ಪ್ರೀತಿ ಜಿಂಟಾ ತಂಡಕ್ಕೆ ಹುರುಪು ತುಂಬಲು ಆಮ್ಲಾ ಎಂಟ್ರಿ!

By: ಕ್ರಿಕೆಟ್ ಡೆಸ್ಕ್
Subscribe to Oneindia Kannada

ಮೊಹಲಿ, ಮೇ 04 : ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ಸ್ಪೆಷಲಿಸ್ಟ್ ಬ್ಯಾಟ್ಸ್ ಮನ್ ಹಶೀಂ ಆಮ್ಲಾ ಅವರು ಇಂಡಿಯನ್ ಪ್ರೀಮಿಯರ್ ಲೀಗ್ 2016 ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಪರ ಕಣಕ್ಕಿಳಿಯಲಿದ್ದಾರೆ. ಈ ಮೂಲಕ ಪ್ರೀತಿ ಜಿಂಟಾ ಸಹ ಮಾಲೀಕತ್ವದ ತಂಡಕ್ಕೆ ಒಂದಷ್ಟು ಹುರುಪು, ಉತ್ಸಾಹ ಬರುವ ನಿರೀಕ್ಷೆಯಿದೆ.

ಐಪಿಎಲ್ 2016: ವೇಳಾಪಟ್ಟಿ | ಯಾವ ತಂಡದಲ್ಲಿ ಯಾವ ಆಟಗಾರರು | ಗ್ಯಾಲರಿ

ಆಸ್ಟ್ರೇಲಿಯಾ ತಂಡದ ಬ್ಯಾಟ್ಸ್ ಮನ್ ಶಾನ್ ಮಾರ್ಷ್ ಏಪ್ರಿಲ್ 19 ರಂದು ಕೋಲ್ಕತ್ತಾ ವಿರುದ್ಧದ ಪಂದ್ಯದ ವೇಳೆ ಬೆನ್ನು ನೋವು ಕಾಣಿಸಿಕೊಂಡ ಪರಿಣಾಮ ಐಪಿಎಲ್ ಟೂರ್ನಿಯಿಂದ ಹೊರ ನಡೆದಿದ್ದಾರೆ. ಮಾರ್ಷ್ ಅವರ ಸ್ಥಾನವನ್ನು ದಕ್ಷಿಣ ಆಫ್ರಿಕಾದ ಹಿರಿಯ ಆಟಗಾರ ಬಲಗೈ ಬ್ಯಾಟ್ಸ್ ಮನ್ ಹಶೀಂ ಆಮ್ಲ ಅವರು ತುಂಬಲಿದ್ದಾರೆ. [ಪೀಟರ್ಸನ್ ಬದಲಿಗೆ ಉಸ್ಮಾನ್ ಸೇರ್ಪಡೆ]

IPL 2016: Hashim Amla set to replace Shaun Marsh at Kings XI

33 ವರ್ಷದ ಹಶೀಂ ಆಮ್ಲ 88 ಟಿ-20 ಪಂದ್ಯಗಳಲ್ಲಿ 31.35 ರ ಸರಾಸರಿಯಲ್ಲಿ 2446 ರನ್ ಗಳಿಸಿದ್ದಾರೆ. ಫೆಬ್ರವರಿಯಲ್ಲಿ ನಡೆದ ಐಪಿಎಲ್ ಸೀಸನ್ 9 ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ ಯಾವ ಪ್ರಾಂಚೈಸಿಗಳು ಇವರನ್ನು ಖರೀದಿಸದೆ ಅನ್ ಸೋಲ್ಡ್ ಆಗಿದ್ದರು.[ಐಪಿಎಲ್ 2016 : ಹೊರ ಹೋದ ಆಟಗಾರರ ಪಟ್ಟಿ]

ಈಗ ಬಯಸದೇ ಬಂದ ಭಾಗ್ಯ ಆಮ್ಲ ಅವರಿಗೆ ದೊರಕಿದೆ. ಪಂಜಾಬ್ 14 ಪಂದ್ಯಗಳಲ್ಲಿ ಆಡಿದ 7 ಪಂದ್ಯಗಳಲ್ಲಿ ಕೇವಲ 2 ಪಂದ್ಯದಲ್ಲಿ ಜಯಿಸುವ ಮೂಲಕ ಅಂಕಪಟ್ಟಿಯಲ್ಲಿ ಕೊನೆ ಸ್ಥಾನದಲ್ಲಿದೆ.

ಸೋಲಿನ ಸುಳಿಯಲ್ಲಿ ಸಿಲುಕಿರುವ ಕಿಂಗ್ಸ್ ತಂಡವನ್ನು ಆಮ್ಲ ಆಗಮನದಿಂದ ಗೆಲುವಿನ ಹಾದಿಗೆ ಮರಳುವುದೆ ಎಂಬುವುದು ಕಾದು ನೋಡಬೇಕಿದೆ. ಮೇ 4 ರಂದು ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ವಿರುದ್ಧ ಆಡಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
South Africa batsman Hashim Amla is set to replace the injured Shaun Marsh at Kings XI Punjab, Marsh was ruled out of IPL 2016 on Monday due to a back injury as per the ESPNcricinfo reports.
Please Wait while comments are loading...