ಧೋನಿ ಪಡೆ ಟೂರ್ನಿಯಿಂದ ಔಟ್ ಮಾಡಿದ ಕೊಹ್ಲಿ!

Posted By:
Subscribe to Oneindia Kannada

ಬೆಂಗಳೂರು, ಮೇ 08: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಅವರು ಪುಣೆ ವಿರುದ್ಧ ಪಂದ್ಯ ಗೆಲ್ಲಿಸಿದ್ದಲ್ಲದೆ, ಹಲವು ದಾಖಲೆ ಮುರಿದರು. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪುಣೆ ತಂಡ ಸೋಲುತ್ತಿದ್ದಂತೆ ಐಪಿಎಲ್ 9ರ ಟೂರ್ನಿಯಿಂದ ಬಹುತೇಕ ಔಟ್ ಆಗುವ ಮುನ್ಸೂಚನೆಯ ಕಾರ್ಮೋಡಕ್ಕೆ ಸಿಲುಕಿದೆ.

ಐಪಿಎಲ್ 2016: ವೇಳಾಪಟ್ಟಿ | ಯಾವ ತಂಡದಲ್ಲಿ ಯಾವ ಆಟಗಾರರು | ಗ್ಯಾಲರಿ

ಭಾನುವಾರದ ಪಂದ್ಯದ ನಂತರ ಅಂಕಪಟ್ಟಿಯನ್ನು ಒಮ್ಮೆ ಗಮನಿಸಿದರೆ ಎಂಎಸ್ ಧೋನಿ ನೇತೃತ್ವದ ಧೋನಿ ತಂಡದ ಮುಂದಿನ ಹಾದಿ ಕಠಿಣ ಎಂದಷ್ಟೇ ಹೇಳಬಹುದು. 10 ಪಂದ್ಯಗಳಿಂದ 6 ಅಂಕ ಕಲೆ ಹಾಕಿದೆ.

ಆರ್ ಸಿಬಿ ಕೂಡಾ 6 ಅಂಕ ಪಡೆದಿದ್ದರೂ 8 ಪಂದ್ಯಗಳನ್ನು ಮಾತ್ರ ಆಡಿದೆ. ಹೀಗಾಗಿ ಧೋನಿ ಪಡೆದ ಉಳಿದ ಆರೇಳು ಪಂದ್ಯಗಳಲ್ಲಿ ಒಂದನ್ನು ಸೋಲುವಂತಿಲ್ಲ. ಸೋತರೆ ಸೆಮಿಫೈನಲ್ ಆಸೆ ಕೈಬಿಡಬೇಕಾಗುತ್ತದೆ. [ಅಂಕ ಪಟ್ಟಿ]

ಸೆಮಿಫೈನಲ್ ತಲುಪುವ ನಾಲ್ಕು ತಂಡಗಳ ಸಾಲಿನಲ್ಲಿ ಕೋಲ್ಕತ್ತಾ, ಗುಜರಾತ್ ಮುಂಚೂಣಿಯಲ್ಲಿವೆ. ಉಳಿದಂತೆ ಡೆಲ್ಲಿ, ಹೈದರಾಬಾದ್, ಮುಂಬೈ ಹೋರಾಟ ಮುಂದುವರೆಸಿವೆ. ಪಂಜಾಬ್ ಕೊನೆ ಸ್ಥಾನದಲ್ಲಿದೆ. [ಸ್ಕೋರ್ ಕಾರ್ಡ್]

