ಗೆಲ್ಲುವ ಪಂದ್ಯ ಸೋಲುವುದು ಹೇಗೆ? ಆರ್ ಸಿಬಿ ಬೌಲರ್ಸ್ ಕೇಳಿ

Posted By:
Subscribe to Oneindia Kannada

ಬೆಂಗಳೂರು, ಮೇ 03: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ ಸಿಬಿ) ತಂಡ ಮತ್ತೊಮ್ಮೆ ಸೋಲು ಕಂಡಿದೆ. ಐಪಿಎಲ್ 9ರಲ್ಲಿ ಆರ್ ಸಿಬಿಗೆ ಸೋಲು ಹೊಸತೇನಲ್ಲ. ಆದರೆ, ಗೆಲ್ಲುವ ಪಂದ್ಯವನ್ನು ಕಳೆದುಕೊಳ್ಳುವುದು ಹೇಗೆ ಎಂಬುದನ್ನು ಆರ್ ಸಿಬಿ ಬೌಲಿಂಗ್ ಪಡೆ ತೋರಿಸಿಕೊಟ್ಟಿದೆ.

ಐಪಿಎಲ್ 2016: ವೇಳಾಪಟ್ಟಿ | ಯಾವ ತಂಡದಲ್ಲಿ ಯಾವ ಆಟಗಾರರು | ಗ್ಯಾಲರಿ

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ವಿರಾಟ್ ಕೊಹ್ಲಿ ಪಡೆ 7 ವಿಕೆಟ್​ಗೆ 185 ರನ್ ಪೇರಿಸಿತು. ಈ ಗುರಿಯನ್ನು ಗೌತಮ್ ಗಂಭೀರ್ ಅವರ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ 19.1 ಓವರ್​ಗಳಲ್ಲಿ 5 ವಿಕೆಟ್​ ಕಳೆದುಕೊಂಡು 189ರನ್ ಗಳಿಸಿ ಜಯಭೇರಿ ಬಾರಿಸಿತು. [ಪಂದ್ಯದ ಸ್ಕೋರ್ ಕಾರ್ಡ್]

 IPL 2016: RCB and Virat Kohli let down by bowlers again as KKR win

ಕೆಕೆಆರ್ ಪರ ಯೂಸುಫ್ ಪಠಾಣ್ ಲಯಕ್ಕೆ ಮರಳಿ 29 ಎಸೆತಗಳಲ್ಲಿ ಅಜೇಯ 60 ರನ್ ಚೆಚ್ಚಿದರು. 6 ಬೌಂಡರಿ, 3 ಸಿಕ್ಸರ್ ಬಾರಿಸಿ ಗೆಲುವಿನ ರೂವಾರಿಯಾದರು. ಯೂಸುಫ್ ಗೆ ಸಾಥ್ ನೀಡಿ 24ಎಸೆತಗಳಲ್ಲಿ 39ರನ್ (1x4, 4x6) ಗಳಿಸಿದ ಆಂಡ್ರೆ ರಸೆಲ್ ಅವರು ಯೂಸುಫ್ ಗೆ ಸಾಥ್ ನೀಡಿದರು. [ಚಿನ್ನಸ್ವಾಮಿಸ್ಟೇಡಿಯಂ : ಗೆದ್ದಿದ್ದು ಪ್ರೇಕ್ಷಕರು ಹಾಗೂ ವೈಫೈ]

ತಿರುವು ನೀಡಿದ ಯೂಸುಫ್ ಹಾಗೂ ರಸೆಲ್ ಜೊತೆಯಾಟ: 10 ಓವರ್ ಗಳ ಅಂತ್ಯಕ್ಕೆ 69 ರನ್​ಗೆ 4 ವಿಕೆಟ್ ಕಳೆದುಕೊಂಡು ಕೆಕೆಆರ್ ಸೋಲಿನ ಸುಳಿಗೆ ಸಿಲುಕಿತ್ತು. ಗೆಲ್ಲಲು 59 ಎಸೆತಗಳಲ್ಲಿ 117ರನ್ ಅವಶ್ಯಕತೆ ಇದ್ದಾಗ ಆಸರೆಯಾದ ರಸೆಲ್-ಯೂಸುಫ್ 44 ಎಸೆತಗಳಲ್ಲಿ 96 ರನ್ ಕಸಿದರು. ರಸೆಲ್ 13 ರನ್​ಗಳಿಸಿದ್ದ ವೇಳೆ ವಿಕೆಟ್ ಕೀಪರ್ ರಾಹುಲ್​ರಿಂದ ಜೀವದಾನ ಪಡೆದರು.[ವಿಡಿಯೋ ನೋಡಿ : ರಾಯುಡು-ಹರ್ಭಜನ್ ಕಿತ್ತಾಟ]

