ಪ್ರೀತಿ ಜಿಂಟಾ 'ಎಫ್' ಪದ ಬಳಸಿಲ್ಲ, ಅವಾಜ್ ಹಾಕಿಲ್ಲ

Posted By:
Subscribe to Oneindia Kannada

ಮೊಹಾಲಿ, ಮೇ 13: ಇಂಡಿಯನ್ ಪ್ರೀಮಿಯರ್ ಲೀಗ್ ನ 9ನೇ ಆವೃತ್ತಿಯಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡುತ್ತಿರುವ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಒಡತಿ ಪ್ರೀತಿ ಜಿಂಟಾ ಹಾಗೂ ಕೋಚ್ ಸಂಜಯ್ ಬಂಗಾರ್ ನಡುವೆ ಮಾತಿನ ಚಕಮಕಿ ನಡೆಯಿತು ಎಂಬ ಸುದ್ದಿಯನ್ನು ಇಬ್ಬರು ತಳ್ಳಿ ಹಾಕಿದ್ದಾರೆ.

ಐಪಿಎಲ್ 2016: ವೇಳಾಪಟ್ಟಿ | ಯಾವ ತಂಡದಲ್ಲಿ ಯಾವ ಆಟಗಾರರು | ಗ್ಯಾಲರಿ

ಐಪಿಎಲ್ 2016ರಲ್ಲಿ ಆಡಿರುವ 10 ಪಂದ್ಯಗಳ ಪೈಕಿ ಕೇವಲ 3ರಲ್ಲಿ ಜಯ ಸಾಧಿಸಿದ್ದು, ಪ್ಲೇ-ಆಫ್ ಆಸೆಯನ್ನು ಕೈಬಿಟ್ಟಿರುವ ಪಂಜಾಬ್ ತಂಡ ಈಗ ಹಾಲಿ ಚಾಂಪಿಯನ್ ಮುಂಬೈ ತಂಡವನ್ನು ಎದುರಿಸಲಿದೆ. ತಂಡದ ಕಳಪೆ ಪ್ರದರ್ಶನದಿಂದ ಬೇಸತ್ತ ತಂಡದ ಒಡತಿ ಪ್ರೀತಿ ಝಿಂಟಾ ಅವರು ಮುಖ್ಯ ಕೋಚ್ ಸಂಜಯ್ ಬಂಗಾರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಟಗಾರರ ಮುಂದೆ ಎಫ್ ಪದ ಬಳಸಿ ಬೈಯ್ದಿದ್ದಾರೆ ಎಂಬ ಸುದ್ದಿ ಓಡಾಡುತ್ತಿತ್ತು. ಈ ಬಗ್ಗೆ ಸಂಜಯ್ ಬಂಗಾರ್ ಹಾಗೂ ಪ್ರೀತಿ ಜಿಂಟಾ ಸ್ಪಷ್ಟನೆ ನೀಡಿದ್ದಾರೆ.

ಮೊಹಾಲಿಯಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ನಡೆದ ಪಂದ್ಯವನ್ನು ಸುಲಭವಾಗಿ ಗೆಲ್ಲುವ ಅವಕಾಶ ಇದ್ದರೂ ಪಂಜಾಬ್ ತಂಡ 1 ರನ್ ಗಳಿಂದ ಸೋಲು ಕಂಡಿತ್ತು. ಬ್ಯಾಟಿಂಗ್ ಕ್ರಮಾಂಕ ವ್ಯತ್ಯಾಸವೇ ಸೋಲಿಗೆ ಕಾರಣ ಎಂದು ಪ್ರೀತಿ ಅವರು ಸಂಜಯ್ ಮೇಲೆ ಹರಿಹಾಯ್ದಿದ್ದಾರೆ ಎಂಬ ಸುದ್ದಿ ಹಬ್ಬಿತು ನಡೆದಿದ್ದೇ ಬೇರೆ...

ಗೆಲ್ಲುವ ಪಂದ್ಯ ಸೋತಾಗ ಸಿಟ್ಟು ಬರುವುದು ಸಹಜ

ಗೆಲ್ಲುವ ಪಂದ್ಯ ಸೋತಾಗ ಸಿಟ್ಟು ಬರುವುದು ಸಹಜ

ತಂಡದ ಹೊಸ ನಾಯಕ ಮುರಳಿ ವಿಜಯ್ 89 ರನ್ ಗಳಿಸಿ ಭದ್ರ ಬುನಾದಿ ಹಾಕಿಕೊಟ್ಟರೂ ಗುರಿ ಮುಟ್ಟಲು ಸಾಧ್ಯವಾಗಲಿಲ್ಲ. ಇದಕ್ಕೆ ಕೋಚ್ ಸಂಜಯ್ ಬಂಗಾರ್ ಕಾರಣ ಎಂಬ ಸುದ್ದಿ ಹಬ್ಬಿತು. ಹೀಗಾಗಿ ಪ್ರೀತಿ ಅವರು ಸಂಜಯ್ ವಿರುದ್ಧ ಕಿಡಿಕಾರಿದ್ದು ಸಹಜ ಎಂದು ಎಲ್ಲರೂ ಭಾವಿಸಿದ್ದರು. ಆದರೆ, ಬ್ಯಾಟಿಂಗ್ ಕ್ರಮಾಂಕ ಬದಲಾವಣೆ ಮಾತ್ರವೇ ತಂಡದ ಸೋಲಿಗೆ ಕಾರಣವಲ್ಲ, ಈ ಕಾರಣಕ್ಕೆ ಪ್ರೀತಿ ಸಿಟ್ಟಾಗಿಲ್ಲ ಎಂದು ಸ್ಪಷ್ಟನೆ ಸಿಕ್ಕಿದೆ.

