ಐಪಿಎಲ್ 10 ರ ಸಂಭ್ರಮ, ಕ್ರಿಕೆಟ್ ದೇವರ ಜರ್ಸಿ ನಂಬರ್ 10ರ ಕಥೆ

Posted By:
Subscribe to Oneindia Kannada

ಮುಂಬೈ, ಏಪ್ರಿಲ್ 14: ಏಪ್ರಿಲ್ ಹಾಗೂ ಮೇ ತಿಂಗಳ ಬಂತೆಂದರೆ ಸಾಕು ಭಾರತದೆಲ್ಲೆಡೆ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಹಬ್ಬ ಆರಂಭವಾಗುತ್ತದೆ. ಹಣದ ಹೊಳೆ ಹರಿಸುವ ಕ್ರಿಕೆಟ್ ಲೀಗ್ ಇದಾದರೂ, ಹತ್ತು ಹಲವು ಪ್ರತಿಭೆಗಳಿಗೆ, ದಿಗ್ಗಜ ಕ್ರಿಕೆಟರ್ ಗಳಿಗೆ ಸೂಕ್ತ ವೇದಿಕೆ, ವಿದಾಯದ ರಹದಾರಿ ತೋರಿಸಿದ ಲೀಗ್ ಗೆ ಈಗ 10ರ ಸಂಭ್ರಮ.

2013ರಲ್ಲಿ ಮುಂಬೈ ಇಂಡಿಯನ್ಸ್ ಪಾಲಿಗೂ ಇಂಥದ್ದೊಂದು ಅವಿಸ್ಮರಣೀಯ ಸನ್ನಿವೇಶ ಒದಗಿತ್ತು. ಕ್ರಿಕೆಟ್ ದೇವರು ಸಚಿನ್ ಅವರ ಜರ್ಸಿ ನಂಬರ್ 10ಕ್ಕೆ ವಿದಾಯ ಹೇಳಿದ ಕ್ಷಣ ಮರೆಯುವಂತಿಲ್ಲ.[ನಿವೃತ್ತಿ ನಂತರ ಸಚಿನ್ ಸುದ್ದಿಗೋಷ್ಠಿ ಮುಖ್ಯಾಂಶ]

2008ರಿಂದ ಕ್ರಿಕೆಟ್ ಪ್ರೇಮಿಗಳನ್ನು ರಂಜಿಸುತ್ತಾ ಬಂದಿರುವ ಐಪಿಎಲ್ ನಲ್ಲಿ 2013- ಸಚಿನ್ ತೆಂಡೂಲ್ಕರ್ ಅವರ ಪಾಲಿಗೆ ಮರೆಯಲಾರದ ವರ್ಷ.

10 years of IPL: When Mumbai Indians retired Sachin Tendulkar's famous jersey No. 10

ಟೀಂ ಇಂಡಿಯಾ ಪರ 10 ಜರ್ಸಿ ಧರಿಸುತ್ತಿದ್ದ ಸಚಿನ್ ಅವರು ಮುಂಬೈ ಇಂಡಿಯನ್ಸ್ ಆಟಗಾರ, ನಾಯಕರಾಗಿ ಕೂಡಾ 10ನೇ ನಂಬರ್ ಜರ್ಸಿ ತೊಡುತ್ತಿದ್ದರು. ಐಪಿಎಲ್ ನಲ್ಲಿ 2,000ರನ್ ಪೂರೈಸಿದ ಸಚಿನ್ ಅವರು 2013ರ ವರ್ಷದಲ್ಲಿ ಐಪಿಎಲ್ ಚಾಂಪಿಯನ್ ಶಿಪ್ ಗೆದ್ದಿದ್ದಲ್ಲದೆ ಅದೇ ವರ್ಷ 200ನೇ ಟೆಸ್ಟ್ ಪಂದ್ಯವಾಡಿದ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದರು.[ತೆಂಡೂಲ್ಕರ್ ಭಾವಪೂರ್ಣ ವಿದಾಯದ ಭಾಷಣ]

ಸಚಿನ್ ಅವರ ವೃತ್ತಿ ಬದುಕು ಅಂತ್ಯವಾದ ಬಳಿಕ ಅವರು ಬಳಸುತ್ತಿದ್ದ ಜರ್ಸಿ 10 ಬೇರೊಬ್ಬರಿಗೆ ನೀಡಲು ಮನಸು ಮಾಡದ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಓನರ್ ನೀತಾ ಅಂಬಾನಿ ಅವರು, 10ನೇ ನಂಬರ್ ಜರ್ಸಿಯನ್ನು ರಿಟೈರ್ ಮಾಡಲು ನಿರ್ಧರಿಸುವುದಾಗಿ ಹೇಳಿದರು.

