ಎಬಿಡಿ- ಕೊಹ್ಲಿ ನಿರ್ಮಿಸಿದ ಹೊಸ ದಾಖಲೆಗಳತ್ತ ಒಂದು ನೋಟ

Posted By:
Subscribe to Oneindia Kannada

ಬೆಂಗಳೂರು, ಮೇ 15: ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರನ್ ಮಳೆಯ ಅಬ್ಬರದಲ್ಲಿ ದಾಖಲೆಗಳು ಕೊಚ್ಚಿ ಹೋಯಿತು. ಗುಜರಾತ್ ಲಯನ್ಸ್ ಬೌಲರ್ ಗಳನ್ನು ಚೆಂಡಾಡಿದ ಕೊಹ್ಲಿ ಹಾಗೂ ಎಬಿಡಿ ಸ್ಫೋಟಕ ಬ್ಯಾಟಿಂಗ್ ಆರ್ಭಟಕ್ಕೆ ಪ್ರೇಕ್ಷಕರು ಮನಸೋತರು.

ಐಪಿಎಲ್ 2016: ವೇಳಾಪಟ್ಟಿ | ಯಾವ ತಂಡದಲ್ಲಿ ಯಾವ ಆಟಗಾರರು | ಗ್ಯಾಲರಿ

ಕ್ರಿಸ್ ಗೇಲ್ ಆಟ ನೋಡಲು ಬಂದಿದ್ದ ಪ್ರೇಕ್ಷಕರಿಗೆ ದಕ್ಷಿಣ ಆಫ್ರಿಕಾದ ಸ್ಪೋಟಕ ಬ್ಯಾಟ್ಸ್​ಮನ್ ಎಬಿಡಿ ವಿಲಿಯರ್ಸ್ 129 ರನ್( 52 ಎಸೆತಗಳು, 10X4, 12X6) ಹಾಗೂ ನಾಯಕ ವಿರಾಟ್ ಕೊಹ್ಲಿ 109 ರನ್(55 ಎಸೆತ, 5X4, 8X6) ದಾಖಲೆಯ ಶತಕದಾಟ ರಂಜನೆ ನೀಡಿತು. [ಪಂದ್ಯದ ಸ್ಕೋರ್ ಕಾರ್ಡ್]

IPL 2016, Virat Kohli sets new record with 3rd century

ಗುಜರಾತ್ ಲಯನ್ಸ್ ತಂಡವನ್ನು 144 ರನ್​ಗಳಿಂದ ಮಣಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಈಗ ಪ್ಲೇ ಆಫ್ ಆಸೆ ಚಿಗುರಿದೆ. [ಅಂಕ ಪಟ್ಟಿ]

ನುಚ್ಚುನೂರಾದ ದಾಖಲೆಗಳು:

ಐಪಿಎಲ್ 2016ರಲಿ ಕೊಹ್ಲಿ ಶತಕಗಳು
* ಅಜೇಯ 100: vs ಗುಜರಾತ್ ಲಯನ್ಸ್ , ರಾಜ್ ಕೋಟ್ (ಏಪ್ರಿಲ್ 24)
* ಅಜೇಯ 108: vs ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ , ಬೆಂಗಳೂರು(ಮೇ 7)
* 109 : vs ಗುಜರಾತ್, ಬೆಂಗಳೂರು (ಮೇ 14)

[ಕೊಹ್ಲಿ ನಾಯಕನಾಗಲು ಇದು ಸಕಾಲವಲ್ಲ : ಗವಾಸ್ಕರ್]

* ಆರ್​ಸಿಬಿ 144 ರನ್​ಗಳಿಂದ ಗೆದ್ದು ಐಪಿಎಲ್ ಇತಿಹಾಸ ದಲ್ಲಿ ಅತಿದೊಡ್ಡ ಗೆಲುವಿನ ದಾಖಲೆ ಬರೆಯಿತು.
* 2008ರಲ್ಲಿ ಆರ್​ಸಿಬಿ ತಂಡವೇ ಕೆಕೆಆರ್ ವಿರುದ್ಧ 140 ರನ್​ನಿಂದ ಸೋತಿದ್ದು ಹಿಂದಿನ ದಾಖಲೆ.

