ಸಚಿನ್ ಬಗ್ಗೆ ಮಾತಾಡಿದ ಕಾಂಬ್ಳಿಗೆ ಟ್ವೀಟ್ ಟಾಂಗ್!

Posted By:
Subscribe to Oneindia Kannada

ಮುಂಬೈ, ಏಪ್ರಿಲ್ 15: ಮಹಾರಾಷ್ಟ್ರದಲ್ಲಿ ಬರಗಾಲದ ಹಿನ್ನಲೆಯಲ್ಲಿ ಇಂಡಿಯನ್ ಪ್ರಿಮಿಯರ್ ಲೀಗ್ (ಐಪಿಎಲ್) ಪಂದ್ಯಗಳನ್ನು ಸ್ಥಳಾಂತರಿಸಲು ಬಾಂಬೆ ಹೈಕೋರ್ಟ್ ನಿರ್ದೇಶಿಸಿದ್ದು ಎಲ್ಲರಿಗೂ ತಿಳಿದಿರಬಹುದು. ಬರಗಾಲದ ಬಗ್ಗೆ ಬಿಸಿ ಬಿಸಿ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲೇ ಮಾಜಿ ಕ್ರಿಕೆಟರ್ ವಿನೋದ್ ಕಾಂಬ್ಳಿ ಅವರು ಸಚಿನ್ ಬಗ್ಗೆ ಮಾತಾಡಿ, ಅಪಮಾನ ಮಾಡಿಸಿಕೊಂಡಿದ್ದಾರೆ.[ಪಾಕಿಸ್ತಾನ ತಂಡದ ಕೋಚ್ ಆಗಲು ರೆಡಿ ಎಂದ ಕಾಂಬ್ಳಿ!]

ಐಪಿಎಲ್ 2016: ವೇಳಾಪಟ್ಟಿ | ಯಾವ ತಂಡದಲ್ಲಿ ಯಾವ ಆಟಗಾರರು | ಗ್ಯಾಲರಿ

ಏಪ್ರಿಲ್ 30ರ ನಂತರದ 13ಕ್ಕೂ ಅಧಿಕ ಪಂದ್ಯಗಳನ್ನು ಮಹಾರಾಷ್ಟ್ರದಿಂದ ಸ್ಥಳಾಂತರಿಸುವಂತೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಗೆ ಬಾಂಬೆ ಹೈಕೋರ್ಟ್ ಆದೇಶ ನೀಡಿದೆ. ವಿನೋದ್ ಕಾಂಬ್ಳಿ ಅವರು ತಮ್ಮ ಬಾಲ್ಯದ ಗೆಳೆಯ ಸಚಿನ್ ತೆಂಡೂಲ್ಕರ್ ಅವರನ್ನು ಚರ್ಚೆಗೆ ಎಳೆ ತರಲು ವಿಫಲ ಯತ್ನ ನಡೆಸಿದರು.[ಕಾಂಬ್ಳಿ ಟ್ವೀಟ್ಸ್ ರಹಸ್ಯ ಬಹಿರಂಗ]

ಬರ ಪರಿಸ್ಥಿತಿ ಬಗ್ಗೆ ಮಾತನಾಡಲು ಭಾರತರತ್ನ ಸಚಿನ್ ಅವರು ಸೂಕ್ತ ವ್ಯಕ್ತಿ ಎಂದು ಟ್ವೀಟ್ ಮಾಡಿದ್ದರು. ಆದರೆ, ಸಚಿನ್ ಅವರ ಫ್ಯಾನ್ಸ್ ಗಳಿಗೆ ಕಾಂಬ್ಳಿ ಅವರ ಕಿಚಾಯಿಸುವ ಟ್ವೀಟ್ ಇಷ್ಟವಾಗಲಿಲ್ಲ. ತಕ್ಷಣವೇ ಖಾರವಾದ ಪ್ರತಿಕ್ರಿಯೆ ನೀಡಿದ್ದಾರೆ. ಅಭಿಮಾನಿಗಳಿಂದ ಬಂದಿರುವ ಟ್ವೀಟ್ ಗಳ ಕೆಲವು ಸ್ಯಾಂಪಲ್ ಮುಂದಿದೆ.[ಚಾಟಿ ಬೀಸಿದ ಬಾಂಬೆ ಹೈಕೋರ್ಟ್: ಕ್ರಿಕೆಟ್ ಬೇರೆ ಕಡೆ ಇಟ್ಕಳಿ]

ಪುಣೆ ಮತ್ತು ಮುಂಬೈನಲ್ಲಿ ಒಟ್ಟು 17 ಪಂದ್ಯಗಳು ನಡೆಯಬೇಕಾಗಿತ್ತು. 9 ಪಂದ್ಯಗಳು ಪುಣೆಯಲ್ಲಿ ಉಳಿದ 8 ಪಂದ್ಯಗಳು ಮುಂಬೈನಲ್ಲಿ ನಡೆಯಬೇಕಾಗಿತ್ತು. ಈ ಐಪಿಎಲ್ ಫೈನಲ್ ಸೇರಿದಂತೆ ಎಲ್ಲಾ ಪಂದ್ಯಗಳು ಬೇರೆ ಮೈದಾನಗಳಲ್ಲಿ ನಡೆಯಲಿವೆ.

