ರೋಹಿತ್ ಶರ್ಮ ದಾಖಲೆ ಆಟ, ಪುಣೆಗೆ ಮತ್ತೆ ಕಹಿಯೂಟ

Posted By:
Subscribe to Oneindia Kannada

ಪುಣೆ, ಮೇ 02: ನಾಯಕ ರೋಹಿತ್ ಶರ್ಮ ಅವರ ದಾಖಲೆಯ ಆಟದ ನೆರವಿನಿಂದ ಮುಂಬೈ ಇಂಡಿಯನ್ಸ್ ತಂಡ ಹ್ಯಾಟ್ರಿಕ್ ಗೆಲುವಿನ ಸಂಭ್ರಮ ಆಚರಿಸಿದೆ.

ಐಪಿಎಲ್ 2016: ವೇಳಾಪಟ್ಟಿ | ಯಾವ ತಂಡದಲ್ಲಿ ಯಾವ ಆಟಗಾರರು | ಗ್ಯಾಲರಿ

ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ತಂಡ ತನ್ನ 9ನೇ ಪಂದ್ಯದಲ್ಲಿ ರೈಸಿಂಗ್ ಪುಣೆ ಸೂಪರ್ ​ಜೈಂಟ್ಸ್ ವಿರುದ್ಧ 8 ವಿಕೆಟ್​ಗಳಿಂದ ಗೆಲುವು ಸಾಧಿಸಿದೆ. [ಪೀಟರ್ಸನ್ ಬದಲಿಗೆ ಉಸ್ಮಾನ್ ಸೇರ್ಪಡೆ]

IPL 2016: Rohit's unbeaten 85 powers Mumbai to thumping win over Pune

ರೋಹಿತ್ ಶರ್ಮ ಅಜೇಯ 85 ರನ್(60 ಎಸೆತ, 8X4, 3X6) ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ಮುಂಬೈ ತಂಡ 18.3 ಓವರ್​ಗಳಲ್ಲಿ 2 ವಿಕೆಟ್​ಗೆ 161 ರನ್ ಗಳಿಸಿ ಸುಲಭ ಜಯ ದಾಖಲಿಸಿತು. ರೋಹಿತ್ ಅವರಿಗೆ ಪಾರ್ಥಿವ್ ಪಟೇಲ್ (21), ರಾಯುಡು (22) ಮತ್ತು ಬಟ್ಲರ್ (ಅಜೇಯ 27) ಉತ್ತಮ ಸಾಥ್ ನೀಡಿದರು.[ಐಪಿಎಲ್ 2016 : ಹೊರ ಹೋದ ಆಟಗಾರರ ಪಟ್ಟಿ]

-
-
ರೋಹಿತ್ ಶರ್ಮ ದಾಖಲೆ ಆಟ, ಪುಣೆಗೆ ಮತ್ತೆ ಕಹಿಯೂಟ

ರೋಹಿತ್ ಶರ್ಮ ದಾಖಲೆ ಆಟ, ಪುಣೆಗೆ ಮತ್ತೆ ಕಹಿಯೂಟ

-
-
-
-
-
-
-
-

ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಮಾಡಿದ ಸೂಪರ್​ಜೈಂಟ್ಸ್ ತಂಡ, ಸೌರಭ್ ತಿವಾರಿ 57ರನ್ (45 ಎಸೆತ, 4X4, 2X6) ಹಾಗೂ ಸ್ಟೀವನ್ ಸ್ಮಿತ್ 45 ರನ್ (23ಎಸೆತ, 4X4, 3X6) ಗಳಿಸಿದರು. 5 ವಿಕೆಟ್​ಗೆ 159ರನ್ ಮಾತ್ರ ಗಳಿಸಿದ ಪುಣೆಗೆ ಬೂಮ್ರಾ (29ಕ್ಕೆ 3) ಬಿಗಿ ಬೌಲಿಂಗ್ ಕಟಂಕವಾಯಿತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Leading from the front, skipper Rohit Sharma smashed a match-winning unbeaten 85 off just 60 balls to guide defending champions Mumbai Indians to a comfortable eight-wicket victory over Rising Pune Supergiants in the Maharashtra derby of the Indian Premier League (IPL) here on Sunday.
Please Wait while comments are loading...