ವಿರಾಟ್ ಕೊಹ್ಲಿ ಹಾಗೂ ಜಾನ್ಸನ್ ವೈರತ್ವದ ರಹಸ್ಯ ಲೀಕ್!

Posted By:
Subscribe to Oneindia Kannada

ಚಂದೀಗಢ, ಏಪ್ರಿಲ್ 06: ಆಸ್ಟ್ರೇಲಿಯಾದ ಮಾಜಿ ವೇಗಿ ಮಿಚೆಲ್ ಜಾನ್ಸನ್ ಅವರು ಬುಧವಾರ(ಏಪ್ರಿಲ್ 06) ತಪ್ಪೊಪ್ಪಿಗೆ ನೀಡಿದ್ದಾರೆ. ವಿಶ್ವ ಟ್ವೆಂಟಿ20 ಟೂರ್ನಮೆಂಟ್ ವೇಳೆ ಟೀಂ ಇಂಡಿಯಾದ ಅಗ್ರಗಣ್ಯ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ ವಿರುದ್ಧ ಕಿಡಿಕಾರಿದ್ದು ಅಂಥ ಜಾಣ್ಮೆಯ ನಡೆಯಾಗಿರಲಿಲ್ಲ ಎಂದಿದ್ದಾರೆ. ಇಬ್ಬರ ನಡುವಿನ ವೈಮನಸ್ಯ, ವೈರತ್ವದ ಬಗ್ಗೆ ವಿವರಣೆ ನೀಡಿದ್ದಾರೆ.[ಶ್ರೇಷ್ಠ ತಂಡಕ್ಕೆ ವಿರಾಟ್ ಕೊಹ್ಲಿ ನಾಯಕ!]

ವಿಶ್ವ ಟ್ವೆಂಟಿ20 ಟೂರ್ನಿಯಲ್ಲಿ ಮೊಹಾಲಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಮಾರ್ಚ್ 27ರಂದು ಭಾರತದ ಪಂದ್ಯ ನಡೆಯುವುದಕ್ಕೂ ಮುನ್ನ ಕೊಹ್ಲಿಯನ್ನು ಜಾನ್ಸನ್ ಅವರು ಕಿಚಾಯಿಸಿದ್ದರು. ಐಸಿಸಿ ವಿಶ್ವ ಕಪ್ 2015 ಸೆಮಿಫೈನಲ್ ಪಂದ್ಯವನ್ನು ನೆನಪಿಸಿದ್ದರು.[ನನಗೆ ಅತ್ಯಂತ ಖುಷಿಕೊಟ್ಟ ಪ್ರಶಸ್ತಿ ಇದಾಗಿದೆ: ವಿರಾಟ್ ಕೊಹ್ಲಿ]

ಆದರೆ, ಕೊಹ್ಲಿ ಇದಕ್ಕೆ ಬ್ಯಾಟ್ ಮೂಲಕ ಉತ್ತರಿಸಿ ಅಜೇಯ 82ರನ್ ಚೆಚ್ಚಿದ್ದರು. ಇದರಿಂದ ಭಾರತ ಸೆಮಿಫೈನಲ್ ಹಂತ ತಲುಪಿತ್ತು.[ಕೊಹ್ಲಿಯನ್ನು ಕಿಚಾಯಿಸಿದ್ದ ಜಾನ್ಸನ್ ಬಾಯಲ್ಲಿ ಗುಣಗಾನ]

ಐಪಿಎಲ್ ನಲ್ಲಿ ಮತ್ತೆ ಸಮರ: ಇಂಡಿಯನ್ ಪ್ರಿಮಿಯರ್ ಲೀಗ್ (ಐಪಿಎಲ್ 9) ರಲ್ಲಿ ಕಿಂಗ್ಸ್ XI ಪಂಜಾಬ್ ಪರ ಆಡಲು ಸಿದ್ಧವಾಗುತ್ತಿರುವ ಮಿಚೆಲ್ ಜಾನ್ಸನ್ ಅವರು ಹಳೆ ಟ್ವೀಟ್ ಸ್ಮರಿಸಿಕೊಂಡು, ನಾನು ಕಿಚ್ಚು ಹಚ್ಚಿದ್ದು ಅಂಥ ಒಳ್ಳೆ ನಡೆಯಾಗಿರಲಿಲ್ಲ ಎಂದಿದ್ದಾರೆ.

