ಟ್ವೆಂಟಿ20: ವಿಶ್ವ ದಾಖಲೆ ಸ್ಥಾಪಿಸಿದ ವೇಗಿ ಡ್ವಾಯ್ನೆ ಬ್ರಾವೋ

Posted By:
Subscribe to Oneindia Kannada

ಮೊಹಾಲಿ, ಏಪಿರ್ಲ್ 12: ಇಂಡಿಯನ್ ಪ್ರಿಮಿಯರ್ ಲೀಗ್ ನ ಹೊಚ್ಚ ಹೊಸ ತಂಡ ಗುಜರಾತ್ ಲಯನ್ಸ್ ಪರ ಆಡುತ್ತಿರುವ ವೆಸ್ಟ್ ಇಂಡೀಸ್ ನ ಆಲ್ ರೌಂಡರ್ ಡ್ವಾಯ್ನೆ ಬ್ರಾವೋ ಅವರು ಮೊದಲ ಪಂದ್ಯದಲ್ಲೇ ದಾಖಲೆ ಸ್ಥಾಪಿಸಿದ್ದಾರೆ. ಸೋಮವಾರ(ಏಪ್ರಿಲ್ 11) ಕಿಂಗ್ಸ್ XI ಪಂಜಾಬ್ ವಿರುದ್ಧ ನಡೆದ ಪಂದ್ಯದಲ್ಲಿ ನಾಲ್ಕು ವಿಕೆಟ್ ಗಳಿಸಿದ ಬ್ರಾವೋ ಅವರು ಹೊಸ ಟ್ವೆಂಟಿ20 ವಿಶ್ವ ದಾಖಲೆ ಬರೆದರು.

ಐಪಿಎಲ್ 2016: ವೇಳಾಪಟ್ಟಿ | ಯಾವ ತಂಡದಲ್ಲಿ ಯಾವ ಆಟಗಾರರು | ಗ್ಯಾಲರಿ

32 ವರ್ಷ ವಯಸ್ಸಿನ ಬ್ರಾವೋ ಅವರು ಟ್ವೆಂಟಿ20 ಕ್ರಿಕೆಟ್ ಇತಿಹಾಸದಲ್ಲೇ 300 ವಿಕೆಟ್ ಗಳಿಸಿದ ಮೊದಲ ಬೌಲರ್ ಎನಿಸಿದರು. ಇತ್ತೀಚಿಗೆ ವಿಶ್ವ ಟಿ20 ಕಪ್ ಗೆದ್ದ ಖುಷಿಯಲ್ಲಿ ಬ್ರಾವೋ ಅವರು ಚಾಂಪಿಯನ್ ಡ್ಯಾನ್ಸ್ ಮೂಲಕ ಎಲ್ಲರ ಗಮನ ಸೆಳೆದಿದ್ದರು.

IPL 2016, Gujarat Lions' Dwayne Bravo sets world record

ವೆಸ್ಟ್ ಇಂಡೀಸ್ ನ ಬ್ರಾವೋ ಅವರು ಪಂಜಾಬ್ ನಾಯಕ ಡೇವಿಡ್ ಮಿಲ್ಲರ್ ಅವರ ವಿಕೆಟ್ ಪಡೆಯುವ ಮೂಲಕ 300 ವಿಕೆಟ್ ಗಡಿ ದಾಟಿದರು. ಇದಕ್ಕೂ ಮುನ್ನ ಶ್ರೀಲಂಕಾದ ವೇಗಿ ಲಸಿತ್ ಮಾಲಿಂಗ(299 ವಿಕೆಟ್ ಗಳು) ಅವರು ಎಲ್ಲರಿಗಿಂತ ಮುಂದಿದ್ದರು.[ಪಂಜಾಬ್ ಕಿಂಗ್ಸ್ ಮಣಿಸಿದ ಗುಜರಾತಿನ ಲಯನ್ಸ್]

ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್, ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ನಂತರ ಈ ಬಾರಿ ಗುಜರಾತ್ ಲಯನ್ಸ್ ಪರ ಆಲ್ ರೌಂಡರ್ ಬ್ರಾವೋ ಆಡುತ್ತಿದ್ದಾರೆ. ಇದಲ್ಲದೆ ಆಸ್ಟ್ರೇಲಿಯಾದ ಬಿಗ್ ಬ್ಯಾಷ್ ಲೀಗ್ (ಬಿಬಿಎಲ್) ನಲ್ಲಿ ಮೆಲ್ಬೋರ್ನ್ ರೆನೆಗೇಡ್ಸ್ ಹಾಗೂ ಸಿಡ್ನಿ ಸಿಕ್ಸರ್ಸ್ ಪರ ಕೂಡಾ ಆಡಿದ್ದಾರೆ.

ಕೆರಿಬಿಯನ್ ಪ್ರಿಮಿಯರ್ ಲೀಗ್ ನಲ್ಲಿ ಟ್ರಿನಿಡಾಡ್ ಹಾಗೂ ಟೊಬ್ಯಾಗೀ, ಟ್ರಿನಿಡಾಡ್ ಹಾಗೂ ಟೊಬ್ಯಾಗೋ ರೆಡ್ ಸ್ಟೀಲ್, ಪಾಕಿಸ್ತಾನ ಸೂಪರ್ ಲೀಗ್ ನಲ್ಲಿ ಲಾಹೋರ್ ಕಲಂದರ್ಸ್ ಪರ ಆಡಿದ್ದಾರೆ.

ಇಂಗ್ಲೆಂಡಿನಲ್ಲಿ ಎಸೆಕ್ಸ್, ಕೆಂಟ್ ಅಲ್ಲದೆ, ಬಾಂಗ್ಲಾದೇಶ ಪ್ರಿಮಿಯರ್ ಲೀಗ್ ನಲ್ಲಿ ಚಿತ್ತ್ತಗಾಂಗ್ ಕಿಂಗ್ಸ್, ದಕ್ಷಿಣ ಆಫ್ರಿಕಾದಲ್ಲಿ ಡಾಲ್ಫಿನ್ಸ್ ಪರ ಆಡಿದ್ದಾರೆ.

ಟ್ವೆಂಟಿ20 ಕ್ರಿಕೆಟ್ ನಲ್ಲಿ ಅತಿ ಹೆಚ್ಚು ವಿಕೆಟ್ ಗಳಿಸಿದ ಬೌಲರ್ ಗಳು:
*
302 (292 ಪಂದ್ಯಗಳು) - ಡ್ವಾಯ್ನೆ ಬ್ರಾವೋ (ವೆಸ್ಟ್ ಇಂಡೀಸ್)
* 299 (221) - ಲಸಿತ್ ಮಾಲಿಂಗ (ಶ್ರೀಲಂಕಾ)
* 277 (217) - ಯಾಸಿರ್ ಅರಾಫತ್ (ಪಾಕಿಸ್ತಾನ)
* 263 (225) - ಅಲ್ಫಾನ್ಸೋ ಥಾಮಸ್ (ದಕ್ಷಿಣ ಆಫ್ರಿಕಾ)
* 257 (215) - ಡಿರ್ಕ್ ನ್ಯಾನ್ಸ್ (ಆಸ್ಟ್ರೇಲಿಯಾ, ನೆದರ್ಲೆಂಡ್ಸ್)

(ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Mohali: West Indies' all-rounder Dwayne Bravo set a world record last night (April 11) during an Indian Premier League 2016 (IPL 9) match here.
Please Wait while comments are loading...