ನತದೃಷ್ಟ ಧೋನಿ, ಪುಣೆ ತಂಡದಿಂದ ಸ್ಮಿತ್ ಹೊರಕ್ಕೆ

Posted By:
Subscribe to Oneindia Kannada

ಪುಣೆ, ಮೇ 02: ಎಂಎಸ್ ಧೋನಿ ನೇತೃತ್ವದ ರೈಸಿಂಗ್ ಪುಣೆ ಸೂಪರ್ ಜೈಂಟ್ ತಂಡಕ್ಕೆ ಆಘಾತದ ಮೇಲೆ ಆಘಾತ ಉಂಟಾಗಿದೆ. ಸತತ ಸೋಲಿನ ಜತೆಗೆ ಸಾಲು ಸಾಲಾಗಿ ಆಟಗಾರರು ಗಾಯಾಳುಗಳ ಪಟ್ಟಿ ಸೇರುತ್ತಿದ್ದಾರೆ. ಮಿಚೆಲ್ ಮಾರ್ಷ್ ನಂತರ ಸ್ಟೀವ್ ಸ್ಮಿತ್ ಅವರನ್ನು ಕೂಡಾ ಕ್ರಿಕೆಟ್ ಆಸ್ಟ್ರೇಲಿಯಾ ಕರೆಸಿಕೊಂಡಿದೆ.

ಇತ್ತೀಚೆಗೆ ಗುಜರಾತ್ ಲಯನ್ಸ್ ವಿರುದ್ಧ ಶತಕ(101) ಸಿಡಿಸಿ ಪುಣೆ ತಂಡದ ಬ್ಯಾಟಿಂಗ್ ಆಸರೆ ಎನಿಸಿಕೊಂಡಿದ್ದ ಆಸ್ಟ್ರೇಲಿಯಾದ ನಾಯಕ ಸ್ಮಿತ್ ಅವರು ಕೂಡಾ ಗಾಯಾಳುಗಳ ಪಟ್ಟಿ ಸೇರಿದ್ದಾರೆ. 7 ಇನ್ನಿಂಗ್ಸ್ ನಿಂದ 270 ರನ್ ಕಲೆಹಾಕಿದ್ದಾರೆ.ಮಣಿಕಟ್ಟಿನ ಗಾಯದಿಂದ ಬಳಲುತ್ತಿರುವ ಸ್ಮಿತ್ ಅವರು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಟ್ರೇಲಿಯಾಕ್ಕೆ ತೆರಳುತ್ತಿದ್ದಾರೆ.[ಐಪಿಎಲ್ 2016 : ಹೊರ ಹೋದ ಆಟಗಾರರ ಪಟ್ಟಿ]

ಆಸ್ಟ್ರೇಲಿಯಾ ತಂಡ ಮೇ ತಿಂಗಳಿನಲ್ಲಿ ವೆಸ್ಟ್ ಇಂಡೀಸ್ ಪ್ರವಾಸ ಕೈಗೊಳ್ಳಲಿದ್ದು, ಇದಕ್ಕಾಗಿ ಪೂರ್ವ ತಯಾರಿ ನಡೆಸಲು ಆಟಗಾರರು ಫಿಟ್ ಆಗಿರುವುದು ಅಗತ್ಯ. ಹೀಗಾಗಿ ಸ್ಮಿತ್ ಅವರ ಫಿಟ್ನೆಸ್ ಸುಧಾರಿಸಬೇಕಿದೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಪ್ರಕಟಿಸಿದೆ. ಆಸ್ಟ್ರೇಲಿಯಾ ತಂಡ ವೆಸ್ಟ್ ಇಂಡೀಸ್ ನಲ್ಲಿ ಏಕದಿನ ಸರಣಿ ಮುಗಿಸಿಕೊಂಡು ದಕ್ಷಿಣ ಆಫ್ರಿಕಾ ವಿರುದ್ಧ ಜೂನ್ ತಿಂಗಳಿನಲ್ಲಿ ಸರಣಿ ಆಡಲಿದೆ. [ಪೀಟರ್ಸನ್ ಬದಲಿಗೆ ಉಸ್ಮಾನ್ ಸೇರ್ಪಡೆ]

ಕೆವಿನ್ ಪೀಟರ್ಸನ್, ಫಾಫ್ ಡುಪ್ಲೆಸಿಸ್ ನಂತರ ಮಿಚೆಲ್ ಮಾರ್ಷ್ ನಂತರ ಸ್ಟೀವ್ ಸ್ಮಿತ್ ನಿರ್ಗಮನವಾಗಿದ್ದು, ಧೋನಿ ಪಡೆಯ ಬ್ಯಾಟಿಂಗ್ ಕ್ರಮಾಂಕ ಏರುಪೇರಾಗಲಿದೆ. [ಎಂಎಸ್ ಧೋನಿ ಪಡೆಗೆ ಆಘಾತ, ಮಾರ್ಷ್ ಔಟ್]

ಕೆವಿನ್ ಪೀಟರ್ಸನ್ ಅವರ ಬದಲಿಗೆ ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಉಸ್ಮಾನ್ ಖವಾಜ ಆಯ್ಕೆಯಾಗಿರುವ ಸುದ್ದಿ ಬಂದಿದೆ. ಆದರೆ, ಇದರ ಬೆನ್ನಲ್ಲೇ 31ವರ್ಷ ವಯಸ್ಸಿನ ಫಾಫ್ ಡುಪ್ಲೆಸಿಸ್ ಅವರು ಗಾಯಗೊಂಡು ಟೂರ್ನಿಯಿಂದ ಹೊರಕ್ಕೆ ನಡೆದಿದ್ದಾರೆ. ಬೆರಳಿಗೆ ಗಾಯ ಮಾಡಿಕೊಂಡಿರುವ ಡುಪ್ಲೆಸಿಸ್ ಅವರು ಸುಮಾರು 6 ವಾರಗಳ ಕಾಲ ಕ್ರಿಕೆಟ್ ಮೈದಾನದಿಂದ ಹೊರಗುಳಿಯಬೇಕಾಗುತ್ತದೆ.

ಎಂಎಸ್ ಧೋನಿ ನೇತೃತ್ವದ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ತಂಡ ಐಪಿಎಲ್ 2016ರಲ್ಲಿ ಆಡಿರುವ 8 ಪಂದ್ಯಗಳಲ್ಲಿ 6 ಪಂದ್ಯಗಳನ್ನು ಕಳೆದುಕೊಂಡಿದೆ. ಮತ್ತೆ ಗೆಲುವಿನ ಹಾದಿ ಹಿಡಿಯಲು ಗಾಯಾಳುಗಳ ಸಮಸ್ಯೆ ಕಾಡುತ್ತಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Rising Pune Supergiants' injury woes continued as Australian batsman Steve Smith was today (May 2) ruled out of the remainder of the Indian Premier League 2016 (IPL 9) with a wrist injury.
Please Wait while comments are loading...