ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಗುಜರಾತಿಗೆ ಡೆವಿಲ್ ನಂತೆ ಕಾಡಿದ ಮೋರಿಸ್ ತಿಂದಿದ್ದೇನು?

By Mahesh

ಅಹಮದಾಬಾದ್, ಏಪ್ರಿಲ್ 29: ಗುಜರಾತ್ ಲಯನ್ಸ್ ತಂಡದ ವಿರುದ್ಧ ದಕ್ಷಿಣ ಆಫ್ರಿಕಾ ಆಲ್ರೌಂಡರ್ ಕ್ರಿಸ್ ಮೋರಿಸ್ ವೀರಾವೇಶದ ಹೋರಾಟ ಪ್ರೇಕ್ಷಕರನ್ನು ಸಕತ್ತಾಗಿ ರಂಜಿಸಿದೆ. ಡೆಲ್ಲಿ ಡೆರ್ ಡೇವಿಲ್ಸ್ ತಂಡ ಮೋರಿಸ್ ಏನು ತಿಂದು ಬಂದಿದ್ದ ಎಂಬ ಪ್ರಶ್ನೆ ಎದ್ದಿದೆ.

ಐಪಿಎಲ್ 2016: ವೇಳಾಪಟ್ಟಿ | ಯಾವ ತಂಡದಲ್ಲಿ ಯಾವ ಆಟಗಾರರು | ಗ್ಯಾಲರಿ

ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ನ ಉತ್ತಮ ಪ್ರದರ್ಶನಗಳಲ್ಲಿ ಒಂದೆನಿಸಿರುವ ಕ್ರಿಸ್ ಮೋರಿಸ್ ಆಟಕ್ಕೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಮುಖ್ಯವಾಗಿ ಕೋಚ್ ರಾಹುಲ್ ದ್ರಾವಿಡ್ ಅವರು ಮೋರಿಸ್ ಹೋರಾಟದ ಆಟವನ್ನು ಹೊಗಳಿದ್ದಾರೆ.[ಆರ್ ಸಿಬಿಗೆ ಮಿಚಲ್ ಬದಲಿಗೆ ಕ್ರಿಸ್ ಜೋರ್ಡನ್!]

ದಕ್ಷಿಣ ಆಫ್ರಿಕಾ ಆಲ್ರೌಂಡರ್ ಕ್ರಿಸ್ ಮೋರಿಸ್ ಅಜೇಯ 82ರನ್ (32 ಎಸೆತಗಳು, 4 X4, 8 X6) ಬಾರಿಸಿದರು. ಐಪಿಎಲ್ 20016ರ ಅತಿ ವೇಗದ ಅರ್ಧಶತಕ ಬಾರಿಸಿದರೂ ಡೆಲ್ಲಿ ಡೇರ್​ಡೆವಿಲ್ಸ್ ತಂಡದಿಂದ ವಿಜಯವನ್ನು ಗುಜರಾತ್ ಲಯನ್ಸ್ ಕಸಿದುಕೊಂಡಿತು.[]

 IPL 2016: Gujarat Lions survive Chris Morris' onslaught to win by 1 run

ಕ್ರಿಸ್ ಮೋರಿಸ್ ಏನ್ ತಿನ್ನುತ್ತಾರೆ?: ಪಕ್ಕಾ ಫ್ಯಾಮಿಲಿ ಮ್ಯಾನ್ ಎನಿಸಿಕೊಂಡಿರುವ ಕ್ರಿಸ್ ತಮ್ಮ ಊಟದ ಬಗ್ಗೆ ಮಾತನಾಡುತ್ತಾ, 'ನಾನು ಯಾವತ್ತಿಗೂ ಡಯೆಟ್ ಮಾಡುವುದಿಲ್ಲ. ಸಿಕ್ಕಿದ್ದೆಲ್ಲ ತಿನ್ನುವ ಅಭ್ಯಾಸ ಇಟ್ಟುಕೊಂಡವನು. ಆದರೆ, ಪಂದ್ಯದ ದಿನ ನಾನು ಬೇಯಿಸಿದ ಮೊಟ್ಟೆ, ಬಾಳೆ ಹಣ್ಣು, ಪ್ರೋಟಿನ್ ಹಾಗೂ ಪೋಟಾಶಿಯಂಯುಕ್ತ ಆಹಾರ ಮಾತ್ರ ಸೇವಿಸುತ್ತೇನೆ. ಬಿಸಿಲ ಬೇಗೆಯಿಂದ ಪಾರಾಗಲು ಸಾಕಷ್ಟು ದ್ರವಾಹಾರ ಸೇವಿಸುತ್ತಾ ಬಂದಿದ್ದೇನೆ ಎಂದಿದ್ದಾರೆ.[ಕೊಹ್ಲಿ ಶತಕ ವ್ಯರ್ಥ, ಆರ್ ಸಿಬಿ ವಿರುದ್ಧ ಗುಜರಾತಿಗೆ ಜಯ]

