ರೋಹಿತ್ ಶರ್ಮಾ ಅಬ್ಬರ, ಪಂದ್ಯ ಕಸಿದ ಪೊಲಾರ್ಡ್

Subscribe to Oneindia Kannada

ಮುಂಬೈ, ಏಪ್ರಿಲ್, 21: ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡ ಮುಂಬೈ ವಿರುದ್ಧ ಮುಗ್ಗರಿಸಿದೆ. ಐಪಿಎಲ್ ನಲ್ಲಿ ಚೇಸಿಂಗ್ ತಂಡದ ಪ್ರಾಬಲ್ಯ ಮುಂದುವರಿದಿದ್ದು ಮುಂಬೈ ವಿರುದ್ಧ ಆರ್ ಸಿಬಿ ಸೋಲು ಕಂಡಿದೆ.

ಮುಂಬೈ ನಾಯಕ ರೋಹಿತ್ ಶರ್ಮಾ ಅರ್ಧಶತಕ, ಅಂಬಾಟಿ ರಾಯಡು ಜವಾಬ್ದಾರಿಯುತ ಆಟ, ಕೀರನ್ ಪೊಲಾರ್ಡ್ ಸ್ಫೋಟ ಮುಂಬೈ ತಂಡಕ್ಕೆ ತವರಿನಲ್ಲಿ ಗೆಲುವು ತಂದುಕೊಟ್ಟಿದೆ.[ಪುಣೆಯಲ್ಲಿ ಒಂದು ಪಂದ್ಯಕ್ಕೆ ಅನುಮತಿ ನೀಡಿದ ಹೈಕೋರ್ಟ್]

ipl

ಐಪಿಎಲ್ 2016: ವೇಳಾಪಟ್ಟಿ | ಯಾವ ತಂಡದಲ್ಲಿ ಯಾವ ಆಟಗಾರರು | ಗ್ಯಾಲರಿ

ನಿರ್ಣಾಯಕ ಪಂದ್ಯದಲ್ಲಿ ಮುಂಬೈಗೆ ಜಯ ದಕ್ಕಿದೆ. ಮೊದಲು ಬ್ಯಾಟಿಂಗ್ ಮಾಡಿದ ಆರ್ ಸಿಬಿ 7 ವಿಕೆಟ್ ನಷ್ಟಕ್ಕೆ 170 ರನ್ ಕಲೆಹಾಕಿತು. ನಾಯಕ ವಿರಾಟ್ ಕೊಹ್ಲಿಗೆ ಗೇಲ್ ಬದಲು ಕಣಕ್ಕಿಳಿದ ಕೆಎಲ್ ರಾಹುಲ್ ಆರಂಭಿಕರಾಗಿ ಸಾಥ್ ನೀಡಿದರು.

ವಿರಾಟ್‌ ಕೊಹ್ಲಿ 33, ಟ್ರಾವಿಸ್ ಹೆಡ್ 37, ಎ.ಬಿ. ಡಿವಿಲಿಯರ್ಸ್ 29 ರನ್, ಸರ್ಫರಾಜ್‌ ಖಾನ್‌ 28 ರನ್ ಮತ್ತು ಲೋಕೇಶ್‌ ರಾಹುಲ್‌ 23 ರನ್‌ ಕೊಡುಗೆ ನೀಡಿದ ಪರಿಣಾಮ ಆರ್ ಸಿಬಿ ಪೈಪೋಟಿಯ ಮೊತ್ತ ಕಲೆಹಾಕಿತು.[ಬಿಸಿಸಿಐ - ಕುಬೇರನ ಆಸ್ಥಾನಕ್ಕೆ ನೂತನ ಸಾರಥಿ!]

ಆದರೆ ಆರಂಭಿಕ ಆಘಾತದಿಂದ ಚೇತರಿಸಿಕೊಂಡ ಮುಂಬೈಗೆ ಶರ್ಮಾ ಆಸರೆಯಾಗಿ ನಿಂತರು. ಅಂತಿಮವಾಗಿ ಪೊಲಾರ್ಡ್ ಪಂದ್ಯವನ್ನು ಬೆಂಗಳೂರ ಕೈಯಿಂದ ಕಸಿದುಕೊಂಡರು. 19 ಎಸೆತಗಳಲ್ಲಿ 40 ರನ್ ದೋಚಿದ ಪೋಲಾರ್ಡ್ 18 ಓವರ್ ಗೆ ಪಂದ್ಯ ಮುಕ್ತಾಯ ಮಾಡಿದರು.

-
-
-
-
-
-
-
-
-
-
-
-
-

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Leading from the front, skipper Rohit Sharma smashed 62 off just 44 balls to guide Mumbai Indians (MI) to a comfortable six-wicket victory over Royal Challengers Bangalore (RCB) in an Indian Premier League 2016 (IPL 9) match at the Wankhede Stadium here on Wednesday night (April 20).
Please Wait while comments are loading...