IPL 2016, Virat Kohli's record 2nd ton powers RCB to victory at home

ಕೊಹ್ಲಿ ದಾಖಲೆಗಳ ಸುರಿಮಳೆ: ರನ್ ಚೇಸ್ ನಲ್ಲಿ ಕೊಹ್ಲಿ ಬ್ಯಾಟಿಂಗ್ ನೋಡುವುದೇ ಆನಂದ. ಅಜೇಯ 108ರನ್(58 ಎಸೆತ, 8X4, 7X6) ಗಳಿಸಿದ ಕೊಹ್ಲಿ ಅವರು ಆರ್ ಸಿಬಿಗೆ 7ವಿಕೆಟ್​ಗಳ ಭರ್ಜರಿ ಗೆಲುವು ಸಿಗುವಂತೆ ಮಾಡಿದರು. ಈ ಮೂಲಕ ಆರ್ ಸಿಬಿ ಫೀಲ್ಡರ್ ಗಳ ಕಳಪೆ ಪ್ರದರ್ಶನ ಮರೆಯಾಯಿತು.
* ಐಪಿಎಲ್ 9ರಲ್ಲಿ ಎರಡನೇ ಶತಕ ದಾಖಲೆ
* ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಚೊಚ್ಚಲ ಟಿ20 ಶತಕ
* ಒಂದೇ ಆವೃತ್ತಿಯಲ್ಲಿ 2 ಶತಕ ಬಾರಿಸಿದ ಮೊದಲ ಭಾರತೀಯ ಕ್ರಿಕೆಟರ್
* ನಾಯಕನಾಗಿ ಎರಡು ಶತಕ ಸಿಡಿಸಿದ ಆಟಗಾರ.

* 3 ಬಾರಿ(2013, 2015 ಹಾಗೂ 2016) 500ಕ್ಕಿಂತ ಹೆಚ್ಚು ರನ್ ಗಳಿಸಿದ ಮೊದಲ ಬ್ಯಾಟ್ಸ್​ಮನ್
* ಮುಂಬೈ ಇಂಡಿಯನ್ಸ್ ಪರ 2 ಬಾರಿ (2010, 2011) 500ಕ್ಕಿಂತ ಹೆಚ್ಚು ರನ್ ಗಳಿಸಿದ್ದ ಸಚಿನ್ ತೆಂಡುಲ್ಕರ್ ದಾಖಲೆಯನ್ನೂ ವಿರಾಟ್ ಮುರಿದರು.

-
-
-
-
-
-
-
-
-
-
ಕೊಹ್ಲಿ ವೀರಾವೇಶಕ್ಕೆ ಪುಣೆ ತತ್ತರ

ಕೊಹ್ಲಿ ವೀರಾವೇಶಕ್ಕೆ ಪುಣೆ ತತ್ತರ

-
-
-
-

ಇದಕ್ಕೂ ಮುನ್ನ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಅವಕಾಶ ಪಡೆದ ಪುಣೆಗೆ ಆರ್ ಸಿಬಿ ಫೀಲ್ಡರ್ ಗಳ ಜೀವದಾನ ಸಿಕ್ಕಿತು. ಅಜಿಂಕ್ಯ ರಹಾನೆ 74ರನ್(48ಎಸೆತ, 8 X4, 2X6), ಸೌರಭ್ ತಿವಾರಿ 52ರನ್(39ಎಸೆತ, 9X4) ನೆರವಿನಿಂದ 6 ವಿಕೆಟ್ 191 ರನ್​ಗಳ ಮೊತ್ತ ದಾಖಲಿಸಿತು.

ಈ ಗುರಿಯನ್ನು ಆರ್ ಸಿಬಿ ತಂಡ 19.3 ಓವರ್​ಗಳಲ್ಲಿ 3 ವಿಕೆಟ್​ ಕಳೆದುಕೊಂಡು 195ರನ್ ಗಳಿಸಿ ಜಯಭೇರಿ ಬಾರಿಸಿತು. ಆರ್ ಸಿಬಿ ಪರ ಬೌಲಿಂಗ್ ನಲ್ಲಿ ಮಿಂಚಿದ ಶೇನ್ ವಾಟ್ಸನ್(24ಕ್ಕೆ 3) ಬ್ಯಾಟಿಂಗ್ ನಲ್ಲೂ ಕೊಹ್ಲಿಗೆ ಸಕತ್ ಸಾಥ್ ನೀಡಿ (36ರನ್, 13ಎಸೆತ, 5‍X4, 2X6) ಪಂದ್ಯದ ಗತಿ ಬದಲಾಯಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Captain Virat Kohli smashed his second century of the season in a magnificent batting display to lead Royal Challengers Bangalore (RCB) to a thrilling 7-wicket win over Rising Pune Supergiants (RPS) in an IPL 2016 match here today (May 7).
Please Wait while comments are loading...