ಆರ್ ಸಿಬಿ ತಂಡದಲ್ಲಿ ಬದ್ರಿ ಔಟ್, ತಬ್ರೈಜ್ ಶಮ್ಸಿ ಇನ್

Posted By:
Subscribe to Oneindia Kannada

ಬೆಂಗಳೂರು, ಏಪ್ರಿಲ್ 22: ಪ್ರಮುಖ ವೇಗಿ ಮಿಚಲ್ ಸ್ಟಾರ್ಕ್ ಹಾಗೂ ಲೆಗ್ ಸ್ಪಿನ್ನರ್ ಸ್ಯಾಮುಯಲ್ ಬದ್ರಿ ಅನುಪಸ್ಥಿತಿಯಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚಿಂತೆಯಲ್ಲಿದೆ. ಸದ್ಯಕ್ಕೆ ಬದ್ರಿ ಬದಲಿಗೆ ಬೌಲರ್ ಸಿಕ್ಕಿದ್ದಾರೆ. ತಬ್ರೈಜ್ ಶಮ್ಸಿ ಅವರು ತಂಡ ಸೇರಲಿದ್ದಾರೆ.

ಐಪಿಎಲ್ 2016: ವೇಳಾಪಟ್ಟಿ | ಯಾವ ತಂಡದಲ್ಲಿ ಯಾವ ಆಟಗಾರರು | ಗ್ಯಾಲರಿ

ಲೆಗ್ ಸ್ಪಿನ್ನರ್ ಸಾಮ್ಯುಯಲ್ ಬದ್ರಿ ಅವರು ಗಾಯದಿಂದ ಚೇತರಿಸಿಕೊಳ್ಳದೆ ಇಂಡಿಯನ್ ಪ್ರೀಮಿಯರ್ ಲೀಗ್ 9 ನೇ ಆವೃತ್ತಿಯಿಂದ ಹೊರ ಹೋಗಿದ್ದು ಆರ್ ಸಿಬಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಬಲಿಷ್ಠ ಬ್ಯಾಟಿಂಗ್ ಪಡೆಯನ್ನು ಹೊಂದಿರುವ ಆರ್ ಸಿಬಿ ತಂಡಕ್ಕೆ ಬೌಲರ್ ಗಳ ಕೊರತೆ ಎದ್ದು ಕಾಣುತ್ತಿದೆ. ಈಗ ಲೆಗ್ ಸ್ಪಿನ್ನರ್ ಬದ್ರಿ ಕೂಡ ಗಾಯಗೊಂಡಿದ್ದು ಆರ್ ಸಿಬಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಬದ್ರಿ ಅವರ ಸ್ಥಾನಕ್ಕೆ ದಕ್ಷಿಣ ಆಫ್ರಿಕಾದ ತಬ್ರೈಜ್ ಶಮ್ಸಿ ನ್ನು ತಂಡಕ್ಕೆ ಸೇರಿಕೊಳ್ಳಲಾಗಿದೆ.

26 ವರ್ಷದ ಶಮ್ಸಿ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಕಾಣಿಸಿಕೊಂಡಿಲ್ಲವಾದರೂ, ದೇಸಿ ಕ್ರಿಕೆಟ್ ನಲ್ಲಿ ಬೆಸ್ಟ್ ವಿಕೆಟ್ ಟೇಕರ್ ಆಗಿದ್ದಾರೆ.

RCB sign Tabraiz Shamsi as Samuel Badree’s replacement

ಈಡನ್ ಗಾರ್ಡನ್ ಕೋಲ್ಕತ್ತಾದಲ್ಲಿ ನಡೆದ ವಿಶ್ವ ಟಿ-20 ಟೂರ್ನಿಯ ಇಂಗ್ಲೆಂಡ್ ವಿರುದ್ಧದ ಫೈನಲ್ ಪಂದ್ಯದಲ್ಲಿ ಭುಜಕ್ಕೆ ಗಾಯ ಮಾಡಿಕೊಂಡಿದ್ದ ಬದ್ರಿ ಅವರನ್ನು 50 ಲಕ್ಷ ರುಗಳಿಗೆ ಆರ್ ಸಿಬಿ ಖರೀದಿ ಮಾಡಿತ್ತು.

ಬದ್ರಿ ಅವರು ಚೇತರಿಸಿಕೊಳ್ಳದ್ದಕ್ಕೆ ತಂಡಕ್ಕೆ ಹೊಡೆತ ಬಿದ್ದಿದ್ದು ಅವರ ಸ್ಥಾನಕ್ಕೆ ಎಡಗೈ ಸ್ಪಿನ್ನರ್ ತಬ್ರೈಜ್ ಶಮ್ಸಿ ತಂಡವನ್ನು ಸೇರಿಕೊಳ್ಳಲಿದ್ದಾರೆಂದು ಆರ್ ಸಿಬಿ ತಂಡದ ಚೇರ್ಮನ್ ಅಮ್ರಿತ್ ಥೋಮಸ್ ತಿಳಿಸಿದ್ದಾರೆ. ಕಳೆದ ಎರಡು ಪಂದ್ಯಗಳಲ್ಲಿ ಬೃಹತ್ ಮೊತ್ತ ಪೇರಿಸಿತ್ತಾದರು ಬೌಲರ್ ಕೊರತೆಯಿಂದಾಗಿ ಆರ್ ಸಿಬಿ ಸೋಲು ಕಂಡಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Royal Challengers Bangalore (RCB) have called up South African chinaman bowler Tabraiz Shamsi to replace the injured West Indies leg-spinner Samuel Badree for the remainder of IPL 2016
Please Wait while comments are loading...