ಪುಣೆ ತಂಡಕ್ಕೆ ಪೀಟರ್ಸನ್ ಬದಲಿಗೆ ಉಸ್ಮಾನ್ ಸೇರ್ಪಡೆ

Posted By:
Subscribe to Oneindia Kannada

ಪುಣೆ, ಏಪ್ರಿಲ್ 28: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ 9) ನಲ್ಲಿ ಗಾಯಗೊಂಡು ಇಂಗ್ಲೆಂಡಿಗೆ ಮರಳಿರುವ ಕೇವಿನ್ ಪೀಟರ್ಸನ್ ಬದಲಿಗೆ ಆಸ್ಟ್ರೇಲಿಯದ ಆರಂಭಿಕ ಬ್ಯಾಟ್ಸ್ ಮನ್ ಉಸ್ಮಾನ್ ಖ್ವಾಜಾರನ್ನು ಪುಣೆ ತಂಡ ಸೇರಿಸಿಕೊಂಡಿದೆ.

ಐಪಿಎಲ್ 2016: ವೇಳಾಪಟ್ಟಿ | ಯಾವ ತಂಡದಲ್ಲಿ ಯಾವ ಆಟಗಾರರು | ಗ್ಯಾಲರಿ

ಉಸ್ಮಾನ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳುವ ಬಗ್ಗೆ ಮ್ಯಾನೇಜ್ಮೆಂಟ್ ಉತ್ಸುಕವಾಗಿದೆ ಎಂದು ರೈಸಿಂಗ್ ಪುಣೆ ಸೂಪರ್‌ಜಯಂಟ್ಸ್‌ನ ಕೋಚ್ ಸ್ಟೀಫನ್ ಫ್ಲೆಮಿಂಗ್ ಖಚಿತಪಡಿಸಿದ್ದಾರೆ.

IPL 2016: RPS: Usman Khawaja to replace injured Kevin Pietersen

ಐಪಿಎಲ್ ಟೂರ್ನಿಯ ವೇಳೆ ಗಾಯಗೊಂಡಿರುವ ಪೀಟರ್ಸನ್ ನವೆಂಬರ್ ತನಕ ಸಕ್ರಿಯ ಕ್ರಿಕೆಟ್‌ನಿಂದ ದೂರ ಉಳಿಯುವ ಸಾಧ್ಯತೆಯಿದೆ. ಪೀಟರ್ಸನ್‌ರಿಂದ ತೆರವಾದ ಸ್ಥಾನವನ್ನು ತುಂಬಬಲ್ಲ ಆಟಗಾರರ ಪಟ್ಟಿಯಲ್ಲಿ ಖ್ವಾಜಾ ಮೊದಲ ಆಯ್ಕೆಯಾಗಿದ್ದಾರೆ ಎಂದು ಕೆಕೆಆರ್ ವಿರುದ್ಧದ ಪಂದ್ಯದ ಬಳಿಕ ಸುದ್ದಿಗಾರರಿಗೆ ಫ್ಲೆಮಿಂಗ್ ತಿಳಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಖ್ವಾಜಾ ಎಲ್ಲ ಮಾದರಿಯ ಕ್ರಿಕೆಟ್‌ನಲ್ಲಿ ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ಈ ವರ್ಷದ ಬಿಗ್‌ಬ್ಯಾಶ್ ಟ್ವೆಂಟಿ-20 ಟೂರ್ನಿಯಲ್ಲಿ ಸಿಡ್ನಿ ಥಂಡರ್ ಪರವಾಗಿ 4 ಪಂದ್ಯಗಳನ್ನು ಆಡಿರುವ ಖ್ವಾಜಾ 2 ಅರ್ಧಶತಕ ಹಾಗೂ ಎರಡು ಶತಕಗಳ ಸಹಿತ 345 ರನ್ ಬಾರಿಸಿದ್ದರು. ಆ ಟೂರ್ನಿಯಲ್ಲಿ ಖ್ವಾಜಾ ಎರಡನೆ ಗರಿಷ್ಠ ಸ್ಕೋರರ್ ಎನಿಸಿಕೊಂಡಿದ್ದರು.

ಬಿಗ್‌ಬಾಶ್ ಟೂರ್ನಿಯಲ್ಲಿ ನೀಡಿರುವ ಪ್ರದರ್ಶನದ ಆಧಾರದ ಮೇಲೆ ಐಸಿಸಿ ಟ್ವೆಂಟಿ-20 ವಿಶ್ವಕಪ್‌ಗೆ ಆಸ್ಟ್ರೇಲಿಯ ತಂಡಕ್ಕೆ ಆಯ್ಕೆಯಾಗಿದ್ದ ಖ್ವಾಜಾ 4 ಪಂದ್ಯಗಳಲ್ಲಿ 143 ರನ್ ಗಳಿಸಿ ಆಸೀಸ್‌ನ ಪರ ಗರಿಷ್ಠ ಸ್ಕೋರ್ ದಾಖಲಿಸಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
IPL 2016: Australian opener Usman Khawaja is replacing injured Kevin Pietersen said Rising Pune Supergaints. Kevin Pietersen is ruled out of Indian premier league 9 following a calf injury.
Please Wait while comments are loading...