ಮಕ್ಕಳ ಜತೆ ಸಂಗೀತಗಾರ ಶೇನ್ ವಾಟ್ಸನ್ ರಸನಿಮಿಷ

Posted By:
Subscribe to Oneindia Kannada

ಬೆಂಗಳೂರು, ಮೇ 20: ಬಡ, ನಿರ್ಗತಿಕ ಮಕ್ಕಳ ಜೊತೆ ಸಂಗೀತಗಾರನಾಗಿ ಕ್ರಿಕೆಟರ್ ಶೇನ್ ವಾಟ್ಸನ್ ಕಾಣಿಸಿಕೊಂಡಿದ್ದಾರೆ. ಮಕ್ಕಳ ಜೀವನದಲ್ಲಿ ಶಿಕ್ಷಣದ ಮಹತ್ವದ ಬಗ್ಗೆ ಹೇಳಿದ್ದಾರೆ. ಪಿ ಮತ್ತು ಜಿ ಶಿಕ್ಷಾ ಸಂಸ್ಥೆ ಜೊತೆ ಕೈ ಜೋಡಿಸಿರುವ ವಾಟ್ಸನ್ ಅವರು ಪಿ ಮತ್ತು ಜಿ ಪರ ಪ್ರಚಾರ ಆರಂಭಿಸಿದ್ದಾರೆ.

ಐಪಿಎಲ್ 2016: ವೇಳಾಪಟ್ಟಿ | ಯಾವ ತಂಡದಲ್ಲಿ ಯಾವ ಆಟಗಾರರು | ಗ್ಯಾಲರಿ

ಬಡ ಮಕ್ಕಳಿಗೆ ಶಿಕ್ಷಣವನ್ನು ನೀಡುವುದು ಉತ್ತಮ ಕೆಲಸ ಈ ಕಾರ್ಯದಲ್ಲಿ ಶಿಕ್ಷಾ ಸಂಸ್ಥೆ ಕಾರ್ಯ ಶ್ಲಾಘನೀಯ.'ಪಡೇಗಾ ಇಂಡಿಯಾ, ಬಡೇಗಾ ಇಂಡಿಯಾ' ಎಂಬ ಹೆಸರಿನ ಯೋಜನೆಗೆ ಎಲ್ಲರೂ ಸಹಕರಿಸಿ, ಪಿ ಅಂಡ್ ಜಿ ಉತ್ಪನ್ನ ಖರೀದಿಸಿ ಪರೋಕ್ಷವಾಗಿ ಇಂಥ ಮಕ್ಕಳ ಶಿಕ್ಷಣಕ್ಕೆ ನೆರವಾಗಿ ಎಂದು ವಾಟ್ಸನ್ ಕರೆ ನೀಡಿದರು. [ಸರ್ಕಾರಿ ಶಾಲಾ ಮಕ್ಕಳಿಗೆ ಪ್ರೀತಿಯ ಗಿಫ್ಟ್ ಕೊಟ್ಟ ದ್ರಾವಿಡ್]

IPL 2016: Shane Watson spends quality time with 'Shiksha' students, plays guitar for them

ಶಿಕ್ಷಣದ ಮಹತ್ವ, ಕ್ರೀಡಾ ಮನೋಭವದ ಬಗ್ಗೆ ಮಕ್ಕಳಿಗೆ ವಾಟ್ಸನ್ ಪಾಠ ಮಾಡಿದರು. ತಮ್ಮ ಬಾಲ್ಯದ ದಿನಗಳ ನೆನಪುಗಳನ್ನು ಹಂಚಿಕೊಂಡರು. ಪಠ್ಯೇತರ ಚಟುವಟಿಕೆಗಳತ್ತ ಕೂಡಾ ಹೆಚ್ಚಿನ ಗಮನ ಹರಿಸುವಂತೆ ಎಂದು ಕಿವಿಮಾತು ಹೇಳಿದರು.

ಮಕ್ಕಳಿಗೆ ಕೆಲವು ಕ್ರಿಕೆಟ್ ಹೊಡೆತಗಳನ್ನು ಕಲಿಸಿ ಕೊಟ್ಟಿದ್ದಲ್ಲದೆ ಗಿಟಾರ್ ಮೂಲಕ ತನ್ನ ನೆಚ್ಚಿನ ಹಾಡನ್ನು ಹಾಡುವ ಮೂಲಕ ಶಿಕ್ಷಣವನ್ನು ಕಲಿಯುವ ವಿಧಾನಗಳ ಬಗ್ಗೆ ಮನವರಿಕೆ ಮಾಡಿದರು.

ಮಕ್ಕಳ ಜತೆ ಸಂಗೀತಗಾರ ಶೇನ್ ವಾಟ್ಸನ್ ರಸನಿಮಿಷ

ಮಕ್ಕಳ ಜತೆ ಸಂಗೀತಗಾರ ಶೇನ್ ವಾಟ್ಸನ್ ರಸನಿಮಿಷ

-
-
-
-

ಪಿ ಮತ್ತು ಜಿ ಶಿಕ್ಷಾ ಸಂಸ್ಥೆಯು ಸುಮಾರು 33 ಶಾಲೆಗಳಲ್ಲಿ 6 ಸಾವಿರ ವಿದ್ಯಾರ್ಥಿಗಳಿಗೆ ನೆರವಾಗಿದೆ. ರಾಜ್ಯದಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಕರೆತಂದು ಅವರಿಗೆ ಶಿಕ್ಷಣವನ್ನು ನೀಡಲಾಗುತ್ತಿದೆ. ಇದೀಗ ಸಂಸ್ಥೆಗೆ ವಿವಿಧ ಕಡೆಗಳಿಂದ ಬೆಂಬಲ ದೊರಕಿದ್ದು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಜನರಿಗೆ ಅವಕಾಶವನ್ನು ಕಲ್ಪಿಸುವ ಉದ್ದೇಶ ಸಂಸ್ಥೆ ಹೊಂದಿದೆ.

ಶಿಕ್ಷಾ ಅಭಿಯಾನದಲ್ಲಿ ದೇಶಾದ್ಯಂತ 330 ಸರ್ಕಾರಿ ಶಾಲೆಗಳಲ್ಲಿ ಕೊಠಡಿ, ಶೌಚಾಲಯ ನಿರ್ಮಾಣ, ಶುದ್ಧ ಕುಡಿಯುವ ನೀರು, ಆಟದ ಮೈದಾನಗಳ ನಿರ್ಮಾಣ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಮೂಲಕ ಬಡ ಮಕ್ಕಳಿಗೆ ಗುಣಮಟ್ಟದ ಉತ್ತಮ ಶಿಕ್ಷಣ ನೀಡಲು ಮುಂದಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Ace cricketer and Australian legend Shane Watson donned the avatar of 'Shiksha Superhero' for the students of P&G Shiksha School in Bengaluru. Watson emphasised on the importance of education in the lives of children.
Please Wait while comments are loading...