ಎಂಎಸ್ ಧೋನಿ ಪಡೆಗೆ ಆಘಾತ, ಮಾರ್ಷ್ ಔಟ್

Posted By:
Subscribe to Oneindia Kannada

ಪುಣೆ, ಮೇ 01: ಸೋಲಿನ ಆಘಾತದಿಂದ ತತ್ತರಿಸಿರುವ ಎಂಎಸ್ ಧೋನಿ ಪಡೆ ಮತ್ತೊಂದು ಆಘಾತ ಅನುಭವಿಸಿದೆ. ಕೆವಿನ್ ಪೀಟರ್ಸನ್, ಫಾಫ್ ಡುಪ್ಲೆಸಿಸ್ ನಂತರ ಮಿಚೆಲ್ ಮಾರ್ಷ್ ಅವರು ಗಾಯಾಳುಗಳ ಪಟ್ಟಿ ಸೇರಿ, ಟೂರ್ನಿಯಿಂದ ಹೊರನಡೆದಿದೆ.

ಆಸ್ಟ್ರೇಲಿಯಾದ ಆಲ್ ರೌಂಡರ್ ಮಿಚೆಲ್ ಮಾರ್ಷ್ ಅವರು ಕಿಬ್ಬೊಟ್ಟೆ ನೋವಿನಿಂದ ಬಳಲುತ್ತಿದ್ದಾರೆ. ತರಬೇತಿಗೂ ಹಾಜರಾಗಿಲ್ಲ. ಪಂದ್ಯವೊಂದರಿಂದ ಹೊರಗುಳಿದಿದ್ದರು. ಆದರೆ, ಸಮಸ್ಯೆಯಿಂದ ಗುಣಮುಖರಾಗದ ಕಾರಣ ಆಸ್ಟ್ರೇಲಿಯಾಕ್ಕೆ ಕರೆಸಿಕೊಳ್ಳಲಾಗುತ್ತಿದೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾದ ಮೆಡಿಸಿನ್ ಮ್ಯಾನೇಜರ್ ಅಲೆಕ್ಸ್ ಕೌನ್ಟೊರಿಸ್ ಹೇಳಿದ್ದಾರೆ.[ಪೀಟರ್ಸನ್ ಬದಲಿಗೆ ಉಸ್ಮಾನ್ ಸೇರ್ಪಡೆ]

IPL 2016 : Setback for RPS | Mitchell Marsh ruled out of IPL due to side strain

ವೆಸ್ಟ್ ಇಂಡೀಸ್ ಪ್ರವಾಸ ಕೈಗೊಳ್ಳಲಿರುವ ಆಸ್ಟ್ರೇಲಿಯಾ ತಂಡದ ಪ್ರಮುಖ ಆಲ್ ರೌಂಡರ್ ಆಗಿರುವ ಮಾರ್ಷ್ ಅವರ ಆರೋಗ್ಯ ಬಗ್ಗೆ ಕಾಳಜಿ ವಹಿಸಿರುವ ಕ್ರಿಕೆಟ್ ಆಸ್ಟ್ರೇಲಿಯಾ, ಐಪಿಎಲ್ 9ರಿಂದ ವಾಪಸ್ ಕರೆಸಿಕೊಂಡಿದೆ.[ಐಪಿಎಲ್ 2016 : ಹೊರ ಹೋದ ಆಟಗಾರರ ಪಟ್ಟಿ]

ಕೆವಿನ್ ಪೀಟರ್ಸನ್ ಅವರ ಬದಲಿಗೆ ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಉಸ್ಮಾನ್ ಖವಾಜ ಆಯ್ಕೆಯಾಗಿರುವ ಸುದ್ದಿ ಬಂದಿದೆ. ಆದರೆ, ಇದರ ಬೆನ್ನಲ್ಲೇ 31ವರ್ಷ ವಯಸ್ಸಿನ ಫಾಫ್ ಡುಪ್ಲೆಸಿಸ್ ಅವರು ಗಾಯಗೊಂಡು ಟೂರ್ನಿಯಿಂದ ಹೊರಕ್ಕೆ ನಡೆದಿದ್ದಾರೆ. ಬೆರಳಿಗೆ ಗಾಯ ಮಾಡಿಕೊಂಡಿರುವ ಡುಪ್ಲೆಸಿಸ್ ಅವರು ಸುಮಾರು 6 ವಾರಗಳ ಕಾಲ ಕ್ರಿಕೆಟ್ ಮೈದಾನದಿಂದ ಹೊರಗುಳಿಯಬೇಕಾಗುತ್ತದೆ. [ಧೋನಿ ಪಡೆ ಸೋಲಿಸಿದ ರೈನಾ ಬಾಯ್ಸ್]

ಎಂಎಸ್ ಧೋನಿ ನೇತೃತ್ವದ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ತಂಡ ಐಪಿಎಲ್ 2016ರಲ್ಲಿ ಆಡಿರುವ 7 ಪಂದ್ಯಗಳಲ್ಲಿ 5 ಪಂದ್ಯಗಳನ್ನು ಕಳೆದುಕೊಂಡಿದೆ. ಮತ್ತೆ ಗೆಲುವಿನ ಹಾದಿ ಹಿಡಿಯಲು ಗಾಯಾಳುಗಳ ಸಮಸ್ಯೆ ಕಾಡುತ್ತಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
IPL 2016 : Big setback for MS Dhoni led Rising Pune Supergaints as Australia all-rounder Mitchell Marsh has joined the list of injury causalities which already includes Faf du Plessis and Kevin Pieterson
Please Wait while comments are loading...