ಇದಕ್ಕೂ ಮುನ್ನ ಕನ್ನಡಿಗ ಕೆಎಲ್ ರಾಹುಲ್ 52 ರನ್(32 ಎಸೆತ, 6X4, 2X6) ಹ್ಯಾಟ್ರಿಕ್ ಅರ್ಧಶತಕ ಸಿಡಿಸಿದರು ಹಾಗೂ ನಾಯಕ ವಿರಾಟ್ ಕೊಹ್ಲಿ52 ರನ್(44 ಎಸೆತ, 4‍X4) ಉತ್ತಮ ಪ್ರದರ್ಶನ ನೀಡಿದರು. ಕೊನೆ ಹಂತದಲ್ಲಿ ಶೇನ್ ವ್ಯಾಟ್ಸನ್ 34 ರನ್(21 ಎಸೆತ,5‍ ‍X4, 1 X6) ಹಾಗೂ ಸಚಿನ್ ಬೇಬಿ 16ರನ್( 8ಎಸೆತ, 2 X4, 1X6) 16 ಎಸೆತಗಳಲ್ಲಿ 38 ರನ್​ಗಳ ಜತೆಯಾಟ ಉತ್ತಮ ಮೊತ್ತ ಕಲೆ ಹಾಕಲು ನೆರವಾಯಿತು.

ಐಪಿಎಲ್ 9: ಆರ್ ಸಿಬಿ ವಿರುದ್ಧ ಕೆಕೆಆರ್ ಗೆ ಜಯ

ಐಪಿಎಲ್ 9: ಆರ್ ಸಿಬಿ ವಿರುದ್ಧ ಕೆಕೆಆರ್ ಗೆ ಜಯ

-
-
-
-
-

ಆರ್ ಸಿಬಿ ಸೋಲಿಗೆ ಪ್ರಮುಖ ಕಾರಣಗಳು
* ಮುಖ್ಯವಾಗಿ ಸ್ಲಾಗ್ ಓವರ್ ಗಳಲ್ಲಿ ಬೌಲಿಂಗ್ ವೈಫಲ್ಯ
* ಯಜುವೇಂದ್ರ ಚಾಹಲ್ ಲೆಗ್ ಸ್ಪಿನ್ನರ್ ಬಿಟ್ಟರೆ ವಿಕೆಟ್ ಕೀಳುವ ಬೌಲರ್ ಕಂಡು ಬರಲಿಲ್ಲ.
* ವಾಟ್ಸನ್ 3 ಓವರ್ ಗಳಲ್ಲಿ 38ರನ್, ವರುಣ್ ಅರೋನ್ 4 ಓವರ್ ಗಳಲ್ಲಿ 34 ಹಾಗೂ ಸ್ಪಿನ್ನರ್ ಶಮ್ಸಿ 51ರನ್ ಹೊಡೆಸಿಕೊಂಡರು.
* ಕೊಹ್ಲಿ ಅವರ ಬೌಲಿಂಗ್ ಬದಲಾವಣೆ ತಂತ್ರ ಕೈಗೊಟ್ಟಿತು.
* ಲೋಕೇಶ್ ರಾಹುಲ್ ಅವರ ಕಳಪೆ ವಿಕೆಟ್ ಕೀಪಿಂಗ್
(ಒನ್ ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Kolkata Knight Riders (KKR) staged a remarkable comeback, riding on Yusuf Pathan's power hitting to record a five-wicket victory over Royal Challengers Bangalore (RCB) in the Indian Premier League 2016 (IPL 9) here tonight (May 2).
Please Wait while comments are loading...