ಜರ್ಸಿ ವಿದಾಯಕ್ಕೆ ಅಭಿಯಾನ: ಹಾಗೆ ನೋಡಿದರೆ 2012ರಲ್ಲೇ ಈ ಅಭಿಯಾನ ಆರಂಭವಾಯಿತು. ತೆಂಡೂಲ್ಕರ್ ಅವರು ಏಕದಿನ ಕ್ರಿಕೆಟ್ ಬದುಕಿಗೆ ಗುಡ್ ಬೈ ಹೇಳಿದ ಬಳಿಕ#RetireTheJerseyNo10 ಎಂಬ ಹ್ಯಾಶ್ ಟ್ಯಾಗ್ ನೊಂದಿಗೆ ಮುಂಬೈನ ಫ್ಯಾನ್ ಕ್ಲಬ್ ಗಳು ಅಭಿಯಾನ ಆರಂಭಿಸಿದವು. ಇದಕ್ಕೆ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಕೂಡಾ ಸಮ್ಮತಿಸಿತು. ಆದರೆ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಈ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.

10 years of IPL: When Mumbai Indians retired Sachin Tendulkar's famous jersey No. 10

ಸಾಮಾನ್ಯವಾಗಿ ಈ ರೀತಿ ಕ್ಲಾಸಿಕ್ ಆಟಗಾರರ ಜರ್ಸಿಗೆ ವಿದಾಯ ಹೇಳುವ ಪದ್ಧತಿ ಫುಟ್ಬಾಲ್ ಜಗತ್ತಿನಲ್ಲಿ ಕಾಣಬಹುದು. ಕ್ರಿಕೆಟ್ ನಲ್ಲಿ ಹೊಸದೊಂದು ಆಧ್ಯಾಯಕ್ಕೆ ಮುಂಬೈ ಇಂಡಿಯನ್ಸ್ ಮುನ್ನುಡಿ ಹಾಡಿದ್ದು, ಸಚಿನ್ ಅಭಿಮಾನಿಗಳಿಗೂ ಇದು ಸಮ್ಮತವಾಗಿದೆ.[ಮುಂಬೈ ಇಂಡಿಯನ್ಸ್ ವೇಳಾಪಟ್ಟಿ]
ತೆಂಡೂಲ್ಕರ್ ಜರ್ನಿ: ಐಪಿಎಲ್ ನಲ್ಲಿ 6 ಆವೃತ್ತಿಯಲ್ಲಿ 2008 ರಿಂದ 2013ರ ತನಕ ಆಡಿದರು. 2010ರಲ್ಲಿ ಒಟ್ಟಾರೆ 618ರನ್ ಚೆಚ್ಚಿ ದಾಖಲೆ ಬರೆದಿದ್ದರು. ಆರೆಂಜ್ ಕ್ಯಾಪ್, ಉತ್ತಮ ನಾಯಕ ಪ್ರಶಸ್ತಿಗಳನ್ನು ಬಾಚಿಕೊಂಡರು.

2013ರಲ್ಲಿ ಐಪಿಎಲ್ ಹಾಗೂ ಚಾಂಪಿಯನ್ಸ್ ಲೀಗ್ ಟಿ20 ಪ್ರಶಸ್ತಿ ಗೆದ್ದರು. ಮುಂಬೈ ಇಂಡಿಯನ್ಸ್ ಪರ ಸಿಎಲ್ ಟಿ20ಯಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಫಿರೋಶ್ ಶಾ ಕೋಟ್ಲಾದಲ್ಲಿ ತಮ್ಮ ಕೊನೆ ಪಂದ್ಯವಾಡಿದರು. ಆ ಪಂದ್ಯದಲ್ಲಿ 15ರನ್ ಗಳಿಸಿದ ಸಚಿನ್ ಅವರು ಈಗಲೂ ಮುಂಬೈ ಇಂಡಿಯನ್ಸ್ ತಂಡದ ಜತೆ ನಿಕಟ ಸಂಬಂಧ ಹೊಂದಿದ್ದಾರೆ. ಐಕಾನ್ ಆಟಗಾರನಾಗಿ ಕಾಣಿಸಿಕೊಂಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
As the Indian Premier League (IPL) is in its 10th edition this year, some of the moments in the cash-rich Twenty20 tournament are unforgettable. And Mumbai Indians' (MI) great gesture in 2013 has been first in cricket world and special.
Please Wait while comments are loading...