ಐಪಿಎಲ್ 2016: ಕೆಕೆಆರ್ ಗೆ ವೇಗಿ ಶಾನ್ ಟೈಟ್ ಸೇರ್ಪಡೆ

By: ಕ್ರಿಕೆಟ್ ಡೆಸ್ಕ್
Subscribe to Oneindia Kannada

ಕೋಲ್ಕತ್ತಾ, ಮೇ 12 : ಶಾರುಖ್ ಒಡೆತನದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಜಾನ್ ಹೆಸ್ಟಿಂಗ್ಸ್ ಅವರ ಬದಲಿಗೆ ಆಸ್ಟ್ರೇಲಿಯಾದ ವೇಗಿ ಶಾನ್ ಟೈಟ್ ತಂಡವನ್ನು ಸೇರಿಕೊಳ್ಳಲಿದ್ದಾರೆ. ಆಲ್ ರೌಂಡರ್ ಜಾನ್ ಹೆಸ್ಟಿಂಗ್ಸ್ ಅವರು ಎಡಗಾಲಿನ ಗಾಯದಿಂದ ಐಪಿಎಲ್ 2016 ನಿಂದ ಹೊರ ಹೋಗಿದ್ದಾರೆ.

ಐಪಿಎಲ್ 2016: ವೇಳಾಪಟ್ಟಿ | ಯಾವ ತಂಡದಲ್ಲಿ ಯಾವ ಆಟಗಾರರು | ಗ್ಯಾಲರಿ

ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಸಿಇಒ ವೆಂಕಿ ಮೈಸೂರು ಅವರು ವೇಗಿ ಶಾನ್ ಟೈಟ್ ರನ್ನು ಟ್ವಿಟ್ಟರ್ ನಲ್ಲಿ ತಂಡಕ್ಕೆ ಸ್ವಾಗತ ಮಾಡಿಕೊಂಡಿದ್ದಾರೆ. ಕಳೆದ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಪರವಾಗಿ ಆಡುತ್ತಿದ್ದರು.

Shaun Tait replaces John Hastings in Kolkata Knight Riders squad

ಆದರೆ, ಈ ಬಾರಿಯ ಐಪಿಲ್ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ ಟೈಟ್ ರನ್ನು ಯಾವ ಫ್ರಾಂಚೈಸಿಗಳು ಖರೀದಿಸದೆ ಅನ್ ಸೋಲ್ಡ್ ಆಗಿದ್ದರು.

ಬೌಲಿಂಗ್ ವಿಭಾಗದಲ್ಲಿ ರಸೇಲ್, ಮೋರ್ನೆ ಮಾರ್ಕೆಲ್, ಹೋಲ್ಡರ್, ಉಮೇಶ್ ಯಾದವ್ ಕೆಕೆಆರ್ ತಂಡದ ವೇಗಿಗಳಾಗಿದ್ದು, ಮತ್ತೋರ್ವ ವೇಗಿ ತಂಡಕ್ಕೆ ಸೇರಿಕೊಂಡಿದ್ದರಿಂದ ಕೋಲ್ಕತ್ತಾ ಬೌಲಿಂಗ್ ನಲ್ಲಿ ಮತ್ತಷ್ಟು ಬಲಿಷ್ಠಗೊಂಡಿದೆ.

ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗದಲ್ಲಿ ಕೆಕೆಆರ್ ಸಮಬಲವಾಗಿದ್ದು ಪ್ರಶಸ್ತಿ ಗೆಲ್ಲುವ ಫೇವರಿಟ್ ತಂಡವಾಗಿದೆ. ಪಾಯಿಂಟ್ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿರುವ ಕೋಲ್ಕತ್ತಾ ಮೇ 14 ರಂದು ಪುಣೆ ಸೂಪರ್ ಜೈಂಟ್ಸ್ ತಂಡವನ್ನು ಎದುರಿಸಲಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Australian fast bowler Shaun Tait has replaced John Hastings in the Kolkata Knight Riders' squad for the remainder of the Indian Premier League season nine.
Please Wait while comments are loading...