ಟೀಂ ಮೀಟಿಂಗ್ ನಲ್ಲಿ ಮಾತುಕತೆ ನಡೆಯುತ್ತೆ

ಟೀಂ ಮೀಟಿಂಗ್ ನಲ್ಲಿ ಮಾತುಕತೆ ನಡೆಯುತ್ತೆ

ಟೀಂ ಮೀಟಿಂಗ್ ನಲ್ಲಿ ಮಾತುಕತೆ ನಡೆಯುತ್ತೆ, ಆದರೆ, ಮಾಧ್ಯಮಗಳಲ್ಲಿ ವರದಿಯಾದಂತೆ ಪ್ರೀತಿ ಅವರು ಎಫ್ ಪದ ಬಳಸಿ ಬೈಯ್ದಿಲ್ಲ, ಅವಹೇಳನಕಾರಿ ಹೇಳಿಕೆ, ಘಟನೆ ನಡೆದಿಲ್ಲ, ಕಿಂಗ್ಸ್ XI ಉತ್ತಮ ಪ್ರದರ್ಶನ ನೀಡಲು ಬದ್ಧವಾಗಿದೆ ಎಂದು ಇನ್ಸ್ಟಾಗ್ರಾಮ್ ನಲ್ಲಿ ಬಂಗಾರ್ ಬರೆದುಕೊಂಡಿದ್ದಾರೆ.

ಪ್ರೀತಿ ಕೋಪಕ್ಕೆ ಏನು ಕಾರಣ?

ಪ್ರೀತಿ ಕೋಪಕ್ಕೆ ಏನು ಕಾರಣ?

ವಿಜಯ್ ಹಾಕಿಕೊಟ್ಟ ಬುನಾದಿ ಮೇಲೆ ರನ್ ಗಳಿಸಿ ಜಯದ ನಿರೀಕ್ಷೆಯಲ್ಲಿದ್ದ ಪಂಜಾಬ್ ಗೆ ಆಘಾತ ತಂದಿದ್ದು, ಬ್ಯಾಟಿಂಗ್ ಕ್ರಮಾಂಕ ಬದಲಾವಣೆ.ಅಕ್ಷರ್ ಪಟೇಲ್‌ಗಿಂತ ಮುಂಚಿತವಾಗಿ ಫರ್ಹಾನ್ ಬೆಹರ್ದಿನ್‌ರನ್ನು ಸಂಜಯ್ ಬಂಗಾರ್ ಆಡಲು ಕಳಿಸಿದ್ದು ರನ್ ಗಳಿಕೆ ವೇಗ ತಗ್ಗಿಸಿತು. 7 ಎಸೆತಗಳನ್ನು ಎದುರಿಸಿದ್ದ ಬೆಹರ್ದಿನ್ ಔಟಾಗದೆ 9 ರನ್ ಗಳಿಸಿದ್ದರು. ಪಟೇಲ್‌ಗೆ ಬ್ಯಾಟಿಂಗ್ ಅವಕಾಶ ಸಿಗಲಿಲ್ಲ.

ಮಾಧ್ಯಮಗಳ ವಿರುದ್ಧ ಗರಂ ಆದ ಪ್ರೀತಿ

ಮಾಧ್ಯಮಗಳ ವಿರುದ್ಧ ಗರಂ ಆದ ಪ್ರೀತಿ

ನಾನು ಹಾಗೂ ಸಂಜಯ್ ಈ ಬಗ್ಗೆ ಸ್ಪಷ್ಟನೆ ನೀಡಿದ ಬಳಿಕವೂ ಮಾಧ್ಯಮಗಳು ಸುಳ್ಳು ಸುದ್ದಿ ಹಬ್ಬಿಸುತ್ತಿವೆ. ನಮ್ಮ ನ್ಯಾಯಾಂಗ ವ್ಯವಸ್ಥೆ ನಿಧಾನಗತಿಯಲ್ಲಿದೆ ಎಂದ ಮಾತ್ರಕ್ಕೆ ಸೆಲೆಬ್ರಿಟಿಗಳನ್ನು ಕೆಲ ಪತ್ರಕರ್ತರು ಸಾಫ್ಟ್ ಟಾರ್ಗೆಟ್ ಮಾಡಿಕೊಳ್ಳುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸುತ್ತಿದ್ದಾರೆ.

ಸಂಜಯ್ ನೀಡಿದ ಸ್ಪಷ್ಟನೆ ಹಂಚಿಕೊಂಡ ಪ್ರೀತಿ

2002 ರಿಂದ 2004ರ ತನಕ ಭಾರತದ ಪರ 12 ಟೆಸ್ಟ್, 15 ಏಕದಿನ ಪಂದ್ಯಗಳನ್ನು ಆಡಿರುವ ಮಾಜಿ ಆಟಗಾರ, ಪಂಜಾಬ್ ತಂಡದ ಕೋಚ್ ಬಂಗಾರ್ ಅವರು ಮಾಧ್ಯಮಗಳ ವರದಿ ಖಂಡಿಸಿ ಸ್ಪಷ್ಟನೆ ನೀಡಿದ್ದನ್ನು ಪ್ರೀತಿ ಜಿಂಟಾ ಹಂಚಿಕೊಂಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Kings XI Punjab coach Sanjay Bangar on Thursday dismissed reports which claimed that he was abused by franchise co-owner Preity Zinta following their one run loss against Royal Challengers Bangalore in Mohali on May 9.
Please Wait while comments are loading...