ಐಪಿಎಲ್ ನಿಂದ ತಾತ್ಕಾಲಿಕ ಬ್ರೇಕ್ ಪಡೆದ ಗೇಲ್

Posted By:
Subscribe to Oneindia Kannada

ಬೆಂಗಳೂರು, ಏಪ್ರಿಲ್ 19: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ ಸಿಬಿ) ತಂಡದ ಸ್ಫೋಟಕ ಆರಂಭಿಕ ಬ್ಯಾಟ್ಸ್ ಮನ್ ಕ್ರಿಸ್ ಗೇಲ್ ಅವರು ವೆಸ್ಟ್ ಇಂಡೀಸ್ ಗೆ ಮರಳಿದ್ದಾರೆ. ಐಪಿಎಲ್ 2016ರಿಂದ ಸದ್ಯಕ್ಕೆ ತಾತ್ಕಾಲಿಕ ಬ್ರೇಕ್ ತೆಗೆದುಕೊಂಡಿದ್ದು ಜಮೈಕಾಕ್ಕೆ ಹಾರಿದ್ದಾರೆ. ಗೇಲ್ ಅವರು ಅವರು ಸಿಹಿ ಸುದ್ದಿ ನಿರೀಕ್ಷೆಯಲ್ಲಿದ್ದಾರೆ.

IPL 2016: RCB's Chris Gayle flies home, to miss 2 matches

ಕ್ರಿಸ್ ಗೇಲ್ ಅವರು ತಮ್ಮ ಸಂಗಾತಿ ನಟಾಶಾ ಬೆರಿಡ್ಜ್ ಅವರಿಂದ ಮೊದಲ ಮಗು ನಿರೀಕ್ಷೆಯಲ್ಲಿದ್ದಾರೆ. ಹೀಗಾಗಿ ಏಪ್ರಿಲ್ 20 ಹಾಗೂ ಏಪ್ರಿಲ್ 22ರ ಪಂದ್ಯಗಳನ್ನು ಮಿಸ್ ಮಾಡಿಕೊಳ್ಳಲಿದ್ದಾರೆ.

ಏಪ್ರಿಲ್ 20ರಂದು ಮುಂಬೈ ಇಂಡಿಯನ್ಸ್ ವಿರುದ್ಧ ವಾಂಖೆಡೆ ಸ್ಟೇಡಿಯಂನಲ್ಲಿ ಪಂದ್ಯ ನಿಗದಿಯಾಗಿದೆ. ಏಪ್ರಿಲ್ 22ರಂದು ಪುಣೆ ರೈಸಿಂಗ್ ಜೈಂಟ್ಸ್ ವಿರುದ್ಧ ಆರ್ ಸಿಬಿ ಆಡಲಿದೆ. ಏಪ್ರಿಲ್ 24ರಂದು ಗುಜರಾತ್ ಲಯನ್ಸ್ ತಂಡವನ್ನು ರಾಜ್ ಕೋಟ್ ನಲ್ಲಿ ಎದುರಿಸಲಿದೆ.


ಜಮೈಕಾಕ್ಕೆ ತೆರಳುತ್ತಿರುವ ಬಗ್ಗೆ ಗೇಲ್ ಅವರು ಟ್ವೀಟ್ ಮಾಡಿ ಏರ್ ಕ್ರಾಫ್ಟ್ ನಲ್ಲಿ ಕುಳಿತು ಫೋಟೋ ತೆಗೆಸಿಕೊಂಡಿದ್ದರು. ಗೇಲ್ ಅವರು ಅಪ್ಪ ಆಗುತ್ತಿರುವ ಸುದ್ದಿ ತಿಳಿದ ಕತಾರ್ ಏರ್ ವೇಸ್ ನವರು, ಗೇಲ್ ಅವರಿಗೆ ಕೇಕ್ ನೀಡಿ ವಿಶಿಷ್ಟವಾಗಿ ಸ್ವಾಗತಿಸಿದ್ದಾರೆ.

I'm on my way, Baby. 😊

A photo posted by KingGayle 👑 (@chrisgayle333) on Apr 17, 2016 at 9:39pm PDT

ವಿಶ್ವ ಟ್ವೆಂಟಿ20 ಆರಂಭ ಪಂದ್ಯದಲ್ಲೇ ಶತಕ ಬಾರಿಸಿದ್ದ ಕ್ರಿಸ್ ಗೇಲ್ ಅವರು ಐಪಿಎಲ್ 9ರಲ್ಲಿ ಇನ್ನೂ ಮಿಂಚಬೇಕಿದೆ. ಸದ್ಯ ಎರಡು ಪಂದ್ಯವನ್ನಾಡಿದ್ದು, ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ 1 ರನ್ ಹಾಗೂ ಡೆಲ್ಲಿ ಡೇರ್ ಡೆವಿಲ್ಸ್ ವಿರುದ್ಧ 3 ಎಸೆತಗಳನ್ನು ಎದುರಿಸಿ ಶೂನ್ಯ ಸುತ್ತಿದ್ದರು. ಹೈದ್ರಾಬಾದ್ ವಿರುದ್ಧ ಆರ್ ಸಿಬಿ ಗೆದ್ದರೆ, ಡೆಲ್ಲಿ ವಿರುದ್ಧ ಸೋಲು ಕಂಡಿದೆ.

ಗೇಲ್ ಅವರು ಮತ್ತೆ ಲಯಕ್ಕೆ ಮರಳುತ್ತಾರೆ. ಅವರ ಆಟದ ಬಗ್ಗೆ ಚಿಂತೆ ಬೇಡ ಎಂದು ನಾಯಕ ವಿರಾಟ್ ಕೊಹ್ಲಿ ಅವರು ಪ್ರತಿಕ್ರಿಯಿಸಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Royal Challengers Bangalore (RCB) will be without their opening batsman Chris Gayle for at least 2 matches in the ongoing Indian Premier League 2016 (IPL 9). The West Indian has flown back home, to Jamaica, to be with his partner Natasha Berridge, who is expecting their first child.
Please Wait while comments are loading...