ಐಪಿಎಲ್ 2016 ರಿಂದ ಹೊರ ಹೋದ ಆಟಗಾರರ ಪಟ್ಟಿ

By: ಕ್ರಿಕೆಟ್ ಡೆಸ್ಕ್
Subscribe to Oneindia Kannada

ಬೆಂಗಳೂರು, ಏಪ್ರಿಲ್ 29 : ಐಪಿಎಲ್ ನ ಇತರೆ ಸೀಸನ್ ಗೆ ಹೋಲಿಸಿದರೆ ಇಂಡಿಯನ್ ಪ್ರೀಮಿಯರ್ ಲೀಗ್ 2016 ಟೂರ್ನಿ ಅತ್ಯಂತ ಹೆಚ್ಚು ಆಟಗಾರರನ್ನು ಗಾಯಾಳುಗಳ ಪಟ್ಟಿಯಲ್ಲಿ ಕಂಡಿದೆ. ಟೂರ್ನಿಯ ಆರಂಭದಲ್ಲಿಯೇ ಬಹಳಷ್ಟು ಆಟಗಾರರು ಗಾಯಗೊಂಡು ಟೂರ್ನಿಯಿಂದ ಹೊರ ಬಿದ್ದಿದ್ದಾರೆ. ಅದರಲ್ಲಿ ಬಹುತೇಕ ವಿದೇಶಿ ಆಟಗಾರರೇ ಟೂರ್ನಿಯಿಂದ ಹೊರ ಹೋಗಿರುವುದು ವಿಶೇಷ.

ಐಪಿಎಲ್ 2016: ವೇಳಾಪಟ್ಟಿ | ಯಾವ ತಂಡದಲ್ಲಿ ಯಾವ ಆಟಗಾರರು | ಗ್ಯಾಲರಿ

ಕೆಲ ಆಟಗಾರನ್ನೇ ನಂಬಿದ್ದ ತಂಡಗಳಿಗೆ ಭಾರೀ ಹೊಡೆತ ಬಿದ್ದಿದೆ. ಅದರಲ್ಲೂ ಮುಖ್ಯವಾಗಿ ಪುಣೆ ತಂಡದ ಕೇವಿನ್ ಪೀಟರ್ಸನ್ ಹಾಗೂ ಡು ಪ್ಲೇಸಿಸ್ ಈ ಇಬ್ಬರು ಸ್ಟಾರ್ ಬ್ಯಾಟ್ಸ್ ಮನ್ ತಂಡದಿಂದ ಹೊರ ಹೋಗಿದ್ದು ದೋನಿ ಪಡೆಗೆ ಬ್ಯಾಟಿಂಗ್ ಲೈನ್ ಅಪ್ ಕುಸಿದಿದೆ. ಈ ನಡುವೆ ಗಾಯಗೊಂಡಿದ್ದ ಇಶಾಂತ್ ಶರ್ಮ ಮರಳಿ ತಂಡ ಸೇರಿದ್ದಾರೆ. ಪ್ರಮುಖ ಗಾಯಾಳು ಆಟಗಾರರ ಪಟ್ಟಿ ಹೀಗಿದೆ:[ಕೆಕೆಆರ್ ಗೆ ಆಘಾತ, ತಂಡದ ಮುಖ್ಯ ಬೌಲರ್ ಔಟ್]

1. ಯುವರಾಜ್ ಸಿಂಗ್ (ಡೆಲ್ಲಿ ಡೇರ್ ಡೆವಿಲ್ಸ್)- ವಿಶ್ವ ಟಿ20 ಟೂರ್ನಿಯಲ್ಲಿ ಗಾಯಗೊಂಡ ಯುವರಾಜ್ ಸಿಂಗ್ ಅವರು ಐಪಿಎಲ್ ಆರಂಭದದಿಂದಲೂ ಮೈದಾನದಿಂದ ಹೊರಗಿದ್ದಾರೆ. ಅವರು ಈಗ ಚೇತರಿಸಿಕೊಂಡಿದ್ದು ಮುಂದಿನ ಕೆಲ ದಿನಗಳಲ್ಲಿ ಕಮ್ ಬ್ಯಾಕ್ ಮಾಡುವ ಸಾಧ್ಯತೆ ಇದೆ. [ಹೆಚ್ಚಿನ ವಿವರಗಳಿಗೆ ಕ್ಲಿಕ್ ಮಾಡಿ]

