'ಹಿಟ್ ಮ್ಯಾನ್ 'ರೋಹಿತ್ ಶರ್ಮ ಟಿ20ಯಲ್ಲಿ ದಾಖಲೆ

Posted By:
Subscribe to Oneindia Kannada

ಪುಣೆ, ಮೇ 02: ಮುಂಬೈ ಇಂಡಿಯನ್ಸ್ ನ ನಾಯಕ, ಆರಂಭಿಕ ಆಟಗಾರ ರೋಹಿತ್ ಶರ್ಮ ಅವರು ಅದ್ಭುತ ಬ್ಯಾಟಿಂಗ್ ಮೂಲಕ ಐಪಿಎಲ್ 9ರಲ್ಲಿ ಗಮನ ಸೆಳೆಯುತ್ತಿದ್ದಾರೆ. ಭಾನುವಾರದಂದು ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ವಿರುದ್ಧ ನಡೆದ ಪಂದ್ಯದಲ್ಲಿ 85ರನ್ ಚೆಚ್ಚಿದ ರೋಹಿತ್ ಶರ್ಮ ಅವರು ಟಿ20 ಮಾದರಿಯಲ್ಲಿ ಹೊಸ ದಾಖಲೆ ಬರೆದಿದ್ದಾರೆ.

ಐಪಿಎಲ್ 2016: ವೇಳಾಪಟ್ಟಿ | ಯಾವ ತಂಡದಲ್ಲಿ ಯಾವ ಆಟಗಾರರು | ಗ್ಯಾಲರಿ

ಮುಂಬೈ ತಂಡದ ನಾಯಕ ರೋಹಿತ್ ಶರ್ಮ ಅವರು ಟಿ20 ಮಾದರಿಯಲ್ಲಿ 6,000 ರನ್ ಗಳಿಸಿದ್ದಾರೆ. ಈ ಸಾಧನೆ ಮಾಡಿದ ಎರಡನೇ ಭಾರತೀಯ ಬ್ಯಾಟ್ಸ್ ಮನ್ ಎನಿಸಿಕೊಂಡಿದ್ದಾರೆ. ಗುಜರಾತ್ ಲಯನ್ಸ್ ತಂಡದ ನಾಯಕ ಸುರೇಶ್ ರೈನಾ ಅವರು ಈ ಸಾಧನೆ ಮಾಡಿದ ಮೊದಲ ಬ್ಯಾಟ್ಸ್ ಮನ್ ಆಗಿದ್ದಾರೆ.

IPL 2016: Rohit Sharma completes 6000 runs in T20, becomes 2nd Indian player

ಭಾನುವಾರದ ಪಂದ್ಯದಲ್ಲಿ 60 ಎಸೆತಗಳಲ್ಲಿ 85ರನ್ ಗಳಿಸುವ ಮೂಲಕ ಪುಣೆ ಸೂಪರ್ ಜೈಂಟ್ಸ್ ವಿರುದ್ಧ ಮುಂಬೈ ತಂಡಕ್ಕೆ 8 ವಿಕೆಟ್ ಗಳ ಜಯ ತಂದಿತ್ತರು.

ರೋಹಿತ್ ಶರ್ಮ ಟಿ20ಯಲ್ಲಿ ಈ ಸಾಧನೆ ಮಾಡಿದ ಏಳನೇ ಬ್ಯಾಟ್ಸ್ ಮನ್ ಆಗಿದ್ದಾರೆ. ಸುರೇಶ್ ರೈನಾ ಹಾಗೂ ರೋಹಿತ್ ಶರ್ಮ ಇಬ್ಬರು 3 ಶತಕ ಹಾಗೂ 42 ಅರ್ಧಶತಕ ಗಳಿಸಿದ್ದಾರೆ.

ರೋಹಿತ್ ಅವರು 229 ಟಿ20 ಪಂದ್ಯಗಳನ್ನಾಡಿದ್ದು 6,031 ರನ್ ಗಳನ್ನು ಗಳಿಸಿದ್ದಾರೆ. 33.50 ರನ್ ಸರಾಸರಿ ಹಾಗೂ 131.36 ಸ್ಟ್ರೈಕ್ ರೇಟ್ ಹೊಂದಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
IPL 2016: Mumbai Indians' swashbuckling opener Rohit Sharma continues to be in sublime form in the Indian Premier League (IPL). Rohit Sharma completes 6000 runs in T20, becomes 2nd Indian player
Please Wait while comments are loading...