ಮುಂಬೈಗೆ ಆಘಾತ. ಐಪಿಎಲ್ 9 ನಿಂದ ಲೆಂಡಲ್ ಸಿಮನ್ಸ್ ಔಟ್

By: ಕ್ರಿಕೆಟ್ ಡೆಸ್ಕ್
Subscribe to Oneindia Kannada

ಮುಂಬೈ, ಏಪ್ರಿಲ್ 14: ಮುಂಬೈ ಇಂಡಿಯನ್ಸ್ ತಂಡದ ಆರಂಭಿಕ ಆಟಗಾರ ವೆಸ್ಟ್ ಇಂಡೀಸ್ ನ ಲೆಂಡಲ್ ಸಿಮನ್ಸ್ ಅವರು ಇಂಡಿಯನ್ ಪ್ರಿಮಿಯರ್ ಲೀಗ್ 9ರಿಂದ ಹೊರ ಬಿದ್ದಿದ್ದಾರೆ. ಅವರ ಸ್ಥಾನಕ್ಕೆ ನ್ಯೂಜಿಲೆಂಡ್ ನ ಮಾರ್ಟಿನ್ ಗಪ್ಟಿಲ್ ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂದು ಮುಂಬೈ ಇಂಡಿಯನ್ ಪ್ರಕಟಿಸಿದೆ.

ಐಪಿಎಲ್ 2016: ವೇಳಾಪಟ್ಟಿ | ಯಾವ ತಂಡದಲ್ಲಿ ಯಾವ ಆಟಗಾರರು | ಗ್ಯಾಲರಿ

ಲೆಂಡಲ್ ಸಿಮನ್ಸ್ ಅವರು ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿದ್ದು, ತಕ್ಷಣಕ್ಕೆ ಗುಣಮುಖರಾಗಲು ಹೆಚ್ಚಿನ ಕಾಲಾವಕಾಶ ಬೇಕಿದೆ. ಅವರು ಚೇತರಿಸಿಕೊಳ್ಳಲು ಸುಮಾರು 10 ವಾರಗಳು ಬೇಕಾಗುತ್ತದೆ ಎಂದು ವೈದ್ಯರು ಹೇಳಿದ್ದಾರೆ.

IPL 2016: Injured Lendl Simmons ruled out, Martin Guptill to replace him in Mumbai Indians squad

ಹೀಗಾಗಿ ಐಪಿಎಲ್ 9 ರಲ್ಲಿ ಆಡಲು ಸಾಧ್ಯವಾಗುತ್ತಿಲ್ಲ ಎಂದು ಬುಧವಾರ ಏಪ್ರಿಲ್ 13 ರಂದು ನಡೆದ ಕೋಲ್ಕತ್ತಾ ಹಾಗೂ ಮುಂಬೈ ಇಂಡಿಯನ್ಸ್ ಪಂದ್ಯದ ಬಳಿಕ ರಿಕಿ ಪಾಂಟಿಂಗ್ ಹೇಳಿದರು.

ನ್ಯೂಜಿಲೆಂಡ್ ನ ಆಟಗಾರ ಮಾರ್ಟಿನ್ ಗಪ್ಟಿಲ್ ರನ್ನು ಐಪಿಎಲ್ ಸೀಸನ್ 9 ನಲ್ಲಿ ಯಾವ ತಂಡದ ಪ್ರಾಂಚೈಸಿಗಳು ಕೊಂಡುಕೊಳ್ಳಲು ಮುಂದಾಗಿರಲಿಲ್ಲ. ಆದರೆ, ಸಿಮನ್ಸ್ ಅವರ ಸ್ಥಾನಕ್ಕೆ ಮುಂಬೈ ಇಂಡಿಯನ್ಸ್ ತಂಡಕ್ಕೆ ಮಾರ್ಟಿನ್ ಗಪ್ಟಿಲ್ ಅವರನ್ನು ಬುಲಾವ್ ಮಾಡಿಕೊಳ್ಳುತ್ತಿದೆ.

ಇತ್ತೀಚೆಗೆ ಭಾರತದಲ್ಲಿ ನಡೆದ ವಿಶ್ವ ಟಿ20 ಕ್ರಿಕೆಟ್ ನಲ್ಲಿ ಗಾಯದ ಸಮಸ್ಯೆಯಿಂದ ಅವರ ಬದಲಿಗೆ ಆಂಡ್ರಿ ಫ್ಲೆಚರ್ ವೆಸ್ಟ್ ಇಂಡೀಸ್ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದರು. ಸಿಮನ್ಸ್ ಕಳೆದ 2015 ರ ಐಪಿಲ್ ನಲ್ಲಿ ಆಡಿದ 13 ಪಂದ್ಯಗಳಲ್ಲಿ 122.41 ಬ್ಯಾಟಿಂಗ್ ಸರಾಸರಿಯಲ್ಲಿ ಭರ್ಜರಿ 6 ಅರ್ಧಶತಕಗಳನ್ನು ಭಾರಿಸಿ ಬರೋಬ್ಬರಿ 540 ರನ್ ಗಳನ್ನು ಪೇರಿಸಿ ಮಿಂಚಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Mumbai Indians announced that opener Lendl Simmons has suffered an injury and will miss the remainder of the Indian Premier League 2016, New zealander Martin Guptill comes in.
Please Wait while comments are loading...