2. ಲೆಂಡ್ಲ್ ಸಿಮನ್ಸ್ (ಮುಂಬೈ ಇಂಡಿಯನ್ಸ್)- ಮುಂಬೈ ಇಂಡಿಯನ್ಸ್ ತಂಡದ ಸ್ಟಾರ್ ಆರಂಭಿಕ ಆಟಗಾರ ಬೆನ್ನುನೋವಿನಿಂದ ಬಳಲುತ್ತಿದ್ದು ಟೂರ್ನಿಯಿಂದ ಹೊರ ಹೋಗಿದ್ದಾರೆ. ಇವರ ಸ್ಥಾನಕ್ಕೆ ಮಾರ್ಟಿನ್ ಗಪ್ಟಿಲ್ ತಂಡವನ್ನು ಸೇರಿಕೊಂಡಿದ್ದಾರೆ.[ಪುಣೆಗೆ ಪೀಟರ್ಸನ್ ಬದಲಿಗೆ ಉಸ್ಮಾನ್ ಸೇರ್ಪಡೆ]

IPL 2016: List of players who have been ruled out of IPL 9

3. ಸ್ಯಾಮುಯಲ್ಸ್ ಬದ್ರಿ (ಆರ್.ಸಿ.ಬಿ)- ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿದ್ದ ಸ್ಥಾನ ಪಡೆದಿದ್ದ ವೆಸ್ಟ್ ಇಂಡೀಸ್ ನ ಲೆಗ್ ಸ್ಪಿನ್ನರ್ ಬದ್ರಿ ಅವರು ಭಜಕ್ಕೆ ಗಾಯ ಮಾಡಿಕೊಂಡು ತವರಿಗೆ ಹೋಗಿದ್ದಾರೆ. ಇವರ ಬದಲಿಗೆ ದಕ್ಷಿಣ ಆಫ್ರಿಕದ ತಬ್ರೈಜ್ ಶಮ್ಸಿ ಅವರನ್ನು ಆಯ್ಕೆ ಮಾಡಲಾಗಿದೆ.[ಮಾಲಿಂಗ ಬದಲಿಗೆ ಜೋರಮ್!]

4. ಜೋಯಿಲ್ ಪಾರೀಸ್ ( ಡೆಲ್ಲಿ ಡೇರ್ ಡೆವಿಲ್ಸ್) - ಅವರು ಮೊಣಕಾಲಿನ ಗಾಯದಿಂದ ಬಳಲುತ್ತಿದ್ದಾರೆ. ಇವರನ್ನು ಡೆಲ್ಲಿ 30 ಲಕ್ಷ ರು.ಗಳಿಗೆ ಖರೀದಿ ಮಾಡಿತ್ತು.[ಮನೀಶ್ ಚಿಕನ್ ಪಾಕ್ಸ್, ಮೈದಾನದಿಂದ ದೂರ]

5. ಲಸಿತ್ ಮಲಿಂಗ ( ಮುಂಬೈ ಇಂಡೀಯನ್ಸ್) - ಯಾರ್ಕರ್ ಸ್ಪೆಷಲಿಸ್ಟ್ ಶ್ರೀಲಂಕಾದ ಲಸಿತ್ ಮಾಲಿಂಗ ಅವರು ಮಂಡಿ ನೋವಿನಿಂದಾಗಿ ಟುರ್ನಿಯಿಂದ ಹೊರ ನಡೆದಿದ್ದಾರೆ. ಮುಂಬೈಗೆ ಬಂದಿದ್ದ ಮಾಲಿಂಗ ಫಿಟ್ನೆಸ್ ಟೆಸ್ಟ್ ನಲ್ಲಿ ಫೇಲ್ ಆಗಿ ಶ್ರೀಲಂಕಾಕ್ಕೆ ಮರಳಿದ್ದಾರೆ.

