ಐಪಿಎಲ್ 2016 ಟೂರ್ನಿಯನ್ನು ವೀಕ್ಷಿಸಿದ ಜನರ ಸಂಖ್ಯೆ ಗೊತ್ತೆ?

By: ಕ್ರಿಕೆಟ್ ಡೆಸ್ಕ್
Subscribe to Oneindia Kannada

ಮುಂಬೈ, ಮೇ 2೦: ಭಾರತದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ವರ್ಷದಿಂದ ವರ್ಷಕ್ಕೆ ವೀಕ್ಷಕರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತಿದೆ. ಐಪಿಎಲ್ 9ನೇ ಆವೃತ್ತಿಯನ್ನು ವೀಕ್ಷಿದವರು ಎಷ್ಟು ಜನ ಗೊತ್ತೆ? ಬರೋಬ್ಬರಿ 335 ಮಿಲಿಯನ್ ಜನರು ಈ ಬಾರಿಯ ಐಪಿಎಲ್ ಪಂದ್ಯಗಳನ್ನು ವೀಕ್ಷಿಸಿದ್ದಾರೆಂದು ಸೋನಿ ನೆಟ್ ವರ್ಕ್ ಸಂಸ್ಥೆ ಪ್ರಕಟಿಸಿದೆ.

ಐಪಿಎಲ್ 2016: ವೇಳಾಪಟ್ಟಿ | ಯಾವ ತಂಡದಲ್ಲಿ ಯಾವ ಆಟಗಾರರು | ಗ್ಯಾಲರಿ

ಸೋನಿ ಸಂಸ್ಥೆಯ ಚಾನೆಲ್ ಗಳಾದ ಸೋನಿ ಸಿಕ್ಸ್, ಸೋನಿ ಮ್ಯಾಕ್ಸ್, ಸೋನಿ ಇಎಸ್ ಪಿಎನ್ ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯಗಳನ್ನು ಪ್ರಸಾರ ಮಾಡುತ್ತಿವೆ. ಇದರಿಂದ ಭಾರತದಲ್ಲಿ ಶೇ 50 ರಷ್ಟು ಟಿವಿ ವೀಕ್ಷಕರನ್ನು ಸೋನಿ ಸಮೂಹ ತಲುಪಿದಂತಾಗಿದೆ. ಹಾಗೂ ಈ ಭಾರಿಯ ಐಪಿಎಲ್ 2016 ಟೂರ್ನಿಯ ವೀಕ್ಷಣೆಯಲ್ಲಿ ಸಂಖ್ಯೆ ಶೇ 54 ರಷ್ಟು ಏರಿಕೆ ಕಂಡಿದೆ.[ಐಪಿಎಲ್ ಫೈನಲಿಗೆ ಆನ್ ಲೈನ್ ಟಿಕೆಟ್ ಬುಕ್ಕಿಂಗ್ ಶುರು]

ಇಂಡಿಯನ್ ಪ್ರೀಮಿಯರ್ ಲೀಗ್ ನ ಪ್ರತಿಯೊಂದು ಪಂದ್ಯವನ್ನು 84.4 ಮಿಲಿಯನ್ ಜನರು ವೀಕ್ಷಿಸಿದ್ದಾರೆಂದು ಸೋನಿ ನೆಟ್ ವರ್ಕ್ ತಿಳಿಸಿದೆ. ಸೋನಿ ಸಿಕ್ಸ್ ಹಾಗೂ ಸೋನಿ ಇಎಸ್ ಪಿಎನ್ ಚಾನೆಲ್ ಗಳಿ ವಿಶ್ವದ ಎಲ್ಲಾ ಕ್ರೀಡೆಗಳನ್ನು ನೇರ ಪ್ರಸಾರ ಮಾಡುತ್ತದೆ ಎಂಬ ಖ್ಯಾತಿಗಳಿಸಿದೆ.

ಐಪಿಎಲ್ 2016 ಟೂರ್ನಿ ಮುಕ್ತಾಯದ ಬಳಿಕ ವಿಶ್ವದೆಲ್ಲಡೆ ಜನಮನ್ನಣೆ ಗಳಿಸಿರುವ ಫುಟ್ಬಾಲ್ ಕ್ರೀಡೆಯನ್ನು ಜೂನ್ 10 ರಿಂದ ಜುಲೈ 10 ಒಂದು ತಿಂಗಳ ವರೆಗೆ ಫ್ರಾನ್ಸ್ನಲ್ಲಿ ನಡೆಯಲಿರುವ ಯುರೋ ಫುಟ್ಬಾಲ್ ಚಾಂಪಿಯನ್ಸ್ ಶಿಪ್ ಟೂರ್ನಿಯನ್ನು ನೇರ ಪ್ರಸಾರ ಮಾಡಲಿದೆ (ಐಎಎನ್ಎಸ್)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The ninth edition of the cash-rich Indian Premier League (IPL) has reached a massive viewership of 335 million, Sony Pictures Networks India announced on Thursday(May 19).
Please Wait while comments are loading...