ಟ್ವಿಟ್ಟರ್ ಮೂಲಕ ಆರ್ ಸಿಬಿಗೆ ಶುಭಾಶಯ ಕೋರಿದ ವಿಜಯ್ ಮಲ್ಯ!

By: ಕ್ರಿಕೆಟ್ ಡೆಸ್ಕ್
Subscribe to Oneindia Kannada

ನವದೆಹಲಿ, ಮೇ 25 : ಮೊದಲನೇ ಕ್ವಾಲಿಫೈಯರ್ ಪಂದ್ಯದಲ್ಲಿ ಗುಜರಾತ್ ಲಯನ್ಸ್ ವಿರುದ್ಧ ಅಮೋಘ ಜಯಗಳಿಸಿ ಫೈನಲ್ ಗೆ ಲಗ್ಗೆ ಹಾಕಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಆರ್ ಸಿಬಿ ತಂಡದ ಮಾಜಿ ಮಾಲೀಕ ವಿಜಯ್ ಮಲ್ಯ ಅವರು ಟ್ವಿಟ್ಟರ್ ನಲ್ಲಿ ಶುಭಾಶಯಗಳನ್ನು ಕೋರಿದ್ದಾರೆ.

ಐಪಿಎಲ್ 2016: ವೇಳಾಪಟ್ಟಿ | ಯಾವ ತಂಡದಲ್ಲಿ ಯಾವ ಆಟಗಾರರು | ಗ್ಯಾಲರಿ

ಎಬಿಡಿ ವಿಲಿಯರ್ಸ್ ಆಟಕ್ಕೆ ಮನಸೋತಿರುವ ಮಲ್ಯ ಎಬಿಡಿಗೆ ಟ್ವಿಟ್ಟರ್ ಮೂಲಕ ಅಭಿನಂದನೆಗಳನ್ನು ತಿಳಿಸಿದ್ದಾರೆ. ಎ (ಗೇಲ್) ಹಾಗೂ ಬಿ (ಕೊಹ್ಲಿ) ಪ್ಲಾನ್ ವಿಫಲವಾಯಿತು. ಆದರೆ ಎಬಿ ಪ್ಲಾನ್ ಸಕ್ಸಸ್ ನಿಂದ ಆರ್ ಸಿಬಿ ಗೆದ್ದಿದೆ ಎಂದು ಮದ್ಯದ ದೊರೆ ಟ್ವಿಟ್ಟರ್ ನಲ್ಲಿ ಟ್ವೀಟ್ ಮಾಡಿದ್ದಾರೆ.

IPL 2016: Vijay Mallya tweet on AB de Villiers after RCB’s victory

ಮೇ 24 ಮಂಗಳವಾರ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಗೆಲ್ಲಲು ಬೇಕಿದ್ದ 159 ರನ್ ಮೊತ್ತವನ್ನು ಎಬಿ ಡಿ ವಿಲಿಯರ್ಸ್ ಅವರ ಅಜೇಯ 79 ರನ್ (47 ಎಸೆತಗಳು) ನೆರವಿನಿಂದ 18.2 ಓವರ್ ಗಳಲ್ಲಿ ಆರ್ ಸಿಬಿ ಗೆಲುವಿನ ನಗೆ ಬೀರಿತು.

ವಿಲಿಯರ್ಸ್ ರನ್ನು 9 ಕೋಟಿ ರುಗಳಿಗೆ ವಿಜಯ್ ಮಲ್ಯ ಖರೀದಿಸಿದ್ದು ಉಪಯೋಗವಾಗಿದೆ. ತಂಡವನ್ನು ಎಬಿಡಿ ಫೈನಲ್ ನತ್ತ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.


ಸಾಲದ ಸುಳಿಯಲ್ಲಿ ಸಿಲುಕಿ ದೇಶವನ್ನು ಬಿಟ್ಟು ಪಲಾಯನ ಮಾಡಿರುವ ವಿಜಯ್ ಮಲ್ಯ ಅವರು ಇತ್ತೀಚೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಲೀಕತ್ವಕ್ಕೆ ರಾಜೀನಾಮೆಯನ್ನು ನೀಡಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Former owner Vijay Mallya expressed his happiness through a tweet and praised hero of the match, AB de Villiers. Royal Challengers Bangalore (RCB) to a four-wicket win over Gujarat Lions (GL) in the Indian Premier League (IPL) tournament.
Please Wait while comments are loading...