ಪಂಜಾಬ್ ವಿರುದ್ಧ ಎಬಿಡಿ ಅಬ್ಬರಿಸಲು ಕಾರಣವಾಗಿದ್ದು ಆ ಕರೆ!

Posted By:
Subscribe to Oneindia Kannada

ಇಂದೋರ್, ಏಪ್ರಿಲ್ 11: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಪತ್ ಬಾಂಧವ, 360 ಡಿಗ್ರಿ ಆಟಗಾರ ಎಬಿ ಡಿ ವಿಲಿಯರ್ಸ್ ಅವರು ಪಂಜಾಬ್ ವಿರುದ್ಧದ ಪಂದ್ಯವಾಡಲು ರೆಡಿ ಇರಲಿಲ್ಲವಂತೆ. ದೈಹಿಕವಾಗಿ ಫಿಟ್ ಎನಿಸಿಕೊಂಡರೂ ದಕ್ಷಿಣ ಆಫ್ರಿಕಾದ ಆಟಗಾರನಿಗೆ ಸ್ಪೂರ್ತಿ ತುಂಬಿದ್ದು, ಭರ್ಜರಿ ಬ್ಯಾಟಿಂಗ್ ನೀಡಲು ನೆರವಾಗಿದ್ದು ಒಂದು ಫೋನ್ ಕರೆ ಎಂಬುದು ಈಗ ಬಹಿರಂಗವಾಗಿದೆ.

ಐಪಿಎಲ್ 2017: ಆರ್ ಸಿಬಿ ವೇಳಾಪಟ್ಟಿ | ಸಂಪೂರ್ಣ ವೇಳಾಪಟ್ಟಿ | ಆರ್ ಸಿಬಿ ಪಡೆ | ಗ್ಯಾಲರಿ

ಬೆನ್ನು ನೋವಿನಿಂದ ಬಳಲುತ್ತಿದ್ದ ಎಬಿ ಡಿ ವಿಲಿಯರ್ಸ್ ಅವರು ಹೋಳ್ಕರ್ ಸ್ಟೇಡಿಯಂನಲ್ಲಿ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ದರಲ್ಲಿ ವಿಶೇಷವಿತ್ತು. ಪ್ರತಿ ಹೊಡೆತದ ಹಿಂದೆ ಪ್ರೀತಿಯಿತ್ತು. ಅಫ್ ಕೋರ್ಸ್ ತಂಡಕ್ಕೆ ಸದಾಕಾಲ ಹೋರಾಡುವ ಕೆಚ್ಚೆದೆಯ ವೀರ ಎಬಿಡಿ ಅವರು ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಉತ್ತಮ ಆಟ ಪ್ರದರ್ಶಿಸಲು ಕಾರಣವಾಗಿದ್ದು ಅವರ ಪತ್ನಿ. [ಅಂಕಪಟ್ಟಿ ನೋಡಿ]

IPL 2017: AB de Villiers reveals a phone call inspired him to score 89* after self-doubt

ಗಾಯದ ಸಮಸ್ಯೆಯಿಂದ ದಕ್ಷಿಣ ಆಫ್ರಿಕಾ ಪರ ಏಕದಿನ ಸರಣಿಯನ್ನು ಆಡದೆ ಕೊಂಚ ಮಂಕಾಗಿದ್ದ ಎಬಿಡಿ ಅವರು ಅಳುಕಿನಿಂದಲೇ ಆರ್ ಬಿಸಿ ತಂಡ ಸೇರಿದ್ದರು. ಬೆನ್ನು ನೋವಿನ ಕಾರಣ ಈ ಬಾರಿ ವಿಕೆಟ್ ಕೀಪಿಂಗ್ ಮಾಡಲು ಸಾಧ್ಯವಿಲ್ಲ ಎಂದು ಮೊದಲೇ ಹೇಳಿದ್ದರು. ಆದರೆ, ಬ್ಯಾಟ್ಸ್ ಮನ್ ಆಗಿ ಕಣಕ್ಕಿಳಿಯಲು ಕೂಡಾ ಅತ್ಮವಿಶ್ವಾಸದ ಕೊರತೆ ಅನುಭವಿಸಿದ್ದರಂತೆ. [ಪಂಜಾಬ್ ಪಂದ್ಯವನ್ನು ಗೆದ್ದರೆ, ಎಬಿಡಿ ಪ್ರೇಕ್ಷಕರನ್ನು ಗೆದ್ದರು!]