ಪುಣೆ ಮತ್ತು ಮುಂಬೈ ತಂಡಗಳಿಂದ ಪರಿಹಾರ ಧನ

ಪುಣೆ ಮತ್ತು ಮುಂಬೈ ತಂಡಗಳಿಂದ ಪರಿಹಾರ ಧನ

ಏಪ್ರಿಲ್ 30ರ ನಂತರದ 13ಕ್ಕೂ ಅಧಿಕ ಪಂದ್ಯಗಳನ್ನು ಮಹಾರಾಷ್ಟ್ರದಿಂದ ಸ್ಥಳಾಂತರಿಸುವಂತೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಗೆ ಬಾಂಬೆ ಹೈಕೋರ್ಟ್ ಆದೇಶ ನೀಡಿದೆ. ಪುಣೆ ಮತ್ತು ಮುಂಬೈ ತಂಡಗಳು ಬರ ನಿರ್ವಹಣೆ ಉದ್ದೇಶಕ್ಕೆ ತಲಾ 5 ಕೋಟಿ ರು. ನೆರವು ನೀಡುತ್ತೇವೆ ಎಂದು ಹೇಳಿವೆ.

ವಿನೋದ್ ಕಾಂಬ್ಳಿ ಕಿಚಾಯಿಸಿದ್ದು ಏಕೆ

ವಿನೋದ್ ಕಾಂಬ್ಳಿ ಕಿಚಾಯಿಸಿದ್ದು ಏಕೆ

ಬರ ಪರಿಸ್ಥಿತಿ ಬಗ್ಗೆ ಮಾತನಾಡಲು ಭಾರತರತ್ನ ಸಚಿನ್ ಅವರು ಸೂಕ್ತ ವ್ಯಕ್ತಿ ಎಂದು ಟ್ವೀಟ್ ಮಾಡಿದ್ದರು. ಆದರೆ, ಸಚಿನ್ ಅವರ ಫ್ಯಾನ್ಸ್ ಗಳಿಗೆ ಕಾಂಬ್ಳಿ ಅವರ ಕಿಚಾಯಿಸುವ ಟ್ವೀಟ್ ಇಷ್ಟವಾಗಲಿಲ್ಲ.

ವಿನೋದ್ ಕಾಂಬ್ಳಿ ಮಾಡಿದ ಟ್ವೀಟ್ ಗೆ ಪ್ರತಿಕ್ರಿಯೆ

ವಿನೋದ್ ಕಾಂಬ್ಳಿ ಮಾಡಿದ ಟ್ವೀಟ್ ಗೆ ಖಾರವಾದ ಪ್ರತಿಕ್ರಿಯೆ ಇಲ್ಲಿದೆ. ನಿನ್ನಂಥ ದೋಸ್ತ್ ಇದ್ದರೆ ದುಷ್ಮಾನ್ ಗಳು ಏಕೆ ಬೇಕು?

ಬರದ ಬಗ್ಗೆ ಮಾತಾಡಲು ಸಚಿನ್ ಸೂಕ್ತ ವ್ಯಕ್ತಿ

ಬರದ ಬಗ್ಗೆ ಮಾತಾಡಲು ಸಚಿನ್ ಸೂಕ್ತ ವ್ಯಕ್ತಿ ಎಂದು ಟ್ವೀಟ್ ಮಾಡಿದ್ದ ವಿನೋದ್ ಕಾಂಬ್ಳಿ

ದಯವಿಟ್ಟು ನಿಮ್ಮ ನಿಲುವೇನು ತಿಳಿಸಿ ಕಾಂಬ್ಳಿ

ದಯವಿಟ್ಟು ನಿಮ್ಮ ನಿಲುವೇನು ತಿಳಿಸಿ... ಕಾಂಬ್ಳಿ ನೀವು ಏನು ದೇಣಿಗೆ ನೀಡುತ್ತಿದ್ದೀರಿ? ಎಂದು ಪ್ರಶ್ನಿಸಿದ ಅಭಿಮಾನಿಗಳು.

ಸಚಿನ್ ಹೆಸರು ಏಕೆ ದುರ್ಬಳಕೆ ಮಾಡುತ್ತೀರಿ

ಸಚಿನ್ ಹೆಸರು ಏಕೆ ದುರ್ಬಳಕೆ ಮಾಡುತ್ತೀರಿ, ನಿಮ್ಮ ವೃತ್ತಿ ಬದುಕಿನ ಕಥೆ ಎಲ್ಲರಿಗೂ ಗೊತ್ತಿದೆ.

ಪ್ರಚಾರ ಪ್ರಿಯ ಕಾಂಬ್ಳಿ

ಪ್ರಚಾರ ಪ್ರಿಯ ಕಾಂಬ್ಳಿ ಎಂದು ಟಾಂಗ್ ನೀಡಿದ ಟ್ವೀಟ್.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
At at time when the debate over holding IPL matches in drought-hit Maharashtra has made matters worse for the under-fire BCCI, former India cricketer Vinod Kambli has vaded controversy by taking a jibe at his childhood friend and Master Blaster Sachin Tendulkar.
Please Wait while comments are loading...