'ಬ್ಯಾಟ್ ಮನ್' ಕೊಹ್ಲಿಯನ್ನು ಬೆಚ್ಚಿಬೀಳಿಸಬಲ್ಲ ಬೌಲರ್ ಯಾರು?

Posted By:
Subscribe to Oneindia Kannada

ಬೆಂಗಳೂರು, ಮೇ 18: ಕ್ರಿಕೆಟ್ ಜಗತ್ತಿನಲ್ಲಿ ವಿರಾಟ್ ಕೊಹ್ಲಿ ಕ್ರೀಸ್ ನಲ್ಲಿದ್ದಾರೆ ಎಂದರೆ ಬೌಲರ್ ಗಳು ಬೆಚ್ಚಿ ಬೀಳುವುದು ಸಹಜ. ಏಕೆಂದರೆ, ಕೊಹ್ಲಿ ಅವರ ಆರ್ಭಟ ಆ ರೀತಿ ಇದೆ. ದಾಖಲೆಗಳನ್ನು ಧೂಳಿಪಟ ಮಾಡುತ್ತಾ 'ರನ್ ಯಂತ್ರ' ಎನಿಸಿಕೊಂಡಿರುವ ಕೊಹ್ಲಿ ಅವರು ಒಬ್ಬ ಬೌಲರ್ ಗೆ ಮಾತ್ರ ಹೆದರುತ್ತಾರಂತೆ.

ಐಪಿಎಲ್ 2016: ವೇಳಾಪಟ್ಟಿ | ಯಾವ ತಂಡದಲ್ಲಿ ಯಾವ ಆಟಗಾರರು | ಗ್ಯಾಲರಿ

ಬಲಗೈ ಬ್ಯಾಟ್ಸ್ ಮನ್ ಕೊಹ್ಲಿ ಅವರು ಕ್ರಿಕೆಟ್ ನ ಎಲ್ಲಾ ಮಾದರಿಯಲ್ಲೂ ಅದ್ಭುತ ಪ್ರದರ್ಶನ ನೀಡುತ್ತಾ ವಿಶ್ವದ ಎಲ್ಲಾ ಪ್ರಮುಖ ಬೌಲರ್ ಗಳ ಎಸೆತಗಳನ್ನು ಲೀಲಾಜಾಲವಾಗಿ ಬೌಂಡರಿ, ಸಿಕ್ಸರ್ ಗೆ ಅಟ್ಟುತ್ತಿರಬಹುದು. ಆದರೆ, ಕೊಹ್ಲಿ ಕೂಡಾ ಬೆಚ್ಚಬಲ್ಲ ಎಸೆತಗಳನ್ನು ಹಾಕಬಲ್ಲಂತ ಬೌಲರ್ ಯಾರು? ಎಂಬ ಪ್ರಶ್ನೆಗೆ ಕೊಹ್ಲಿ ಉತ್ತರಿಸಿದ್ದಾರೆ.[ಕೊಹ್ಲಿ -ಎಬಿಡಿ ಜೋಡಿ ಬ್ಯಾಟ್ ಮನ್- ಸೂಪರ್ ಮ್ಯಾನ್ ಇದ್ದಂತೆ!]

IPL 2016: Virat Kohli reveals which bowler he fears the most

ಸಿಎನ್ಎನ್ ನ್ಯೂಸ್ 18 ಜೊತೆ ಮಾತನಾಡುತ್ತಾ, ಮಾಜಿ ಕ್ರಿಕೆಟರ್, ಪಾಕಿಸ್ತಾನದ ದಿಗ್ಗಜ ವಾಸೀಂ ಅಕ್ರಂ ಹೆಸರು ಹೇಳಿದರು. ಅಕ್ರಂ ಅವರು ಕುಶಲ ವೇಗಿ, ವೇಗ ಹಾಗೂ ಜಾಣ್ಮೆಯ ಬೌಲಿಂಗ್ ಮಾಡುವ ಕಲೆಗಾರ. ಬಹುಶಃ ಅವರು ಈಗ ಬೌಲಿಂಗ್ ಮಾಡುತ್ತಿದ್ದರೆ ನಾನು ಇನ್ನಷ್ಟು ಎಚ್ಚರಿಕೆಯಿಂದ ಆಡುವುದನ್ನು ಅಭ್ಯಸಿಸುತ್ತಿದ್ದೆ.[ಕೊಹ್ಲಿ ನಾಯಕನಾಗಲು ಇದು ಸಕಾಲವಲ್ಲ: ಗವಾಸ್ಕರ್]

'ನಾನು ಯಾವ ಬೌಲರ್ ಎಸೆತಕ್ಕೆ ಬೆಚ್ಚಿಬೀಳುತ್ತೇನೆ ಎಂಬ ಪ್ರಶ್ನೆಗೆ ನನ್ನ ಉತ್ತರ ವಾಸೀಂ ಅಕ್ರಂ' ಎಂದು ಹೇಳುವ ಮೂಲಕ ಕೊಹ್ಲಿ ಅಚ್ಚರಿ ಮೂಡಿಸಿದ್ದಾರೆ. ಅಲ್ಲದೆ, ಈಗ ಆಡುತ್ತಿರುವ ವೇಗಿಗಳಿಗೂ ಕುಟುಕಿದ್ದಂತಾಗಿದೆ.

502 ಏಕದಿನ ಕ್ರಿಕೆಟ್, 414 ಟೆಸ್ಟ್ ವಿಕೆಟ್ ಪಡೆದಿರುವ ಅಕ್ರಂ ಅವರು ಕೂಡಾ ಕೊಹ್ಲಿ ಬ್ಯಾಟಿಂಗ್ ಬಗ್ಗೆ ಈ ಹಿಂದೆ ಮೆಚ್ಚುಗೆ ಮಾತನ್ನಾಡಿದ್ದರು. ಕೊಹ್ಲಿ ಅವರ ಬಗ್ಗೆ ವಿಶ್ವ ಟಿ20 ಸಂದರ್ಭದಲ್ಲಿ ಮಾತನಾಡಿ, ಕೊಹ್ಲಿ ಕ್ರಿಕೆಟ್ ನ ಎಲ್ಲಾ ಮಾದರಿಯಲ್ಲಿ ಏಕರೀತಿಯಲ್ಲಿ ಆಡುತ್ತಾ ರನ್ ಗಳಿಸಬಲ್ಲ ಆಟಗಾರ, ಆತನಿಗೆ ಬೌಲ್ ಮಾಡುವುದು ನನಗೂ ಕಷ್ಟವಾಗಬಹುದೇನೋ' ಎಂದಿದ್ದರು. (ಒನ್ ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
India's run-machine, Virat Kohli, is in a form of his life and smashing records with every passing game.But speaking to CNN recently, Kohli surprised one and all when he was asked whether he feared any bowler.
Please Wait while comments are loading...