ತಮ್ಮ ಸ್ಥಿತಿಯ ಬಗ್ಗೆ ಪತ್ನಿಯಲ್ಲಿ ಹೇಳಿಕೊಂಡಿದ್ದಾರೆ. ಪತ್ನಿ ಡೇನಿಯಲ್ ಅವರು ನೀಡಿದ ಸಲಹೆ, ಆತ್ಮವಿಶ್ವಾಸದ ಮಾತುಗಳು ಎಬಿಡಿ ವಿಲಿಯರ್ಸ್ ಗೆ ನೆರವಾಗಿದೆ. 46 ಎಸೆತಗಳಲ್ಲಿ 89ರನ್ ಚೆಚ್ಚಿದ ಎಬಿಡಿ 3 ಬೌಂಡರಿ, 9 ಸಿಕ್ಸರ್ ಸಿಡಿಸಿದರು.

ಪಂದ್ಯದ ನಡುವೆಯೇ ಕಾಮೆಂಟೆಟರ್ ಸಂಜಯ್ ಮಂಜೇಕ್ರರ್ ಜತೆ ಮಾತನಾಡಿದ ಎಬಿಡಿ, 'ನನ್ನ ಬಗ್ಗೆ ನನಗೇ ಆಶ್ಚರ್ಯವಾಗಿದೆ. ಇದೆಲ್ಲವೂ ಮನಸ್ಸಿಗೆ ಸಂಬಂಧಿಸಿದ್ದು. ಗಾಯಗೊಂಡ ಸಂದರ್ಭದಲ್ಲಿ ನಮ್ಮ ಬಗ್ಗೆ ನಮಗೆ ಅನುಮಾನವಿರುತ್ತದೆ. ಕಳೆದ ಕೆಲವು ದಿನಗಳಲ್ಲಿ ಇದು ನನ್ನ ಅನುಭವಕ್ಕೆ ಬಂದಿದೆ' ಎಂದು ವೀಕ್ಷಕ ವಿವರಣೆಗಾರ ಸಂಜಯ್ ಮಂಜ್ರೇಕರ್ ಅವರಿಗೆ ಎಬಿಡಿ ವಿಲಿಯರ್ಸ್ ತಿಳಿಸಿದ್ದಾರೆ.

'ನಾನು ಫೋನ್ ಮಾಡಿದ್ದ ಸಂದರ್ಭದಲ್ಲಿ ಪತ್ನಿಯು ನಿದ್ರಿಸುತ್ತಿದ್ದ ನನ್ನ ಮಗನ ಪಕ್ಕ ಮಲಗಿದ್ದಳು. ಆಕೆಯ ಸಲಹೆ ಕೇಳುತ್ತಿದ್ದಂತೆ ಕೆಲವು ನಿಮಿಷಗಳ ಬಳಿಕೆ ಕರೆಮಾಡುತ್ತೇನೆ ಎಂದು ಫೋನ್ ಬಂದ್ ಮಾಡಿದಳು. ಆನಂತರ ಕರೆ ಮಾಡಿದ ಆಕೆ, ತಾನು ನಾಳೆಯೇ ಭಾರತಕ್ಕೆ ಬರುತ್ತಿದ್ದು, ಶಾಂತವಾಗಿರುವಂತೆ ಸಲಹೆ ನೀಡಿದಳು. ಆಕೆಯ ನುಡಿಗಳು ನನಗೆ ಸ್ಪೂರ್ತಿ ನೀಡಿದವು' ಎಂದು ಹೇಳಿಕೊಂಡಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A phone call just before the game inspired Royal Challengers Bangalore's (RCB) South African superstar AB de Villiers to deliver yet another Twenty20 masterclass.
Please Wait while comments are loading...