Mitchell Johnson speaks about Kohli

ವಿರಾಟ್ ಕೊಹ್ಲಿ ಅವರು ಸೂಪರ್ ಸ್ಟಾರ್, ತಮ್ಮ ಸಾಮರ್ಥ್ಯವನ್ನು ವಿಶ್ವ ಟ್ವೆಂಟಿ20ಯಲ್ಲಿ ತೋರಿಸಿದ್ದಾರೆ. ಭಾರತವನ್ನು ಸ್ವಂತ ಶಕ್ತಿಯಿಂದ ಸೆಮೀಸ್ ತನಕ ಕೊಂಡೊಯ್ದರು ಎಂದು ಫಾಕ್ಸ್ ಸ್ಫೋರ್ಟ್ಸ್ ನ ತಮ್ಮ ಅಂಕಣದಲ್ಲಿ ಬರೆದುಕೊಂಡಿದ್ದಾರೆ.[ಕ್ರಿಸ್ ಗೇಲ್ ದಾಖಲೆ ಚೂರು ಚೂರು ಮಾಡಿದ ವಿರಾಟ್]

ಟ್ವಿಟ್ಟರ್ ನಲ್ಲಿ ಒಮ್ಮೆ ಅಭಿಪ್ರಾಯ ವ್ಯಕ್ತಪಡಿಸಿದರೆ ಮುಗಿಯಿತು ಇಡೀ ವಿಶ್ವಕ್ಕೆ ಹಂಚಿಬಿಡುತ್ತದೆ. ಭಾರತೀಯ ಫ್ಯಾನ್ಸ್ ಗಳ ಕೋಪದ ಟ್ವೀಟ್ ಗಳಿಗೆ ಉತ್ತರಿಸಲು ಹೋಗಲೇ ಇಲ್ಲ ಎಂದರು..

ಇಷ್ಟಕ್ಕೂ ವೈರತ್ವ ಹೇಗೆ ಬೆಳೆಯಿತು: 2014ರಲ್ಲಿ ಅಡಿಲೇಡ್ ಟೆಸ್ಟ್ ಪಂದ್ಯವಾಡುವಾಗ ಚೆಂಡನ್ನು ವಿರಾಟ್ ನತ್ತ ಎಸೆದಿದ್ದೆ. ಕೊಹ್ಲಿಯನ್ನು ರನ್ ಔಟ್ ಮಾಡಲು ನಾನು ಯತ್ನಿಸಿದ ಪ್ರಾಮಾಣಿಕ ಪ್ರಯತ್ನವಾಗಿತ್ತು. ಆದರೆ, ಕೊಹ್ಲಿ ಇದನ್ನು ತಪ್ಪಾಗಿ ಅರ್ಥೈಸಿಕೊಂಡು, ಮಾಧ್ಯಮಗಳ ಮುಂದೆ ನನ್ನ ವಿರುದ್ಧ ಹೇಳಿಕೆ ನೀಡಿದ್ದು ನನಗೆ ಘಾಸಿ ಉಂಟು ಮಾಡಿತು.
{gallery-feature_1}

ಆದರೆ, ಆಸ್ಟ್ರೇಲಿಯನ್ನರಲ್ಲಿ ಇರುವ ಕಿಚ್ಚು ನಾನು ವಿರಾಟ್ ಕೊಹ್ಲಿ ಅವರಲ್ಲಿ ಕಂಡಿದ್ದೇನೆ. ಈ ರೀತಿ ಅಗ್ರೇಸಿವ್ ಆಗಿ ಆಡುವುದು ಮುಖ್ಯ. ಇಬ್ಬರು ಆಟವನ್ನು ನೋಡುವ ದೃಷ್ಟಿಕೋನ ಒಂದೇ ರೀತಿಯಾಗಿರುವುದರಿಂದ ಈ ರೀತಿ ಘಟನೆಗಳು ನಡೆಯುವುದು ಮಾಮೂಲಿ.

ಐಪಿಎಲ್ 2016: ವೇಳಾಪಟ್ಟಿ | ಯಾವ ತಂಡದಲ್ಲಿ ಯಾವ ಆಟಗಾರರು | ಗ್ಯಾಲರಿ

ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ ಸಿಬಿ) ನಾಯಕ ವಿರಾಟ್ ಕೊಹ್ಲಿ ಅವರಿಗೆ ಬೌಲ್ ಮಾಡಲು ಕಾದಿದ್ದೇನೆ ಎಂದು ಪಂಜಾಬ್ ತಂಡದ ಎಡಗೈ ವೇಗಿ ಜಾನ್ಸನ್ ಹೇಳಿಕೊಂಡಿದ್ದಾರೆ. ಐಪಿಎಲ್ 2016 ಏಪ್ರಿಲ್ 09ರಿಂದ ಮೇ 29ರ ತನಕ ನಡೆಯಲಿದೆ (ಒನ್ ಇಂಡಿಯಾಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Former Australian paceman Mitchell Johnson on Wednesday (April 6) admitted that it was not a "smart move" to target India's star batsman Virat Kohli, on Twitter, during the ICC World Twenty20 tournament.
Please Wait while comments are loading...