ತಿನ್ನುವುದರ ಜೊತೆಗೆ ಆಡುಗೆ ಮಾಡುವುದರಲ್ಲಿಯೂ ಕ್ರಿಸ್ ಮೋರಿಸ್ ಅವರು ಸಿದ್ಧಹಸ್ತ. ನಾನು ಒಳ್ಳೆ ಪಾಸ್ತಾ ಮಾಡುತ್ತೇನೆ. ಮಾಂಸ ಬೇಯಿಸುವುದರಲ್ಲೂ ಒಳ್ಳೆ ಪರಿಣಿತಿ ಇದೆ. ನಾನು ಮಾಯಾಂಕ್, ಶ್ರೇಯಸ್ ಅಡುಗೆ ಸ್ಪರ್ಧೆ ನಡೆಸಿದ್ದಾಗ ನಾನೇ ಗೆದ್ದಿದ್ದೆ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. [ವಿಶ್ವ ದಾಖಲೆ ಸ್ಥಾಪಿಸಿದ ವೇಗಿ ಡ್ವಾಯ್ನೆ ಬ್ರಾವೋ]



ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ಮೋರಿಸ್ ಅಲ್ಲದೆ ಡ್ವಾಯ್ನೆ ಸ್ಮಿತ್ 30 ಎಸೆತಗಳಲ್ಲಿ 53ರನ್, ಬ್ರೆಂಡನ್ ಮೆಕಲಮ್ 36 ಎಸೆತಗಳಲ್ಲಿ 60ರನ್, ಇಮ್ರಾನ್ ತಾಹೀರ್ 24ಕ್ಕೆ 3 ಗಳಿಸಿ ಗಮನ ಸೆಳೆದರು.[ಡೋನಾಲ್ಡ್ ಮೇಲೆ ಆಸ್ಟ್ರೇಲಿಯನ್ನರ ಕಣ್ಣು]

ಕ್ರಿಸ್ ಮೋರಿಸ್ ಜೊತೆ ರನ್ ಚೇಸ್ ನಲ್ಲಿ ಭಾಗಿಯಾಗಿದ ಜೆಪಿ ಡುಮಿನಿ 48 ರನ್ (43 ಎಸೆತ) ಗಳಿಸಿ ಔಟಾದಾಗಲೇ ಪಂದ್ಯದ ಹಣೆಬರಹ ಬಹುತೇಕ ಮುಗಿಯಿತು ಎಂದುಕೊಂಡಿದ್ದರು. ಆದರೆ, ಕೊನೆ ಎಸೆತದ ತನಕ ಪಂದ್ಯ ಸಾಗಿ ರೋಚಕತೆ ಉಳಿಸಿಕೊಂಡಿತು.

ಡೆಲ್ಲಿ ವಿರುದ್ಧ ಲಯನ್ಸ್ ಗೆದ್ದರೂ ಕೊನೆ 6 ಚಿಲ್ಲರೆ ಓವರ್ ಗಳಲ್ಲಿ 87ರನ್ ಚೆಚ್ಚಿಸಿಕೊಂಡಿದ್ದರ ಬಗ್ಗೆ ಯೋಚಿಸಬೇಕಿದೆ. ಪ್ರವೀಣ್ ಕುಮಾರ್ ಎಸೆದ 19ನೇ ಓವರ್​ನಲ್ಲಿ ಕೇವಲ 4 ರನ್ ಬಂದಿದ್ದು ಕೂಡಾ ಡೆಲ್ಲಿಗೆ ಮುಳುವಾಯಿತು. ಪಂದ್ಯ ಮುಗಿದು ಎರಡು ದಿನವಾದರೂ ಹೈಲೇಟ್ಸ್ ವಿಡಿಯೋಗಳ ಪೈಕಿ ಕ್ರಿಸ್ ಮೋರಿಸ್ ಭರ್ಜರಿ ಸಿಕ್ಸರ್ ಗಳು ಮತ್ತೆ ಮತ್ತೆ ನೋಡುವಂತೆ ಮಾಡಿದೆ.

Story first published: Wednesday, January 3, 2018, 10:03 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X