ಮನೀಶ್ ಪಾಂಡೆಗೆ ಚಿಕನ್ ಪಾಕ್ಸ್, ಮೈದಾನದಿಂದ ದೂರ

By: ಕ್ರಿಕೆಟ್ ಡೆಸ್ಕ್
Subscribe to Oneindia Kannada

ಕೋಲ್ಕತ್ತಾ, ಏಪ್ರಿಲ್ 25 : ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಸ್ಟಾರ್ ಆಟಗಾರ ಕರ್ನಾಟಕದ ತಂಡದ ಮನೀಶ್ ಪಾಂಡೆ ಅವರು ಚಿಕನ್ ಪಾಕ್ಸ್(ಸಿಡುಬು ಮಾದರಿ ಕಾಯಿಲೆ) ತೊಂದರೆಗೆ ಒಳಗಾಗಿದ್ದಾರೆ, ಇದರಿಂದ ಮನೀಶ್ ಮುಂದಿನ ಐದು ಪಂದ್ಯಗಳಿಂದ ದೂರ ಉಳಿಯಲಿದ್ದಾರೆ ಎಂದು ಇಂಡಿಯನ್ ಪ್ರೀಮಿಯರ್ ಲೀಗ್ ಮೂಲಗಳು ತಿಳಿಸಿವೆ.

ಐಪಿಎಲ್ 2016: ವೇಳಾಪಟ್ಟಿ | ಯಾವ ತಂಡದಲ್ಲಿ ಯಾವ ಆಟಗಾರರು | ಗ್ಯಾಲರಿ

ಕೋಲ್ಕತ್ತಾ ತಂಡದ ಪ್ರಮುಖ ಬ್ಯಾಟ್ಸ್ ಮನ್ 26 ವರ್ಷದ ಮನೀಶ್ ಪಾಂಡೆ ಅವರಿಗೆ ಚಿಕನ್ ಪಾಕ್ಸ್ ಎದುರಾಗಿದ್ದು ಅವರಿಗೆ ಒಂದು ವಾರಗಳ ಕಾಲ ವಿಶ್ರಾಂತಿ ಪಡೆಯಲು ವೈದೈರು ಸಲಹೆ ನೀಡಿದ್ದಾರೆ. ಇದರಿಂದ ಐಪಿಲ್ ಸೀಸನ್ 9 ನಲ್ಲಿ ಸತತ ಗೆಲುವಿನೊಂದಿಗೆ ಅಂಕ ಪಟ್ಟಿಯಲ್ಲಿ ಟಾಪ್ ಸ್ಥಾನದಲ್ಲಿರುವ ಕೋಲ್ಕತ್ತಾ ನೈಟ್ ರೈಡರ್ಸ್ ಗೆ ಭಾರೀ ಹೊಡೆತ ಬಿದ್ದಿದೆ. [ಧೋನಿ ಪಡೆಗೆ ಇನ್ನೊಂದು ಆಘಾತ!]

Manish Pandey to miss next few games

ಮನೀಶ್ ಅವರು ಆಡಿದ ನಾಲ್ಕು ಪಂದ್ಯಗಳಲ್ಲಿ 90 ರನ್ ಗಳಿಸಿ ಉತ್ತಮ ಫಾರ್ಮ್ ನಲ್ಲಿದ್ದಾರೆ. ಆದರೆ, ಈಗ ಅವರಿಗೆ ಚಿಕನ್ ಪಾಕ್ಸ್ ಎದುರಾಗಿದ್ದು ಏಪ್ರಿಲ್ 24 ರಂದು ಪುಣೆ ವಿರುದ್ಧದ ಪಂದ್ಯದಿಂದ ಹೊರ ಉಳಿದಿದ್ದರು. ಮನೀಶ್ ಪಾಂಡೆ ಅನುಪಸ್ಥಿತಿಯಲ್ಲೂ ಕೋಲ್ಕತ್ತಾ ಪುಣೆ ವಿರುದ್ಧ ಜಯಗಳಿಸಿ ತನ್ನ ಗೆಲುವಿನ ನಾಗಾಲೋಟವನ್ನು ಮುಂದುವರೆಸಿದೆ.

ಏಪ್ರಿಲ್ 28 ರಂದು ಕೋಲ್ಕತ್ತಾ ಬಲಿಷ್ಠ ಮುಂಬೈ ತಂಡವನ್ನು ಎದುರಿಸಲಿದೆ. ಏ.30ಕ್ಕೆ ಡೆಲ್ಲಿ ಡೇರ್ ಡೆವಿಲ್ಸ್ ವಿರುದ್ಧ ಆಡಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Kolkata Knight Riders top-order batsman, Manish Pandey has been ruled out of the next few games of the Indian Premier League (IPL) according to reports that he is down with chicken pox. It is unclear as to how many games of the tournament the 26-year-old will miss out.
Please Wait while comments are loading...