ಇರ್ಫಾನ್ ಪಠಾಣ್ ಬೆಂಚ್ ಕಾಯುವಂತೆ ಮಾಡಿದ ಧೋನಿ?

By: ಕ್ರಿಕೆಟ್ ಡೆಸ್ಕ್
Subscribe to Oneindia Kannada

ಪುಣೆ, ಮೇ 09: ಒಂದು ಕಾಲದಲ್ಲಿ ಟೀಂ ಇಂಡಿಯಾದ ಆಲ್ ರೌಂಡರ್ ಆಗಿ ಮಿಂಚಿದ್ದ ಬರೋಡಾ ಎಕ್ಸ್ ಪ್ರೆಸ್ ಇರ್ಫಾನ್ ಪಠಾಣ್ ಅವರಿಗೆ ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 9 ನಲ್ಲಿ ರೈಸರ್ಸ್ ಸೂಪರ್ ಜೈಂಟ್ಸ್ ತಂಡದ ಬೆಂಚ್ ಕಾಯುವ ಪರಿಸ್ಥತಿ ಎದುರಾಗಿದೆ.

ಐಪಿಎಲ್ 2016: ವೇಳಾಪಟ್ಟಿ | ಯಾವ ತಂಡದಲ್ಲಿ ಯಾವ ಆಟಗಾರರು | ಗ್ಯಾಲರಿ

ಹೌದು, ಐಪಿಎಲ್ 2016 ಟೂರ್ನಿಯಲ್ಲಿ 1 ಕೋಟಿ ರು ಗಳಿಗೆ ರೈಸರ್ಸ್ ಸೂಪರ್ ಜೈಂಟ್ಸ್ ತಂಡಕ್ಕೆ ಸೇಲ್ ಆಗಿರುವ ಪಠಾಣ್ ಅವರು ಆಡುವ 11 ರ ಬಳಗದಲ್ಲಿ ಸ್ಥಾನಕ್ಕಾಗಿ ಏನೆಲ್ಲ ಕಸರತ್ತು ನಡೆಸಿದರು ನಾಯಕ ಮಹೇಂದ್ರ ಸಿಂಗ್ ಧೋನಿ ಅವರಿಗೆ ಅವಕಾಶಗಳನ್ನು ನೀಡಲು ಮನಸ್ಸು ಮಾಡುತ್ತಿಲ್ಲ.[ಇರ್ಫಾನ್ ಪಠಾಣ್- ಸಫಾ ಶಾದಿ ಮುಬಾರಕ್!]

ಈಗಾಗಲೇ 14 ಪಂದ್ಯಗಳಲ್ಲಿ 10 ಪಂದ್ಯಗಳನ್ನು ಆಡಿರುವ ಪುಣೆ ತಂಡದಲ್ಲಿ ಇರ್ಫಾನ್ ಪಠಾಣ್ ಅವರಿಗೆ ಕ್ಯಾಪ್ಟನ್ ಧೋನಿ ಕೇವಲ ಒಂದೇ ಒಂದು ಪಂದ್ಯದಲ್ಲಿ ಅವಕಾಶ ನೀಡಿದ್ದಾರೆ. ಆ ಪಂದ್ಯದಲ್ಲಿ ಅವರಿಗೆ ಕೇವಲ ಒಂದು ಓವರ್ ಮಾತ್ರ ಬೌಲಿಂಗ್ ಮಾಡಲು ಅವಕಾಶ ಸಿಕ್ಕಿತ್ತು. ಅದನ್ನು ಬಿಟ್ಟರೆ ಇನ್ನುಳಿದ ಪಂದ್ಯಗಳಿಗೆ ಪಠಾಣ್ ಅವರನ್ನು ತಂಡದಿಂದ ದೂರವಿಟ್ಟಿದ್ದಾರೆ.