* ವಿರಾಟ್ ಕೊಹ್ಲಿ ಒಂದೇ ಐಪಿಎಲ್ ಆವೃತ್ತಿಯಲ್ಲಿ ಬರೋಬ್ಬರಿ 3 ಶತಕ ಸಿಡಿಸಿದ ಮೊದಲ ಬ್ಯಾಟ್ಸ್​ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಗೇಲ್ 2 ಶತಕ ಸಿಡಿಸಿದ್ದು ಹಿಂದಿನ ದಾಖಲೆ. [ಫೈನಲಿಗೆ ಆನ್ ಲೈನ್ ಟಿಕೆಟ್ ಬುಕ್ಕಿಂಗ್ ಶುರು]

* ಆರ್​ಸಿಬಿ (248) ಐಪಿಎಲ್ ಇತಿಹಾಸದ 2ನೇ ಗರಿಷ್ಠ ಮೊತ್ತ ದಾಖಲಿಸಿತು. 2013ರಲ್ಲಿ ಪುಣೆ ವಾರಿಯರ್ಸ್ ವಿರುದ್ಧ ಆರ್​ಸಿಬಿ ತಂಡವೇ ಬಾರಿಸಿದ 263 ರನ್ ಟಾಪ್ ಸ್ಕೋರ್.

-
-
-
ಕೊಹ್ಲಿ ನಿರ್ಮಿಸಿದ ಹೊಸ ದಾಖಲೆಗಳತ್ತ ಒಂದು ನೋಟ

ಕೊಹ್ಲಿ ನಿರ್ಮಿಸಿದ ಹೊಸ ದಾಖಲೆಗಳತ್ತ ಒಂದು ನೋಟ

-
-
-
-
-
-
-
-
-
-
-
-
-
-
-
-
-
ಕೊಹ್ಲಿ ನಿರ್ಮಿಸಿದ ಹೊಸ ದಾಖಲೆಗಳತ್ತ ಒಂದು ನೋಟ

ಕೊಹ್ಲಿ ನಿರ್ಮಿಸಿದ ಹೊಸ ದಾಖಲೆಗಳತ್ತ ಒಂದು ನೋಟ

ಕೊಹ್ಲಿ ನಿರ್ಮಿಸಿದ ಹೊಸ ದಾಖಲೆಗಳತ್ತ ಒಂದು ನೋಟ
-
-
-
-
-
-
-
-
-
-
-
-
-

* ಎಬಿಡಿ ವಿಲಿಯರ್ಸ್ ಐಪಿಎಲ್​ನಲ್ಲಿ ತಮ್ಮ 3ನೇ ಶತಕ ಪೂರೈಸಿದರು. ಜತೆಗೆ 3 ಸಾವಿರ ರನ್ ಪೂರೈಸಿದ 3ನೇ ವಿದೇಶಿ ಮತ್ತು ಒಟ್ಟಾರೆ 9ನೇ ಬ್ಯಾಟ್ಸ್​ಮನ್ ಎನಿಸಿದರು.

* ಐಪಿಎಲ್ ಇತಿಹಾಸದಲ್ಲೇ ಮೊಟ್ಟಮೊದಲ ಬಾರಿಗೆ ಹಾಗೂ ಒಟ್ಟಾರೆ ಟಿ20 ಕ್ರಿಕೆಟ್​ನಲ್ಲಿ 2ನೇ ಸಲ ಪಂದ್ಯವೊಂದರಲ್ಲಿ 2 ಶತಕ ಮೂಡಿಬಂತು. [ಆರ್ ಸಿಬಿ ಸೋಲಿಗೆ ಬೌಲಿಂಗ್ ಕಾರಣವಲ್ಲ: ಕೆಎಲ್ ರಾಹುಲ್]

* ಗ್ಲೌಸ್ಟೆರ್​ಶೈರ್ ತಂಡದ ಕೆವಿನ್ ಓಬ್ರಿಯಾನ್(119) ಮತ್ತು ಹಮಿಶ್ ಮಾರ್ಷಲ್ (102) 2011ರಲ್ಲಿ ಫ್ರೆಂಡ್ಸ್​ಲೈಫ್ ಟಿ20ಯಲ್ಲಿ ಮಿಡ್ಲ್​ಸೆಕ್ಸ್ ವಿರುದ್ಧ ಪಂದ್ಯದಲ್ಲಿ ಶತಕ ಬಾರಿಸಿದ್ದರು.

* ಟಿ 20 ಜೊತೆಯಾಟ ದಾಖಲೆ, 98 ಎಸೆತಗಳಲ್ಲಿ 229ರನ್ ಗಳಿಕೆ.
* ಡಿವಿಲಿಯರ್ಸ್ ರಿಂದ 5ನೇ ಅತ್ಯಂತ ವೇಗದ ಶತಕ ದಾಖಲೆ.
* ಡಿವಿಲಿಯರ್ಸ್ ರಿಂದ ಒಂದು ಇನ್ನಿಂಗ್ಸ್ ನಲ್ಲಿ ಅತಿ ಹೆಚ್ಚು ಸಿಕ್ಸರ್ (12).

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Royal Challengers Bangalore (RCB) captain Virat Kohli set a new batting record in the Indian Premier League (IPL) here today (May 14)
Please Wait while comments are loading...