ಎಬಿಡಿ ವಿಲಿಯರ್ಸ್ ನನಗಿಂತ ಶ್ರೇಷ್ಠ ಬ್ಯಾಟ್ಸ್ ಮನ್: ವಿರಾಟ್ ಕೊಹ್ಲಿ!

By: ಕ್ರಿಕೆಟ್ ಡೆಸ್ಕ್
Subscribe to Oneindia Kannada

ಬೆಂಗಳೂರು, ಮೇ 25 : ಕ್ವಾಲಿಫೈಯರ್-1 ರಲ್ಲಿ ಗುಜರಾತ್ ಲಯನ್ಸ್ ವಿರುದ್ಧ ಅಬ್ಬರಿಸಿದ ಸೂಪರ್ ಮ್ಯಾನ್ ಎಬಿಡಿ ವಿಲಿಯರ್ಸ್ ಅವರಿಗೆ ನಾಯಕ ವಿರಾಟ್ ಕೊಹ್ಲಿ ತಲೆಬಾಗಿ ಅವರನ್ನು ಪ್ರಶಂಸಿಸಿದ್ದಾರೆ. ಐಪಿಎಲ್ 9 ಟೂರ್ನಿಯಲ್ಲೇ ಗುಜರಾತ್ ವಿರುದ್ಧದ ಕ್ವಾಲಿಫೈಯರ್ 1ರ ಪಂದ್ಯ ನಿಜಕ್ಕೂ ರೋಚಕವಾಗಿತ್ತು.

ಐಪಿಎಲ್ 2016: ವೇಳಾಪಟ್ಟಿ | ಯಾವ ತಂಡದಲ್ಲಿ ಯಾವ ಆಟಗಾರರು | ಗ್ಯಾಲರಿ

ಒಂದೆಡೆ ವಿಕೆಟ್ ಗಳು ಬೀಳುತ್ತಿದ್ದರೆ ಮತ್ತೊಂದೆಡೆ ತಂಡವನ್ನು ಗೆಲುವಿನತ್ತ ಕೊಂಡೊಯ್ಯುವಲ್ಲಿ ಶ್ರಮಿಸಿದ ಎಬಿಡಿ ವಿಲಿಯರ್ಸ್ ಓರ್ವ ಶ್ರೇಷ್ಠ ಆಟಗಾರ ಎಂದು ನಾಯಕ ವಿರಾಟ್ ಕೊಹ್ಲಿ ವಿಲಿಯರ್ಸ್ ರನ್ನು ಗುಣಗಾನ ಮಾಡಿದ್ದಾರೆ.[ಎಬಿಡಿ ಅಬ್ಬರ, ವಾಹ್ ಅಬ್ದುಲ್ಲಾ! ಆರ್ ಸಿಬಿ ಫೈನಲಿಗೆ!]

ಬೆಂಗಳೂರಿನಲ್ಲಿ ನಡೆದ ಮೊದಲ ಕ್ವಾಲಿಫೈಯರ್ ನಲ್ಲಿ ಲಯನ್ಸ್ ವಿರುದ್ಧ ಆರ್ ಸಿಬಿ ತಂಡ ಆರಂಭದಲ್ಲಿಯೇ ಪ್ರಮುಖ ಬ್ಯಾಟ್ಸ್ ಮನ್ ಗಳನ್ನು ಕಳೆದುಕೊಂಡು ಸೋಲಿನ ಸುಳಿಯಲ್ಲಿ ಸಿಲುಕಿಕೊಂಡಿರುವಗ ಎಬಿಡಿ ಅವರು ಕ್ರೀಸ್ ನಲ್ಲಿ ನೆಲೆಯೂರಿ ಏಕಾಂಗಿ ಹೋರಾಟ ನಡೆಸಿ ತಂಡವನ್ನು ಗೆಲ್ಲಿಸಿದ್ದು ನನ್ನ ಹಾಗೂ ಎಬಿಡಿ ವಿಲಿಯರ್ಸ್ ನಡುವೆ ಯಾರು ಶ್ರೇಷ್ಠರು ಎಂಬುವುದಕ್ಕೆ ಇದೆ ಉತ್ತರ. ನಾನು ಅವರ ಬ್ಯಾಟಿಂಗಿಗೆ ತಲೆಬಾಗುವೆ ಎಂದಿದ್ದಾರೆ ಕೊಹ್ಲಿ. [ಎಬಿಡಿ-ಕೊಹ್ಲಿ ನಿರ್ಮಿಸಿದ ದಾಖಲೆಗಳತ್ತ ಒಂದು ನೋಟ]

 IPL 2016: I bow down to AB de Villiers' inspiring knock, says Virat Kohli

ಅಬ್ದುಲ್ಲಾರನ್ನು ಕೊಂಡಾಡಿದ ವಿರಾಟ್ : ಕೊನೆಗಳಿಗೆಯಲ್ಲಿ ವಿಲಿಯರ್ಸ್ ಅವರಿಗೆ ಸಾಥ್ ನೀಡಿ ತಮ್ಮ ಆಕರ್ಷಕ ಹೊಡೆತಗಳೊಂದಿಗೆ ತಂಡಕ್ಕೆ ಗೆಲುವಿನ ರನ್ ತಂದುಕೊಟ್ಟ ಸ್ಪಿನ್ನರ್ ಇಕ್ಬಾಲ್ ಅಬ್ದುಲ್ಲಾ ಜವಾಬ್ದಾರಿಯುತವಾಗಿ ಆಡಿ ತಂಡವನ್ನು ಗೆಲಿಸಿರುವುದು ತುಂಬ ಖಷಿ ತಂದಿದೆ ಎಂದು ಯಂಗ್ ಮ್ಯಾನ್ ಅಬ್ದುಲ್ಲಾರನ್ನು ಕ್ಯಾಪ್ಟನ್ ಕೊಹ್ಲಿ ಹೊಗಳಿ ಕೊಂಡಾಡಿದರು. ಇಕ್ಬಾಲ್ ಅಬ್ದುಲ್ಲಾ 25 ಎಸೆತಗಳಲ್ಲಿ 33 ರನ್ (3x4, 1X6) ಗಳಿಸಿ ತಂಡಕ್ಕೆ ಆಸರೆಯಾಗಿದ್ದರು.

ಮೇ 24 ರಂದು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಮೈದಾನದಲ್ಲಿ ನಡೆದ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಗುಜರಾತ್ ಲಯನ್ಸ್ ತಂಡದ ವಿರುದ್ಧ ವಿಲಿಯರ್ಸ್ 47 ಎಸೆತಗಳಲ್ಲಿ 79 ರನ್ ಗಳಿಸಿ ತಂಡದ ಗೆಲುವಿಗೆ ಪ್ರಮುಖ ಪಾತ್ರಹಿಸಿದ್ದರು. ಇದರಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇಂಡಿಯನ್ ಪ್ರೀಮಿಯರ್ ಲೀಗ್ ಟುರ್ನಿಯಲ್ಲಿ ಫೈನಲ್ ಗೆ ಲಗ್ಗೆ ಹಾಕಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
AB de Villiers' calm and composed innings along with Iqbal Abdullah guided the Royal Challengers Bangalore to a four-wicket victory against Gujarat Lions in the first qualifier of IPL match on Tuesday at the Chinnaswami stadium here.
Please Wait while comments are loading...