ಐಪಿಎಲ್ ಹರಾಜು: ಮಾರ್ಗನ್, ಸ್ಟೋಕ್ಸ್, ಇಶಾಂತ್ ಗೆ ಭರ್ಜರಿ ರೇಟ್

Posted By:
Subscribe to Oneindia Kannada

ಬೆಂಗಳೂರು, ಫೆಬ್ರವರಿ 07: ಇಂಡಿಯನ್ ಪ್ರೀಮಿಯರ್ ಲೀಗ್ ನ 10ನೇ ಆವೃತ್ತಿಯ ಹರಾಜು ಪ್ರಕ್ರಿಯೆ ಫೆಬ್ರವರಿ 20ರಂದು ಬೆಂಗಳೂರಿನಲ್ಲಿ ನಡೆಯಲಿದೆ. ಇಂಗ್ಲೆಂಡಿನ ಇಯಾನ್ ಮಾರ್ಗನ್, ಬೆನ್ ಸ್ಟೋಕ್ಸ್ ಹಾಗೂ ಭಾರತದ ವೇಗಿ ಇಶಾಂತ್ ಶರ್ಮ ಅವರಿಗೆ ಭರ್ಜರಿ ರೇಟ್ ನಿಗದಿಯಾಗಿದೆ.

ಒಟ್ಟು 7 ಆಟಗಾರರಿಗೆ 2 ಕೋಟಿ ರು ಮೂಲ ಬೆಲೆ ನಿಗದಿ ಮಾಡಲಾಗಿದೆ.ಕ್ರಿಸ್ ವೋಕ್ಸ್ , ಮಿಚೆಲ್ ಜಾನ್ಸನ್ ಹಾಗೂ ಶ್ರೀಲಂಕಾ ನಾಯಕ ಏಂಜೆಲೋ ಮ್ಯಾಥ್ಯೂಸ್, ವೇಗಿ ಪ್ಯಾಟ್ ಕಮಿನ್ಸ್ ಅವರು ಕೂಡಾ 2 ಕೋಟಿ ರು ಪಟ್ಟಿಯಲ್ಲಿದ್ದಾರೆ.[ಯಾವ ತಂಡದಲ್ಲಿ ಯಾವ ಆಟಗಾರರು ಉಳಿದುಕೊಂಡಿದ್ದಾರೆ?]

ಬಹು ನಿರೀಕ್ಷಿತ ಟ್ವೆಂಟಿ20 ಟೂರ್ನಮೆಂಟ್ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನ 10 ನೇ ಆವೃತ್ತಿ ಏಪ್ರಿಲ್ 5 ರಿಂದ ಆರಂಭವಾಗಲಿದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಇತ್ತೀಚೆಗೆ ಪ್ರಕಟಿಸಿದೆ. [ಐಪಿಎಲ್ 2017: ತಂಡದಿಂದ ಹೊರಕ್ಕೆ ಹೋದ ಆಟಗಾರರು]

ನ್ಯಾ. ಲೋಧಾ ಸಮಿತಿ ಶಿಫಾರಸುಗಳ ಅನ್ವಯ ಬಿಸಿಸಿಐನಲ್ಲಿ ಬದಲಾವಣೆಗಳಾಗುತ್ತಿದ್ದು, ಇದರ ಪರಿಣಾಮ ಐಪಿಎಲ್ ಮೇಲೂ ಆಗಲಿದೆ. ಯಾವ ಯಾವ ಆಟಗಾರರಿಗೆ ಯಾವ ಯಾವ ಬೆಲೆ ನಿಗದಿಯಾಗಿದೆ ಎಂಭುದನ್ನು ಮುಂದೆ ಓದಿ...

2017ರ ಆವೃತ್ತಿಯ ಹರಾಜು ಪ್ರಕ್ರಿಯೆ

2017ರ ಆವೃತ್ತಿಯ ಹರಾಜು ಪ್ರಕ್ರಿಯೆ

2017ರ ಆವೃತ್ತಿಯ ಹರಾಜು ಪ್ರಕ್ರಿಯೆಯಲ್ಲಿ ಸರಿ ಸುಮಾರು 143.3 ಕೋಟಿ ರು ಹರಾಜಿನಲ್ಲಿ ಬಿಕರಿಯಾಗುವ ನಿರೀಕ್ಷೆಯಿದೆ. ಪ್ರತಿ ತಂಡದಲ್ಲಿ ವಿದೇಶಿ ಆಟಗಾರರು ಸೇರಿದಂತೆ 27 ಆಟಗಾರರು ಇರಲಿದ್ದಾರೆ. ಒಟ್ಟಾರೆ, 28 ಮಂದಿ ವಿದೇಶಿ ಆಟಗಾರರು ಸೇರಿ 76 ಆಟಗಾರರು ಹರಾಜಿಗೆ ಒಳಪಡುತ್ತಿದ್ದಾರೆ.

