ಧೋನಿ ಪಡೆಗೆ ಮಣ್ಣು ಮುಕ್ಕಿಸಿದ ರೈನಾರ ಹುಡುಗರು

Posted By:
Subscribe to Oneindia Kannada

ಅಹಮದಾಬಾದ್, ಏಪ್ರಿಲ್ 15: ಚೆನ್ನೈ ಸೂಪರ್ ಕಿಂಗ್ಸ್ ನಲ್ಲಿ ಜೋಡಿ ಜೀವದಂತೆ ಇದ್ದ ಧೋನಿ ಹಾಗೂ ರೈನಾ ಅವರು ಪರಸ್ಪರ ಎದುರಾಗಿ ಕಾದಾಡುವಂಥ ಪರಿಸ್ಥಿತಿಯನ್ನು ಐಪಿಎಲ್ 9 ತಂದಿದೆ. ಎಂಎಸ್ ಧೋನಿ ಸಾರಥ್ಯದ ರೈಸಿಂಗ್ ಪುಣೆ ಸೂಪರ್​ಜೈಂಟ್ಸ್ ತಂಡವನ್ನು ರೈನಾ ಅವರ ಗುಜರಾತ್ ಲಯನ್ಸ್ ತಂಡ 7 ವಿಕೆಟ್ ಗಳಿಂದ ಸೋಲಿಸಿ ವಿಜಯದ ನಗೆ ಬೀರಿದೆ.

ಐಪಿಎಲ್ 2016: ವೇಳಾಪಟ್ಟಿ | ಯಾವ ತಂಡದಲ್ಲಿ ಯಾವ ಆಟಗಾರರು | ಗ್ಯಾಲರಿ

ಗುಜರಾತ್ ಪರ ಆರೋನ್ ಫಿಂಚ್50 ರನ್( 36 ಎಸೆತಗಳು, 7 X4, 2X6) ಮತ್ತು ಬ್ರೆಂಡನ್ ಮೆಕ್ಕಲಂ 49 ರನ್,(31 ಎಸೆತಗಳು, 3X4, 3X6) ಭರ್ಜರಿ ಆಟ ಪ್ರದರ್ಶಿಸಿ ತಂಡಕ್ಕೆ ಎರಡನೇ ಜಯ ತಂದುಕೊಟ್ಟರು. [ಪಂದ್ಯದ ಸ್ಕೋರ್ ಕಾರ್ಡ್]

IPL 2016: Gujarat Lions thrash Rising Pune Supergiants

ಇದಕ್ಕೂ ಮುನ್ನ ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಧೋನಿ ಅವರ ಪುಣೆ ತಂಡ ಮೊದಲ 10 ಓವರ್​ಗಳಲ್ಲಿಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿತು. [ಅಂಕ ಪಟ್ಟಿ]

ಆದರೆ, ಅಂತಿಮವಾಗಿ 20 ಓವರ್ ಗಳಲ್ಲಿ 5 ವಿಕೆಟ್​ಗೆ 163 ರನ್ ಗಳಿಸಲು ಮಾತ್ರ ಸಾಧ್ಯವಾಯಿತು. ಈ ಗುರಿಯನ್ನು ಗುಜರಾತ್ ತಂಡ 18 ಓವರ್​ಗಳಲ್ಲಿ 3 ವಿಕೆಟ್​ ಕಳೆದು ಕೊಂಡು ಸಾಧಿಸಿತು.

IPL 2016: Gujarat Lions thrash Rising Pune Supergiants

ಫಿಂಚ್, ಮೆಕ್ಕಲಂ ಅಬ್ಬರದ ಬ್ಯಾಟಿಂಗಿಗೆ ನಾಯಕ ಸುರೇಶ್ ರೈನಾ (24), ಬ್ರಾವೊ ಅಜೇಯ 22 ಸಾಥ್ ನೀಡಿ ರನ್ ಚೇಸ್ ಸುಲಭ ಮಾಡಿದರು. ಧೋನಿ ಅವರ ಯಾವುದೇ ತಂತ್ರಗಾರಿಕೆ ಫಲ ನೀಡಲಿಲ್ಲ.

ಪುಣೆ ಪರ ದಕ್ಷಿಣ ಆಫ್ರಿಕಾ ಬ್ಯಾಟ್ಸ್​ಮನ್ ಫಾಫ್ ಡು ಪ್ಲೆಸಿಸ್ 69 ರನ್(43 ಎಸೆತಗಳು, 5X4, 4X6) ಗಳಿಸಿದ್ದು ಬಿಟ್ಟರೆ ಮಿಕ್ಕವರು ಹೆಚ್ಚು ಹೊತ್ತು ಕ್ರೀಸ್ ನಲ್ಲಿ ನಿಲ್ಲಲು ಮನಸ್ಸು ಮಾಡಲಿಲ್ಲ. ಆರಂಭಿಕ ಆಟಗಾರ ಅಜಿಂಕ್ಯ ರಹಾನೆ 21 ರನ್ ಗಳಿಸಿದರು. ಮಿಕ್ಕಂತೆ ಕೆವಿನ್ ಪೀಟರ್ಸೆನ್(37), ನಾಯಕ ಧೋನಿ ಅಜೇಯ 22ರನ್, 10ಎಸೆತ, 2 ‌x4, 1x6) ಗಳಿಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Gujarat Lions produced an impressive all-round performance to outclass Rising Pune Supergiants by seven wickets in their Indian Premier League 2016 (IPL 9) tie at the Saurashtra Cricket Association Stadium here on Thursday (April 14).
Please Wait while comments are loading...