ಕೊಹ್ಲಿಯಿಂದ 4ನೇ ಶತಕ, 4 ಸಾವಿರ ರನ್ ಸರದಾರ!

Posted By:
Subscribe to Oneindia Kannada

ಬೆಂಗಳೂರು, ಮೇ 19: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ ಸಿಬಿ) ತಂಡದ ನಾಯಕ ವಿರಾಟ್ ಕೊಹ್ಲಿ ಬ್ಯಾಟ್ ಬೀಸಿದರೆ ಸಾಕು ರೆಕಾರ್ಡ್ ಗಳು ನುಚ್ಚುನೂರಾಗುತ್ತವೆ ಎಂಬುದು ಉತ್ಪ್ರೇಕ್ಷೆಯ ಮಾತಲ್ಲ. ಐಪಿಎಲ್ ಇತಿಹಾಸದಲ್ಲಿ ಕಂಡು ಕೇಳರಿಯದಂಥ ಲಯದಲ್ಲಿರುವ ಕೊಹ್ಲಿ ಅವರು ಟಿ20 ಪಂದ್ಯಗಳ 'ಕಿಂಗ್' ಎನಿಸಿಕೊಂಡಿದ್ದಾರೆ.

ಐಪಿಎಲ್ 2016: ವೇಳಾಪಟ್ಟಿ | ಯಾವ ತಂಡದಲ್ಲಿ ಯಾವ ಆಟಗಾರರು | ಗ್ಯಾಲರಿ

ಬುಧವಾರದಂದು ಪಂಜಾಬ್ ವಿರುದ್ಧದ ಪಂದ್ಯದಲ್ಲಿ ನೋವಿನ ನಡುವೆಯೂ ತಂಡವನ್ನು ಮುನ್ನಡೆಸಿ, ದಾಖಲೆ ಬರೆದು, ಪ್ರೇಕ್ಷಕರನ್ನು ರಂಜಿಸಿ ಪರ್ಫೆಕ್ಟ್ ಶೋ ನೀಡಿದ್ದಾರೆ. [ಕೊಹ್ಲಿಯನ್ನು ಬೆಚ್ಚಿಬೀಳಿಸಬಲ್ಲ ಬೌಲರ್ ಯಾರು?]

ಪಂಜಾಬ್ ಬೌಲರ್ಸ್ ಗಳ ಎಸೆತಗಳನ್ನು ಲೀಲಾಜಾಲವಾಗಿ ಎದುರಿಸಿ 49 ಎಸೆತಗಳಲ್ಲಿ 147ರನ್ ಚೆಚ್ಚಿದ ಕೊಹ್ಲಿ ಬ್ಯಾಟಿನಿಂದ 12 ಬೌಂಡರಿ ಹಾಗೂ 8 ಸಿಕ್ಸ್ ಸಿಡಿಯಿತು. ಗೇಲ್ ಜತೆಗೂಡಿ 66 ಎಸೆತಗಳಲ್ಲಿ ಬರೋಬ್ಬರಿ 147 ರನ್ ಗಳನ್ನು ಕಲೆ ಹಾಕಿ, ಗೆಲುವಿನ ಹಾದಿಗೆ ತಂಡವನ್ನು ಕೊಂಡೊಯ್ದರು.

IPL 2016: Sensational Virat Kohli smashes fourth ton with seven stitches in palm

ಐಪಿಎಲ್ ನಲ್ಲಿ ವಿರಾಟ್ ಕೊಹ್ಲಿ ದಾಖಲೆಗಳು:
* ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಅತ್ಯಧಿಕ ರನ್ ಸ್ಕೋರರ್(9 ಸೀಸನ್ ಸೇರಿ) : 4002ರನ್.
* ಐಪಿಎಲ್ ನಲ್ಲಿ ಅತಿ ಹೆಚ್ಚು ಚೆಂಡುಗಳನ್ನು ಎದುರಿಸಿದ ಆಟಗಾರ : 3069
* ಒಂದೇ ಸೀಸನ್ ನಲ್ಲೇ ಅತಿ ಹೆಚ್ಚು ಶತಕ ಸಿಡಿಸಿದ ಆಟಗಾರ : 4
* ಸೀಸನ್ ವೊಂದರಲ್ಲಿ ಅತಿ ಹೆಚ್ಚು 50 ಪ್ಲಸ್ ರನ್ ಗಳಿಕೆ: 9
* ಐಪಿಎಲ್ ಇತಿಹಾಸದಲ್ಲಿ ಎರಡನೇ ಅತಿ ಹೆಚ್ಚು ಶತಕ ಗಳಿಕೆ: 4
* ಐಪಿಎಲ್ ನಲ್ಲಿ ಅತ್ಯಧಿಕ ರನ್ ಜೊತೆಯಾಟ : 2 ಬಾರಿ
* ಅತ್ಯಂತ ವೇಗದ ಶತಕ ಗಳಿಕೆಯಲ್ಲಿ 10ನೇ ಸ್ಥಾನ : 47 ಎಸೆತಗಳು
* 15 ಓವರ್ ಗಳ ಪಂದ್ಯದಲ್ಲೂ ಶತಕ ಗಳಿಕೆ
* ಐಪಿಎಲ್ ಸೀಸನ್ ವೊಂದರಲ್ಲಿ 800 ಪ್ಲಸ್ ರನ್ ಗಳಿಕೆ: 13 ಪಂದ್ಯಗಳಿಂದ 865ರನ್

-
-
ದಾಖಲೆಗಳ ಸರದಾರ ವಿರಾಟ್ ಕೊಹ್ಲಿ ಆರ್ಭಟ

ದಾಖಲೆಗಳ ಸರದಾರ ವಿರಾಟ್ ಕೊಹ್ಲಿ ಆರ್ಭಟ

-
-
-

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Royal Challengers Bangalore skipper Virat Kohli smashed yet another century in the ongoing Indian Premier League, this time against Kings XI Punjab on Wednesday night at the Chinnaswamy Stadium, Bengaluru.
Please Wait while comments are loading...