6. ಜಾನ್ ಹೇಸ್ಟಿಂಗ್ಸ್ ( ಕೋಲ್ಕತ್ತಾ ನೈಟ್ ರೈಡರ್ಸ್) -ಆಸ್ಟ್ರೇಲಿಯಾ ತಂಡದ ಆಟಗಾರ ಹೇಸ್ಟಿಂಗ್ಸ್ ಅವರು ಪಾದದ ಕೀಲು ನೋವಿಗೆ ಒಳಗಾಗಿ ತಂಡಕ್ಕೆ ಬೈಬೈ ಹೇಳಿದ್ದಾರೆ.[ಮಿಚಲ್ ಬದಲಿಗೆ ಕ್ರಿಸ್ ಜೋರ್ಡನ್!]

7. ಮಿಚಲ್ ಸ್ಟಾರ್ಕ್ ( ರಾಯಲ್ ಚಾಲೆಂಜರ್ಸ್ ಬೆಂಗಳೂರು) - ಆಸ್ಟ್ರೇಲಿಯಾ ತಂಡದ ವೇಗದ ಬೌಲರ್ ಸ್ಟಾರ್ಕ್ ಗಾಯಗೊಂಡು ಐಪಿಎಲ್ 2016 ನಿಂದ ಹೊರ ಬಿದ್ದಿದ್ದಾರೆ. ಇದರಿಂದ ಆರ್ ಸಿಬಿ ಬೌಲಿಂಗ್ ವಿಭಾಗ ನೆಲಕಚ್ಚಿದೆ. ಸ್ಟಾರ್ಕ್ ಬದಲಿಗೆ ಇಂಗ್ಲೆಂಡಿನ ಕ್ರಿಸ್ ಜೋರ್ಡನ್ ತಂಡ ಸೇರಲಿದ್ದಾರೆ.

8. ಕೇವಿನ್ ಪೀಟರ್ಸನ್ (ರೈಸರ್ಸ್ ಪುಣೆ ಸೂಪರ್ ಜೈಂಟ್ಸ್) - ಆರ್ ಸಿಬಿ ವಿರುದ್ಧದ ಪಂದ್ಯದಲ್ಲಿ ಆಡುವ ವೇಳೆ ಗಾಯಗೊಂಡಿರುವ ಕೆಪಿ ಇಂಗ್ಲೆಂಡ್ ಗೆ ಮರಳಿದ್ದಾರೆ.

9. ಫಾಪ್ ಡುಪ್ಲೇಸಿಸ್ (ರೈಸರ್ಸ್ ಪುಣೆ ಸೂಪರ್ ಜೈಂಟ್ಸ್) - ಬೆರಳಿಗೆ ಗಾಯ ಮಾಡಿಕೊಂಡಿರುವ ಫಾಫ್ ಡು ಪ್ಲೇಸಿಸ್ ಅವರಿಗೆ 6 ವಾರಗಳ ಕಾಲ ವಿಶ್ರಾಂತಿ ಪಡೆಯಲು ವೈದ್ಯರು ಹೇಳಿದ್ದಾರೆ.

ಒಟ್ಟಾರೆ ಐಪಿಎಲ್ ನಿಂದ ಹೊರಹೋಗಿರುವ ಆಟಗಾರರು ಬದಲಿ XI ಕಟ್ಟಿ ಗಾಯಾಳುಗಳ ತಂಡ ಎಂದು ಹೆಸರಿಸಬಹುದು.

-
-
-
-
ಐಪಿಎಲ್ 2016 ರಿಂದ ಹೊರ ಹೋದ ಆಟಗಾರರ ಪಟ್ಟಿ

ಐಪಿಎಲ್ 2016 ರಿಂದ ಹೊರ ಹೋದ ಆಟಗಾರರ ಪಟ್ಟಿ

-
-
-

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
IPL 2016: Here is the list of cricketers who were forced to withdraw from on going Indian Premier League (IPL 9) due to injuries. List includes Yuvraj Singh, Lasit Malinga, Mitchell Starc and So on.
Please Wait while comments are loading...