ಈವರೆಗೆ ಐಪಿಎಲ್ ಟೂರ್ನಿಗಳಲ್ಲಿ ಯಶಸ್ವಿಯಾಗಿದ್ದ ಸ್ಪಿನ್ ಮಾಂತ್ರಿಕ ರವಿಚಂದ್ರನ್ ಅಶ್ವಿನ್ ಅವರ ಈ ಬಾರಿಯ ಐಪಿಎಲ್ ನಲ್ಲಿ ಸ್ಪಿನ್ ಜಾದು ನಡೆಯುತ್ತಿಲ್ಲ ಆದರೂ ಧೋನಿ ಅವರು ಆರ್ ಅಶ್ವಿನ್ ಅವರನ್ನು ತಂಡದಲ್ಲಿ ಉಳಿಸಿಕೊಂಡಿರುವುದು ಏಕೆ ಎನ್ನುವುದು ಪ್ರೇಕ್ಷಕರಲ್ಲಿ ಪ್ರಶ್ನೆ ಕಾಡುತ್ತಿದೆ.

Why veteran all-rounder Irfan Pathan is not playing for RPS

2007 ರ ವಿಶ್ವ ಟಿ20 ಕ್ರಿಕೆಟ್ ನಲ್ಲಿ ಮಿಂಚಿದ್ದ ಪಠಾಣ್ ಅವರನ್ನು ಒಂದು ಕಾಲದಲ್ಲಿ ಟೀಂ ಇಂಡಿಯಾದ ಬೆಸ್ಟ್ ಆಲ್ ರೌಂಡರ್ ಎಂದು ಕರೆಯಲಾಗಿತ್ತು. ಆದರೆ ಐಪಿಎಲ್ 2016 ನಲ್ಲಿ ಅವರ ಸ್ಲೋ ಮಿಡಿಯಂ ಫಾಸ್ಟ್ ಬೌಲರ್ ಅವರಿಗೆ ಆಡುವ 11 ರ ಬಳಗದಲ್ಲಿ ಅವಕಾಶ ಸಿಗದಿರುವುದಕ್ಕೆ ವಾಟರ್ ಬಾಯ್ ಆಗಿ ಬೆಂಚ್ ಕಾಯುತ್ತಿದ್ದಾರೆ.[ಧೋನಿ ಪಡೆ ಟೂರ್ನಿಯಿಂದ ಔಟ್ ಮಾಡಿದ ಕೊಹ್ಲಿ!]

2004 ರಲ್ಲಿ ಮೊದಲ ಬಾರಿಗೆ ಟೀಂ ಇಂಡಿಯಾದ ಜರ್ಸಿ ತೋಟ್ಟಿದ್ದ ಇರ್ಫಾನ್ ಪಠಾಣ್ ಅತೀ ವೇಗದಲ್ಲಿ 1000 ರನ್ ಹಾಗೂ 100 ವಿಕೆಟ್ ಪಡೆದ ಆಟಗಾರ ಎನಿಸಿಕೊಂಡಿದ್ದಾರೆ. 2015-16 ರಲ್ಲಿ ನಡೆದ ಸೈಯದ್ ಮುಸ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿಯಲ್ಲಿ ಆಡಿದ 10 ಪಂದ್ಯಗಳಲ್ಲಿ 17 ವಿಕೆಟ್ ಪಡೆದು ಉತ್ತಮ ಪ್ರದರ್ಶನ ನೀಡಿರುವ ಪಠಾಣ್ ಅವರನ್ನು ತಂಡಕ್ಕೆ ಆಯ್ಕೆ ಮಾಡಲು ಹಿಂಜರಿಯುತ್ತಿರುವ ಪುಣೆ ತಂಡದ ನಾಯಕ ದೋನಿ ಅವರ ಈ ನಡೆ ಅಭಿಮಾನಿಗಳಲ್ಲಿ ಕೆಲ ಅನುಮಾಗಳು ಉದ್ಭವಿಸಿವೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Why veteran all-rounder Irfan Pathan not playing for Rising Pune Supergaints, So far he bowled only a single over in the game he played and conceded only 7 runs, Is MS Dhoni deliberately ignoring him?
Please Wait while comments are loading...