ಕೊಹ್ಲಿ ಶತಕ ವ್ಯರ್ಥ, ಆರ್ ಸಿಬಿ ವಿರುದ್ಧ ಗುಜರಾತಿಗೆ ಜಯ

Posted By:
Subscribe to Oneindia Kannada

ಬೆಂಗಳೂರು, ಏಪ್ರಿಲ್ 24: ಗುಜರಾತ್ ಲಯನ್ಸ್ ತಂಡ ಮತ್ತೆ ಗೆಲುವಿನ ಹಾದಿಗೆ ಮರಳಿದೆ. ವಿರಾಟ್ ಕೊಹ್ಲಿ ಅವರ ಚೊಚ್ಚಲ ಶತಕ ವ್ಯರ್ಥವಾಯಿತು. ಆರ್ ಸಿಬಿ ನೀಡಿದ್ದ 181 ರನ್ ಗುರಿಯನ್ನು ಇನ್ನು ಮೂರು ಎಸೆತಗಳು ಬಾಕಿ ಇರುವಂತೆ ಸಾಧಿಸಿದ ಗುಜರಾತ್ ಲಯನ್ಸ್ ತಂಡ 6 ವಿಕೆಟ್ ಗಳಿಂದ ಸೋಲಿಸಿತು.

19.3 ಓವರ್​ಗೆ ಗುಜರಾತ್ ಲಯನ್ಸ್ 4 ವಿಕೆಟ್ ನಷ್ಟಕ್ಕೆ 182 ರನ್ ಗಳಿಸಿದ ಗುಜರಾತ್ ಲಯನ್ಸ್ ತಂಡ ಮತ್ತೆ ಗೆಲುವಿನ ಹಾದಿ ಹಿಡಿದಿದೆ. ಸತತ ಮೂರು ಪಂದ್ಯಗಳನ್ನು ಗೆದ್ದ ನಂತರ ಪಂದ್ಯವನ್ನೊಂದು ಕಳೆದುಕೊಂಡಿತ್ತು.[ಸಂಪೂರ್ಣ ಸ್ಕೋರ್ ಕಾರ್ಡ್]

Suresh Raina

ಗುಜರಾತ್ ತಂಡದ ಪರ ಡ್ವಾಯ್ನೆ ಸ್ಮಿತ್ 21 ಎಸೆತಗಳಲ್ಲಿ 32 ರನ್, ಬ್ರೆಂಡನ್ ಮೆಕಲಮ್ 24 ಎಸೆತೆಗಳಲ್ಲಿ 42 ರನ್ ಗಳಿಸಿ ಉತ್ತಮ ಆರಂಭ ಒದಗಿಸಿದರು. ನಂತರ ನಾಯಕ 24 ಎಸೆತಗಳಲ್ಲಿ 28 ರನ್, ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಅಜೇಯ 50 ರನ್, ರವೀಂದ್ರ ಜಡೇಜ 10 ಎಸೆತಗಳಲ್ಲಿ 12 ರನ್ ಗಳಿಸಿ ತಂಡದ ಗೆಲುವಿಗೆ ತಮ್ಮ ಕೊಡುಗೆ ನೀಡಿದರು.

ಕೊನೆ ಎರಡು ಓವರ್ ಗಳಲ್ಲಿ ಪಂದ್ಯ ಕುತೂಹಲ ಮೂಡಿಸಿದರೂ ವಿಕೆಟ್ ಉಳಿಸಿಕೊಂಡಿದ್ದ ಗುಜರಾತ್ ತಂಡ ಒಂದೆರಡು ವಿಕೆಟ್ ಕಳೆದುಕೊಂಡರೂ 20 ಅಧಿಕ ರನ್ ಸುಲಭವಾಗಿ ಗಳಿಸಿ ವಿಜಯದ ನಗೆ ಬೀರಿತು.

Virat Kohli in action

ಕೊಹ್ಲಿ ಆಕರ್ಷಕ ಶತಕ: ಇದಕ್ಕೂ ಮುನ್ನ ವಿರಾಟ್ ಕೊಹ್ಲಿ ಅವರು ಅಜೇಯ 100 ಮತ್ತು ಕನ್ನಡಿಗ ಕೆ.ಎಲ್.ರಾಹುಲ್ ಅಜೇಯ 51 ಜೊತೆಯಾಟದ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 20 ಓವರ್ ಗಳಲ್ಲಿ 180 ರನ್ ಗಳಿಸಿತು.

ಕಳೆದ ನಾಲ್ಕು ಪಂದ್ಯಗಳಲ್ಲಿ ಟಾಸ್ ಸೋತಿದ್ದ ವಿರಾಟ್ ಕೊಹ್ಲಿ ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಕೆಎಲ್ ರಾಹುಲ್ ಬದಲಿಗೆ ಆರಂಭಿಕ ಆಟಗಾರರಾಗಿ ಶೇನ್ ವಾಟ್ಸನ್ ಕಣಕ್ಕಿಳಿದರು.

ಆದರೆ, 6 ರನ್ ಗಳಿಸಿ ವಾಟ್ಸನ್ ಔಟಾದರೆ, ಎಬಿ ಡಿವಿಲಿಯಸ್ 16 ಎಸೆತಗಳಲ್ಲಿ 20 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ನಂತರ ಬಂದ ರಾಹುಲ್ 35 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದರು. 4 ಬೌಂಡರಿ, 3 ಸಿಕ್ಸರ್ ಬಾರಿಸಿದರು. ಕೊಹ್ಲಿ 63 ಎಸೆತಗಳಲ್ಲಿ 11X4, 1X6 ಬಾರಿಸಿ ಆಕರ್ಷಕ ಬ್ಯಾಟಿಂಗ್ ಪ್ರದರ್ಶಿಸಿದರು.

ಕೊಹ್ಲಿ ಶತಕ ವ್ಯರ್ಥ, ಆರ್ ಸಿಬಿ ವಿರುದ್ಧ ಗುಜರಾತಿಗೆ ಜಯ

ಕೊಹ್ಲಿ ಶತಕ ವ್ಯರ್ಥ, ಆರ್ ಸಿಬಿ ವಿರುದ್ಧ ಗುಜರಾತಿಗೆ ಜಯ

-
-
-
-

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Suresh Raina -led Gujarat Lions back to winning ways after losing two matches. Virat Kohli's maiden IPL ton goes in vain as Gujarat Lions beat Royal challengers Banaglore by 6 wickets in IPL 2016 encounter played at Rajkot today (April 24). GL reached the target of 181 runs with 3 balls to spare.
Please Wait while comments are loading...