ಏಪ್ರಿಲ್ 8ಕ್ಕೆ ಗ್ಲಾಮರ್ ಸ್ಪರ್ಶದೊಂದಿಗೆ ಐಪಿಎಲ್ 9ಕ್ಕೆ ಚಾಲನೆ

Posted By:
Subscribe to Oneindia Kannada

ಮುಂಬೈ, ಏಪ್ರಿಲ್ 02: ವಿಶ್ವ ಟ್ವೆಂಟಿ20 ಅತಿಥ್ಯವಹಿಸಿದ್ದ ಭಾರತದ ಸ್ಟೇಡಿಯಂಗಳು ಈಗ ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) 9ನೇ ಆವೃತ್ತಿಗೆ ಸಜ್ಜಾಗುತ್ತಿವೆ. ಏಪ್ರಿಲ್ 09ರಿಂದ ಆರಂಭವಾಗಲಿರುವ ಟೂರ್ನಮೆಂಟ್ ಗೆ ಏಪ್ರಿಲ್ 08ರಂದು ಗ್ಲಾಮರ್ ಟಚ್ ಮೂಲಕ ಚಾಲನೆ ಸಿಗಲಿದೆ.

ಐಪಿಎಲ್ 2016 ಸಂಪೂರ್ಣ ವೇಳಾಪಟ್ಟಿ | ಯಾವ ತಂಡದಲ್ಲಿ ಯಾವ ಆಟಗಾರರಿದ್ದಾರೆ?

ಏಪ್ರಿಲ್ 8ರಂದು ಬಾಲಿವುಡ್ ತಾರೆಯರ ನೃತ್ಯದೊಂದಿಗೆ ಐಪಿಎಲ್ ಗ್ಲಾಮರಸ್ ಆರಂಭ ಪಡೆಯಲಿದೆ. ನಟಿಯರಾದ ಕತ್ರೀನಾ ಕೈಫ್, ಜಾಕ್ವೆಲಿನ್ ಫೆರ್ನಾಂಡಿಸ್, ಗಾಯಕ ಹನಿ ಸಿಂಗ್, ನಟ ರಣವೀರ್ ಸಿಂಗ್ ಮುಂತಾದವರು ಅದ್ದೂರಿ ಆರಂಭೋತ್ಸವದ ಪ್ರಮುಖ ಆಕರ್ಷಣೆಯಾಗಲಿದ್ದಾರೆ ಎಂದು ಸಮಾರಂಭ ಆಯೋಜಿಸುವ ಹಕ್ಕು ಪಡೆದಿರುವ 'ಫೆರಿಸ್​ವೀಲ್ ಎಂಟರ್​ಟೈನ್​ವೆುಂಟ್' ಸಂಸ್ಥೆ ಹೇಳಿದೆ.[ಡೆಲ್ಲಿ ತಂಡಕ್ಕೆ ಸಲಹೆಗಾರರಾಗಿ ರಾಹುಲ್ ದ್ರಾವಿಡ್]

IPL 2016: Glamour-filled opening ceremony on April 8

ಸಮಾರಂಭದಲ್ಲಿ 200 ನೃತ್ಯಗಾರರು, ದೊಡ್ಡ ಸಂಖ್ಯೆಯ ಜನಪದ ಕಲಾವಿದರು ಮತ್ತು ತಾಳವಾದ್ಯದವರೂ ಭಾಗವಹಿಸಲಿದ್ದಾರೆ. ಬ್ರಿಟನ್ ಮೂಲದ ಪಾಪ್ ಬ್ಯಾಂಡ್ 'ಟಿಬಿಸಿ' ಕೂಡಾ ಉದ್ಘಾಟನಾ ಸಮಾರಂಭದಲ್ಲಿ ಶೋ ನೀಡಲಿದೆ.[ಆರ್ ಸಿಬಿ ತೆಕ್ಕೆಗೆ ಕೆಎಲ್ ರಾಹುಲ್, ರಸೂಲ್]

ಸಮಾರಂಭದ ಮರುದಿನ ಏಪ್ರಿಲ್ 9ರಂದು ವಾಂಖೆಡೆ ಕ್ರೀಡಾಂಗಣದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಮತ್ತು ಧೋನಿ ನೇತೃತ್ವದ ಹೊಸ ತಂಡ ರೈಸಿಂಗ್ ಪುಣೆ ಸೂಪರ್​ಜೈಂಟ್ಸ್ ನಡುವೆ ಉದ್ಘಾಟನಾ ಪಂದ್ಯ ನಡೆಯಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A glamour-filled opening ceremony, featuring Bollywood personalities and all-girl English pop band TBC, is in the offing for Season 9 of the Indian Premier League that starts here on April 9.
Please Wait while comments are loading...