ಪ್ರೇಕ್ಷಕರ ಕೊರತೆ, ಆರ್ ಸಿಬಿ ಪಂದ್ಯಗಳ ಟಿಕೆಟ್ ದರ ಇಳಿಕೆ

By: ಕ್ರಿಕೆಟ್ ಡೆಸ್ಕ್
Subscribe to Oneindia Kannada

ಬೆಂಗಳೂರು, ಏಪ್ರಿಲ್ 27 : ಎಂ.ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುವ ಪಂದ್ಯಗಳಿಗೆ ಹೆಚ್ಚಿನ ಪ್ರೇಕ್ಷಕರನ್ನು ಸೆಳೆಯಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಂಡಳಿ ಮುಂದಾಗಿದೆ. ಅದೇನಪ್ಪಾ ಅಂದ್ರೆ ಇನ್ನೂ ಮುಂದೆ ಬೆಂಗಳೂರಿನಲ್ಲಿ ನಡೆಯುವ ಆರ್ ಸಿಬಿಯ ಪಂದ್ಯಗಳ ಟಿಕೆಟ್ ಗಳ ದರವನ್ನು ಕಡಿಮೆ ಬೆಲೆಗೆ ನೀಡಲು ಮುಂದಾಗಿದೆ.

ಐಪಿಎಲ್ 2016: ವೇಳಾಪಟ್ಟಿ | ಯಾವ ತಂಡದಲ್ಲಿ ಯಾವ ಆಟಗಾರರು | ಗ್ಯಾಲರಿ

ಹೌದು. 6, 000 ರು ನಿಂದ 7,000 ರು.ಗಳಿಗೆ ಮಾರಾಟ ಮಾಡಲಾಗುತ್ತಿದ್ದ ಸ್ಟೇಡಿಯಂನ ಮೇಲೆ ಮಹಡಿಯಲ್ಲಿರುವ ಆಸನದ ಟಿಕೆಟ್ ದರ 2,000 ರಿಂದ 4,000 ರು.ಗಳಿಗೆ ಇಳಿಸುವ ಚಿಂತನೆ ನಡೆಸಲಾಗಿದೆ. ಹಾಗೂ ಅತಿಥಿಗಳ ಆಸನದ ಗ್ಯಾಲರಿಯಲ್ಲಿ ವಿವಿಧ ಫಾಸ್ಟ್ ಫುಡ್ ಸ್ಟಾಲ್ ಗಳನ್ನು ವ್ಯವಸ್ಥೆ ಮಾಡಲಾಗಿದೆ ಎಂದು ಮೈದಾನದ ವಕ್ತಾರ ಮೂಲಗಳು ತಿಳಿಸಿವೆ.[ಆರ್ ಸಿಬಿ ತಂಡದಲ್ಲಿ ಬದ್ರಿ ಔಟ್, ತಬ್ರೈಜ್ ಶಮ್ಸಿ ಇನ್]

ಬರದ ಛಾಯೆ ಐಪಿಎಲ್ ಸೀಸನ್ 9 ಮೇಲೆ ಬಿದ್ದಂತಾಗಿ ಅದೇಕೋ ಏನೋ 2016 ಐಪಿಲ್ ಪಂದ್ಯಗಳನ್ನು ವೀಕ್ಷಿಸಲು ಪ್ರೇಕ್ಷಕರು ಮೈದಾನಗಳತ್ತ ಹೆಜ್ಜೆ ಹಾಕುತ್ತಿಲ್ಲ. 32000 ಪ್ರೇಕ್ಷಕರು ಕೂಡಬಹುದಾಗಿದೆ. ಪ್ರತಿ ಐಪಿಲ್ ನ ಬೆಂಗಳೂರು ಮ್ಯಾಚ್ ಇದ್ದರೆ ಸಾಕು ಸ್ಟೇಡಿಯಂ ತುಂಬಿ ತುಳುಕುತ್ತಿತ್ತು. ಈ ಬಾರಿಯ ಐಪಿಎಲ್ ಪಂದ್ಯಗಳಿಗೆ ಕ್ರೀಡಾಂಗಣದ ಕುರ್ಚಿಗಳು ಖಾಲಿ ಖಾಲಿ ಇದ್ದು ಬಿಕೋ ಎನ್ನುತ್ತಿದ್ದವು. ಇದರಿಂದ ಹೆಚ್ಚು ಪ್ರೇಕ್ಷಕರನ್ನು ಸೆಳೆಯಲು ಈ ತಂತ್ರಗಳನ್ನು ರೂಪಿಸಲಾಗಿದೆ.

ಈಗಾಗಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ಆಡಿ 5 ಪಂದ್ಯಗಳಲ್ಲಿ 2 ರಲ್ಲಿ ಗೆದ್ದು 3 ಪಂದ್ಯಗಳಲ್ಲಿ ಪರಾಭವಗೊಂಡು ಪಾಯಿಂಟ್ಸ್ ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದೆ. ಮೇ.2 ರಂದು ಕೋಲ್ಕತ್ತಾ ತಂಡವನ್ನು ತವರಿನಲ್ಲಿ ಎದುರಿಸಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Tickets in the D-Corporate and Fan Terrace-N stands that earlier cost Rs 6,000-Rs 7,000 will now cost between Rs 2,000 and Rs 4,000 depending on whether they are played on a weekday or a weekend, an RCB spokesperson told TOI.
Please Wait while comments are loading...