ಡೆಲ್ಲಿ ತಂಡಕ್ಕೆ ಸಲಹೆಗಾರರಾಗಿ ರಾಹುಲ್ ದ್ರಾವಿಡ್ ಆಯ್ಕೆ

By: ರಮೇಶ್ ಬಿ
Subscribe to Oneindia Kannada

ಬೆಂಗಳೂರು. ಮಾ.01. ಅಂಡರ್ 19 ವಿಶ್ವಕಪ್ ನಲ್ಲಿ ಭಾರತ ತಂಡವನ್ನು ಫೈನಲ್ ಹಂತಕ್ಕೆ ತಲುಪಿಸಿದ ಸಾಧನೆ ಮಾಡಿದ ಕೋಚ್ ರಾಹುಲ್ ದ್ರಾವಿಡ್ ಗೆ ಹೊಸ ಹುದ್ದೆ ಕಾದಿದೆ ಎಂಬ ಸುದ್ದಿ ಈಗ ನಿಜವಾಗಿದೆ. ಹೌದು, ಮಾಜಿ ಟೆಸ್ಟ್ ನಾಯಕ ದ್ರಾವಿಡ್ ಅವರು ಇನ್ನು ಮುಂದೆ 2016 ರ ಇಂಡಿಯನ್ ಪ್ರಿಮಿಯರ್ ಲೀಗ್ (ಐಪಿಎಲ್) ನಲ್ಲಿ ಡೆಲ್ಲಿ ತಂಡಕ್ಕೆ ಮಾರ್ಗದರ್ಶಕರಾಗಿ ಆಯ್ಕೆಯಾಗಿದ್ದಾರೆ.

ಈವರೆಗೆ ನಡೆದ ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ, ಮಾರ್ಗದರ್ಶಕರಾಗಿ ರಾಹುಲ್ ದ್ರಾವಿಡ್ ಉತ್ತಮ ಸಾಧನೆ ತೋರಿದ್ದಾರೆ. [ಐಪಿಎಲ್ 2016: ಯಾವ ತಂಡದಲ್ಲಿ ಯಾವ ಆಟಗಾರರಿದ್ದಾರೆ?]

IPL 2016, Rahul Dravid named mentor of Delhi Daredevils

ಆದರೆ, ಭ್ರಷ್ಟಚಾರ ಆರೋಪದಡಿಯಲ್ಲಿ ರಾಜಸ್ತಾನ ರಾಯಲ್ಸ್ ತಂಡವನ್ನು ರದ್ದುಗೊಳಿಸಲಾಗಿದೆ. ಭಾರತದ ಗೋಡೆ ಎಂದೆ ಖ್ಯಾತಿ ಪಡೆದ ರಾಹುಲ್ ದ್ರಾವಿಡ್ ಅವರು 2016 ರ ಐಪಿಎಲ್ ನಲ್ಲಿ ಯಾವ ತಂಡಕ್ಕೆ ಮಾರ್ಗದರ್ಶಕರಾಗಿ ಹೋಗುತ್ತಾರೆಂಬುವುದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿತ್ತು. [ಐಪಿಎಲ್ ಹರಾಜು 2016: ಸಂಪೂರ್ಣ ಅಪ್ಡೇಟ್ ಗಳು]

ದಿ ವಾಲ್ ದ್ರಾವಿಡ್ ಅವರು ಹೆಚ್ಚಾಗಿ ಯುವ ಆಟಗಾರರಿಗೆ ಹೆಚ್ಚಿನ ಆದ್ಯತೆಯನ್ನು ನೀಡಿ ಅವರಿಗೆ ಆತ್ಮಸ್ಥೈರ್ಯವನ್ನು ತುಂಬುವ ಮೂಲಕ ಪ್ರೋತ್ಸಾಹಿಸುತ್ತಾರೆ.

ಇದಕ್ಕೆ ಅಂಡರ್ 19 ಆಟಗಾರರು ಇತ್ತೀಚೆಗೆ ನೀಡಿರುವ ಹೇಳಿಕೆಗಳು ಸಾಕ್ಷಿಯಾಗಿವೆ. ದ್ರಾವಿಡ್ ನಾಯಕತ್ವದಲ್ಲಿ ರಾಜಸ್ಥಾನ ತಂಡ ಎರಡು ಬಾರಿ ಸೆಮಿ ಫೈನಲ್‌ಗೆ ತಲುಪಿತ್ತು. 2013ರಲ್ಲಿ ಚಾಂಪಿಯನ್ಸ್ ಲೀಗ್‌ನಲ್ಲಿ ಫೈನಲ್‌ಗೆ ತಲುಪಿದ್ದನ್ನು ಇಲ್ಲಿ ಸ್ಮರಿಸಬಹುದು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Former India captain and batting legend Rahul Dravid was today (March 1) unveiled as Delhi Daredevils' mentor for this year's Indian Premier League (IPL 2016) Twenty20 tournament.
Please Wait while comments are loading...