ನಿಧಾನಗತಿ ಬೌಲಿಂಗ್ ಮಾಡಿದ ವಿರಾಟ್ ಕೊಹ್ಲಿಗೆ ದಂಡ

Posted By:
Subscribe to Oneindia Kannada

ಪುಣೆ, ಏಪ್ರಿಲ್ 23 : ಸತತ ಎರಡು ಪಂದ್ಯಗಳಲ್ಲಿ ಸೋಲು ಕಂಡಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಏ.22 ರಾತ್ರಿ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ವಿರುದ್ಧ 13 ರನ್ ಗಳ ಅಮೋಘ ಜಯಗಳಿಸಿ ಖುಷಿಯಲ್ಲಿದ್ದ ಆರ್ ಸಿಬಿ ತಂಡದ ನಾಯಕ ವಿರಾಟ್ ಕೊಹ್ಲಿ ಅವರಿಗೆ 12 ಲಕ್ಷ ರು. ದಂಡ ತೆತ್ತಬೇಕಾದ ಪರಿಸ್ಥಿತಿ ಎದುರಾಗಿದೆ.

ಹೌದು, ಪುಣೆ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನಿಗದಿತ ಸಮಯಕ್ಕಿಂತ ಹೆಚ್ಚು ಸಮಯ ತೆಗೆದುಕೊಂಡು ಬೌಲಿಂಗ್ ಮಾಡಿದೆ. ಇದರಿಂದ ಐಪಿಲ್ ನಿಯಮವನ್ನು ಉಲ್ಲಂಘನೆ ಮಾಡಿರುವ ಆರೋಪದಡಿ ಆರ್ ಸಿಬಿ ತಂಡದ ನಾಯಕ ವಿರಾಟ್ ಕೊಹ್ಲಿಗೆ ಐಪಿಲ್ ಕೋಡ್ ಆಫ್ ಕಾಂಡಕ್ಟ್ ಮಂಡಳಿ 12 ಲಕ್ಷ ರು. ದಂಡ ಹೇರಿದೆ. ಇದು ಈ ಆವೃತ್ತಿಯ ಮೊದಲ ಪ್ರಕರಣವಾಗಿದೆ. [ಗೆಲುವಿನ ಹಾದಿಗೆ ಮರಳಿದ ಆರ್‌ಸಿಬಿ, ಧೋನಿ ಪಡೆಗೆ ಸೋಲು]

IPL 2016: RCB captain Virat Kohli fined Rs 12 lakh

ಏ.22 ಶುಕ್ರವಾರ ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆ ಮೈದಾನದಲ್ಲಿ ಪುಣೆ ವಿರುದ್ಧ ಮೊದಲು ಬ್ಯಾಟಿಂಗ್ ಮಾಡಿದ ಆರ್ ಸಿಬಿ 185 ರನ್ ಗಳನ್ನು ಕಲೆಹಾಕಿತು. ವಿರಾಟ್ 7 ಬೌಂಡರಿ 2 ಸಿಕ್ಸ್ ಗಳ ನೆರೆವಿನಿಂದ 80 (63) ರನ್ ಗಳಿಸಿದ್ದರೆ, ಎಬಿ ಡಿ'ವಿಲಿಯರ್ಸ್ 46 ಎಸೆತಗಳಲ್ಲಿ ಬರೋಬ್ಬರಿ 83 ರನ್ ಸಿಡಿಸಿ ಆರ್ ಸಿಬಿ ಗೆಲುವಿಗೆ ಪಾತ್ರರಾದರು.

ಐಪಿಎಲ್ 2016 : ವೇಳಾಪಟ್ಟಿ | ಯಾವ ತಂಡದಲ್ಲಿ ಯಾವ ಆಟಗಾರರು | ಗ್ಯಾಲರಿ

ಗುರಿಯನ್ನು ಬೆನ್ನಟ್ಟಿದ ಸೂಪರ್ ಜೈಂಟ್ಸ್ ತಂಡದ ಬ್ಯಾಟಿಂಗ್ ವೇಳೆ ಆರ್ ಸಿಬಿ ನಿಗದಿತ ಸಮಯಕ್ಕಿಂತ ಹೆಚ್ಚು ಸಮಯ ತೆಗೆದುಕೊಂಡು ಬೌಲಿಂಗ್ ಮಾಡಿದೆ. ತಂಡ ಕ್ಯಾಪ್ಟನ್ ವಿರಾಟ್ ಗೆ 12 ಲಕ್ಷ ರುಗಳ ದಂಡ ಕಟ್ಟಬೇಕಿದೆ. [ಚಿಗುರಿತೇ ಪ್ರೇಮ! ಕೊಹ್ಲಿ ಜತೆ ಅನುಷ್ಕಾ ಸೀಕ್ರೆಟ್ ಡಿನ್ನರ್]

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Royal Challengers Bangalore (RCB) skipper Virat Kohli has been fined Rs 12 lakh for maintaining slow over rate during the team's Indian Premier League 2016 (IPL 9) game against Rising Pune Supergiants (RPS).
Please Wait while comments are loading...