂಲಕ ಶುಭ ಹಾರೈಸಿದ್ದಾರೆ.

ತಮ್ಮ ತಾಯಿಯ ಜತೆಗಿನ ಚಿತ್

ತಮ್ಮ ತಾಯಿಯ ಜತೆಗಿನ ಚಿತ್

ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್, ರಿಷಬ್ ಪಂತ್, ಸ್ಟೀವ್ ಸ್ಮಿತ್ ಸೇರಿದಂತೆ ಅನೇಕ ಆಟಗಾರರು ತಮ್ಮ ತಾಯಿಯ ಜತೆಗಿನ ಚಿತ್ರಗಳನ್ನು ಹಾಕಿ ಶುಭ ಹಾರೈಸಿದ್ದಾರೆ.

ತಾಯಿಗೆ ನನಗೆ ವಿಶ್ವ : ಸಚಿನ್

ಜಗತ್ತಿಗೆ ನೀನು ನನ್ನ ತಾಯಿಯಾಗಿರಬಹುದು. ಆದರೆ, ನನಗೆ ನೀನೆ ಜಗತ್ತು ಎಂದು ಟ್ವೀಟ್ ಮಾಡಿದ್ದಾರೆ.

ಸೆಹ್ವಾಗ್ ರಿಂದ ಶುಭಹಾರೈಕೆ

ವೀರೇಂದ್ರ ಸೆಹ್ವಾಗ್ ಅವರು ತಮ್ಮದೇ ಆದ ಶೈಲಿಯಲ್ಲಿ ಶುಭ ಹಾರೈಸಿದ್ದಾರೆ.

ರಿಷಬ್ ಪಂತ್ ರಿಂದ ಶುಭಹಾರೈಕೆ

ಯುವ ಆಟಗಾರ ರಿಷಬ್ ಪಂತ್ ಅವರು ತಮ್ಮ ತಾಯಿಯ ಜತೆ ಫೋಟೋ ಹಾಕಿ ಶುಭ ಹಾರೈಸಿದ್ದಾರೆ.

ಯುವರಾಜ್ ಸಿಂಗ್

ಆಲ್ ರೌಂಡರ್ ಯುವರಾಜ್ ಸಿಂಗ್ ಅವರು ಜನಪ್ರಿಯ ಚಿತ್ರವೊಂದನ್ನು ಹಂಚಿಕೊಂಡು ಅರ್ಥಪೂರ್ಣವಾಗಿ ಶುಭ ಹಾರೈಸಿದ್ದಾರೆ.

ಹರ್ಭಜನ್ ಸಿಂಗ್

ನನ್ನ ಇಂದಿನ ಎಲ್ಲಾ ಸಾಧನೆಗೆ ಕಾರಣರಾದ ನೀವು ಎಲ್ಲರೀತಿ ಬೆಂಬಲವಾಗಿ ನಿಂತಿದ್ದೀರಿ ಎಂದು ತಾಯಿಯನ್ನು ಹೊಗಳಿದ ಸ್ಪಿನ್ನರ್ ಹರ್ಭಜನ್ ಸಿಂಗ್.

ವೇಗಿ ಮಿಚೆಲ್ ಜಾನ್ಸನ್

ನನ್ನ ಎರಡು ಮುದ್ದಾದ ಮಕ್ಕಳ 'ತಾಯಿ' ಗೆ ನಮನ ಎಂದು ಪತ್ನಿಯನ್ನು ಹೊಗಳಿ ಶುಭ ಹಾರೈಸಿದ ಆಸ್ಟ್ರೇಲಿಯಾದ ವೇಗಿ ಮಿಚೆಲ್ ಜಾನ್ಸನ್

ಶಿಖರ್ ಧವನ್

ಆರಂಭಿಕ ಆಟಗಾರ ಶಿಖರ್ ಧವನ್ ಅವರು ತಾಯ ಜತೆಗಿನ ಫೋಟೋ ಕೊಲಾಜ್ ಹಾಕಿ ಶುಭ ಹಾರೈಸಿದ್ದಾರೆ.

ಸ್ಟೀವ್ ಸ್ಮಿತ್

ಆಸ್ಟ್ರೇಲಿಯಾದ ನಾಯಕ ಸ್ಟೀವ್ ಸ್ಮಿತ್ ಅವರು ತಾಯಿಯ ಜತೆ ಚಿತ್ರವನ್ನು ಹಂಚಿಕೊಂಡಿದ್ದಾರೆ.

ಡರೇನ್ ಸ್ಮಿತ್

ವೆಸ್ಟ್ ಇಂಡೀಸ್ ನ ಆಟಗಾರ 33 ವರ್ಷಗಳ ಕಾಲ ನನ್ನ ಎಲ್ಲಾ ಸಾಧನೆಗೆ ಕಾರಣ ನೀನೆ ಎಂದು ತಾಯಿಯ ಜತೆ ಚಿತ್ರವನ್ನು ಹಂಚಿಕೊಂಡ ಡರೇನ್ ಸ್ಮಿತ್.

ಇರ್ಫಾನ್ ಪಠಾಣ್

ಟೀಂ ಇಂಡಿಯಾದ ಆಲ್ ರೌಂಡರ್ ಇರ್ಫಾನ್ ಪಠಾಣ್ ಅವರು ತಮ್ಮ ತಾಯಿಯ ಜತೆಗಿನ ಚಿತ್ರವನ್ನು ಹಂಚಿಕೊಂಡಿದ್ದಾರೆ.

ವಿರಾಟ್ ಕೊಹ್ಲಿ

ಪ್ರಶ್ನೆಗಳ ರೂಪದಲ್ಲಿ ಅವಳು ಯಾರು ಎಂದು ಅಮ್ಮನನ್ನು ನೆನಯುವ ವಿಡಿಯೋವೊಂದನ್ನು ಹಂಚಿಕೊಂಡ ಆರ್ ಸಿಬಿ ಹಾಗೂ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
IPL 2017 : On the auspicious occasion of Mother's Day, cricketers around the world took social media to wish 'Happy Mother's Day' today (May 14).
Please Wait while comments are loading...