ಮುಂಬೈ ಇಂಡಿಯನ್ಸ್ ತಂಡಕ್ಕೆ ಜೈಪುರ ಹೋಂ ಗ್ರೌಂಡ್!

By: ಕ್ರಿಕೆಟ್ ಡೆಸ್ಕ್
Subscribe to Oneindia Kannada

ಮುಂಬೈ, ಏಪ್ರಿಲ್ 18 : ಮುಂಬೈನ ವಾಂಖೆಡೆ ಕ್ರೀಡಾಂಗಣ ಇಲ್ಲಿವರೆಗೆ ಮುಂಬೈ ಇಂಡಿಯನ್ಸ್ ತಂಡದ ತವರು ಅಂಗಳವಾಗಿತ್ತು. ಆದರೆ, ಬರಗಾಲದ ಹಿನ್ನಲೆಯಲ್ಲಿ ಮುಂಬೈನಿಂದ ಪಂದ್ಯಗಳು ಶಿಫ್ಟ್ ಆಗಿವೆ. ಹೌದು, ಐಪಿಎಲ್ ಸೀಸನ್ 9 ನಲ್ಲಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಇನ್ಮುಂದೆ ಜೈಪುರದ ಸವಾಯ್ ಮಾನ್ ಸಿಂಗ್ ಸ್ಟೇಡಿಯಂ ತವರು ಮೈದಾನವಾಗಲಿದೆ.

ಐಪಿಎಲ್ 2016: ವೇಳಾಪಟ್ಟಿ | ಯಾವ ತಂಡದಲ್ಲಿ ಯಾವ ಆಟಗಾರರು | ಗ್ಯಾಲರಿ

ಮಹಾರಾಷ್ಟ್ರದಲ್ಲಿ ಬರಗಾಲ ಆವರಿಸಿದ್ದು ಕುಡಿಯುವ ನೀರಿಗೂ ಹಾಹಾಕಾರ ಎದುರಾಗಿರುವ ಹಿನ್ನಲೆಯಲ್ಲಿ ಮಹಾರಾಷ್ಟ್ರದ ಮುಂಬೈ, ಪುಣೆ ಹಾಗೂ ನಾಗ್ಪುರ ಈ ಮೂರು ಸ್ಟೇಡಿಯಂಗಳಲ್ಲಿ ನಡೆಯಬೇಕಿದ್ದ ಪಂದ್ಯಗಳನ್ನು ಬೇರೆಡೆಗೆ ಸ್ಥಳಾಂತರಿಸಬೇಕೆಂದು ಮಹಾರಾಷ್ಟ್ರ ಬಿಜೆಪಿ, ಹೈಕೋರ್ಟ್ ಮೋರೆ ಹೋಗಿತ್ತು.

IPL 2016: Mumbai Indians opt for Jaipur as their home ground

ಇದನ್ನು ಗಂಭೀರವಾಗಿ ತೆಗೆದುಕೊಂಡ ಬಾಂಬೆ ಹೈಕೋರ್ಟ್ ಕ್ರಿಕೆಟ್ ಗಿಂತ ಜನರೇ ಮುಖ್ಯ ಹಾಗಾಗಿ ಪಂದ್ಯಗಳನ್ನು ಬೇರೆಡೆಗೆ ಸ್ಥಳಾಂತರಿಸಿ ಎಂದು ಬಿಸಿಸಿಐಗೆ ಚಾಟಿ ಏಟು ನೀಡಿತ್ತು. ಈ ಹಿನ್ನೆಲೆಯಲ್ಲಿ ವಿಧಿ ಇಲ್ಲದೆ ಪಂದ್ಯಗಳನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ.

ಏಪ್ರಿಲ್ 30ರ ನಂತರ ನಡೆಯಬೇಕಿದ್ದ 13ಕ್ಕೂ ಅಧಿಕ ಪಂದ್ಯಗಳು ಬೇರೆಡೆಗೆ ಶಿಫ್ಟ್ ಆಗಿವೆ. ಫೈನಲ್ ಪಂದ್ಯ ಕೂಡಾ ಮುಂಬೈನ ವಾಂಖೆಡೆ ಸ್ಟೇಡಿಯಂ ಬದಲಿಗೆ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ.

ಕಾನ್ಪುರ್, ಜೈಪುರ್, ರಾಯ್ ಪುರ್ ಈ ಮೂರರಲ್ಲಿ ಒಂದನ್ನು ಹೋಂ ಗ್ರೌಂಡ್ ನ್ನಾಗಿ ಆಯ್ಕೆ ಮಾಡಿಕೊಳ್ಳುವಂತೆ ಮುಂಬೈ ತಂಡಕ್ಕೆ ಆಯ್ಕೆ ನೀಡಲಾಗಿತ್ತು. ಆದರೆ ಮುಂಬೈ ಇಂಡಿಯನ್ಸ್ ತಂಡ ಜೈಪುರದ ಸವಾಯಿ ಮಾನ್ ಸಿಂಗ್ ಮೈದಾನವನ್ನು ತವರು ಅಂಗಳವನ್ನಾಗಿ ಆಯ್ಕೆ ಮಾಡಿಕೊಂಡಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Defending champions Mumbai Indians have opted for Jaipur's Sawai Man Singh Stadium as their home ground in the 9th edition of Indian Premier League cricket tournament after BCCI decided to shift all matches of the cash-rich league from the drought-hit Maharashtra.
Please Wait while comments are loading...