ಅಸಭ್ಯ ಭಾಷೆ ಬಳಕೆ ಆರ್ ಸಿಬಿಯ ವಾಟ್ಸನ್ ಗೆ ಎಚ್ಚರಿಕೆ

Posted By:
Subscribe to Oneindia Kannada

ರಾಯ್ ಪುರ, ಮೇ 23: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಹಿರಿಯ ಆಲ್ ರೌಂಡರ್ ಶೇನ್ ವಾಟ್ಸನ್ ಅವರಿಗೆ ಐಪಿಎಲ್ ಮ್ಯಾಚ್ ರೆಫ್ರಿ ಸೋಮವಾರ ಛೀಮಾರಿ ಹಾಕಲಾಗಿದೆ.

ಐಪಿಎಲ್ 2016: ವೇಳಾಪಟ್ಟಿ | ಯಾವ ತಂಡದಲ್ಲಿ ಯಾವ ಆಟಗಾರರು | ಗ್ಯಾಲರಿ

ರವಿವಾರ ನಡೆದ ಡೆಲ್ಲಿ ವಿರುದ್ದದ ಪಂದ್ಯದ ವೇಳೆಯಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ನಿಯಮಾವಳಿ ಉಲ್ಲಂಘನೆ ಆರೋಪದ ಮೇಲೆ ವಾಟ್ಸನ್ ಅವರಿಗೆ ರೆಫ್ರಿಗಳು ಛೀಮಾರಿ ಹಾಕಿ, ಎಚ್ಚರಿಕೆ ನೀಡಲಾಗಿದೆ. [ಅಸಭ್ಯ ವರ್ತನೆ ತೋರಿದ ಗುಜರಾತಿನ ಬ್ರಾವೋಗೆ ದಂಡ]

IPL 2016: RCB's Shane Watson reprimanded for misconduct

ಪಂದ್ಯ ನಡೆದ ವೇಳೆ ಎದುರಾಳಿ ತಂಡದ ಆಟಗಾರನಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆಂಬ ಆರೋಪ ಕೇಳಿ ಬಂದ ಹಿನ್ನಲೆಯಲ್ಲಿ ಪರಿಶೀಲನೆ ನಡೆಸಲಾಯಿತು. ಐಪಿಎಲ್ ನೀತಿ ಸಂಹಿತೆ ಲೆವೆಲ್ 1 ((Article 2.1.4) ಉಲ್ಲಂಘಿಸಿರುವುದು ಸ್ಪಷ್ಟವಾಗಿದ್ದರಿಂದ ವಾಟ್ಸನ್​ಗೆ ಎಚ್ಚರಿಕೆ ನೀಡಲಾಗಿದೆ ಎಂದು ಐಪಿಎಲ್ ತಿಳಿಸಿದೆ.[ಕ್ವಾಲಿಫೈಯರ್ 1ನಲ್ಲಿ ಗುಜರಾತಿಗೆ ಬೆಂಗಳೂರು ರಾಯಲ್ ಚಾಲೆಂಜ್!]

ಡೆಲ್ಲಿ ಡೇರ್ ಡೆವಿಲ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 6 ವಿಕೆಟ್ ಗಳಿಂದ ಗೆಲುವು ಸಾಧಿಸಿ ಪ್ಲೇ ಆಫ್ ಗೆ ತಲುಪಿದ್ದು, ಮೇ 24 ರಂದು ಮೊದಲ ಕ್ವಾಲಿಫೈಯರ್ ನಲ್ಲಿ ಗುಜರಾತ್ ಲಯನ್ಸ್ ತಂಡವನ್ನು ಎದುರಿಸಲಿದೆ. ವಾಟ್ಸನ್ ಅವರು ಸದ್ಯಕ್ಕೆ ಎಚ್ಚರಿಕೆ ಮಾತ್ರ ಪಡೆದುಕೊಂಡಿದ್ದಾರೆ. ಅನುಚಿತ ವರ್ತನೆ ಮುಂದುವರೆದರೆ, ದಂಡ, ಪಂದ್ಯದಿಂದ ನಿಷೇಧ ಭೀತಿ ಎದುರಿಸಬೇಕಾಗುತ್ತದೆ. (ಐಎಎನ್ಎಸ್)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Royal Challengers Bangalore's veteran all-rounder Shane Watson was reprimanded on Monday by the match referee for using language or a gesture which is deemed obscene, offensive or insulting during an Indian Premier League match against Delhi Daredevils here on Sunday.
Please Wait while comments are loading...