1.5 ಕೋಟಿ ರು ನಿಗದಿಯಾಗಿರುವ ಆಟಗಾರರು

1.5 ಕೋಟಿ ರು ನಿಗದಿಯಾಗಿರುವ ಆಟಗಾರರು

1.5 ಕೋಟಿ ರು ನಿಗದಿಯಾಗಿರುವ ಆಟಗಾರರ ಪೈಕಿ ವೆಸ್ಟ್ ಇಂಡೀಸ್ ನ ಜಾಸನ್ ಹೋಲ್ಡರ್(ಚಿತ್ರದಲ್ಲಿರುವವರು), ದಕ್ಷಿಣ ಆಫ್ರಿಕಾದ ಕೈಲಿ ಅಬಾಟ್, ಆಸ್ಟ್ರೇಲಿಯಾದ ನಾಥನ್ ಲಿಯಾನ್ ಹಾಗೂ ಬ್ರಾಡ್ ಹಡ್ಡಿನ್, ನ್ಯೂಜಿಲೆಂಡ್ ನ ಟ್ರೆಂಟ್ ಬೌಲ್ಟ್ ಹಾಗು ಇಂಗ್ಲೆಂಡಿನ ಜಾನಿ ಬೈರ್ಸ್ಟೊ.

ಈ ವಾರಾಂತ್ಯಕ್ಕೆ ಹೆಚ್ಚಿನ ಮಾಹಿತಿ ಲಭಿಸಲಿದೆ

ಈ ವಾರಾಂತ್ಯಕ್ಕೆ ಹೆಚ್ಚಿನ ಮಾಹಿತಿ ಲಭಿಸಲಿದೆ

799 ಆಟಗಾರರು ಹರಾಜಿಗೆ ಲಭ್ಯ. ಆದರೆ, ಹರಾಜಿಗೂ ಮುನ್ನ ಫ್ರಾಂಚೈಸಿಗಳು ತಮ್ಮ ಆಯ್ಕೆಯ ಪಟ್ಟಿಯನ್ನು ಬಿಸಿಸಿಐಗೆ ತಿಳಿಸಬೇಕಿದೆ. ಈ ವಾರಾಂತ್ಯಕ್ಕೆ ಹೆಚ್ಚಿನ ಮಾಹಿತಿ ಲಭಿಸಲಿದೆ. 799 ಆಟಗಾರರಲ್ಲಿ ಎಲ್ಲರೂ ಮೊದಲ ಬಾರಿಗೆ ಐಪಿಎಲ್ ಆಡುವ ಅವಕಾಶ ಪಡೆಯಲು ಸಿದ್ಧರಾಗಿರುವ ಆಟಗಾರರಾಗಿದ್ದಾರೆ.

639 ಹೊಸ ಆಟಗಾರರು

639 ಹೊಸ ಆಟಗಾರರು

ಬಾಂಗ್ಲಾದೇಶ ಹಾಗೂ ಪಾಕಿಸ್ತಾನ ಹೊರತುಪಡಿಸಿ 8 ರಾಷ್ಟ್ರಗಳಿಂದ 160 ಮಂದಿ ಹಳೆ ಆಟಗಾರರು ಐಪಿಎಲ್ ಪ್ರವೇಶಕ್ಕೆ ಕಾದಿದ್ದಾರೆ. ಈ ಪೈಕಿ ಭಾರತದ 639 ಮಂದಿ ಆಟಗಾರರಿದ್ದರೆ, ಉಳಿದಂತೆ ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್, ಶ್ರೀಲಂಕಾ ಹಾಗೂ ವೆಸ್ಟ್ ಇಂಡೀಸ್ ಆಟಗಾರರಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
India paceman Ishant Sharma, England's limited overs skipper Eoin Morgan and former Australia pace spearhead Mitchell Johnson are among 7 players who have listed themselves at the highest base price of Rs 2 crore (approx USD 298,000) for the Indian Premier League (IPL 10) players auction.
Please Wait while comments are loading...