ಗೌತಮ್ 'ಗಂಭೀರ' ಆಟ, ಕೆಕೆಆರ್ ಗೆ ಗೆಲುವು

Posted By:
Subscribe to Oneindia Kannada

ಹೈದರಾಬಾದ್, ಏಪ್ರಿಲ್ 17: ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕ ಗೌತಮ್ ಗಂಭೀರ್ ಅವರ ಅರ್ಧಶತಕದ ನೆರವಿನಿಂದ ಕೆಕೆಆರ್ ತಂಡಕ್ಕೆ ಸನ್ ರೈಸರ್ಸ್ ವಿರುದ್ಧ ಗೆಲುವು ಸಿಕ್ಕಿದೆ.

ಐಪಿಎಲ್ 2016: ವೇಳಾಪಟ್ಟಿ | ಯಾವ ತಂಡದಲ್ಲಿ ಯಾವ ಆಟಗಾರರು | ಗ್ಯಾಲರಿ

ರನ್ ಚೇಸ್ ನಲ್ಲಿ ಗಂಭೀರವಾದ ಆಟವಾಡಿದ ಗೌತಮ್ ಅಜೇಯ 90 ರನ್(60 ಎಸೆತಗಳು, 13X4, 1X6) ಹಾಗೂ ಆರಂಭಿಕ ಆಟಗಾರ ರಾಬಿನ್ ಉತ್ತಪ್ಪ 38 ರನ್(34 ಎಸೆತಗಳು, 3X4, 1X6) ನೆರವಿನಿಂದ ಕೋಲ್ಕತ್ತಾ ನೈಟ್​ರೈಡರ್ಸ್ ತಂಡ 8 ವಿಕೆಟ್​ಗಳಿಂದ ಸನ್​ರೈಸರ್ಸ್ ಹೈದರಾಬಾದ್ ತಂಡವನ್ನು ಸೋಲಿಸಿತು. [ಪಂದ್ಯದ ಸ್ಕೋರ್ ಕಾರ್ಡ್]

IPL 2016: Gautam Gambhir's 90* hands KKR 2nd win

ಇದಕ್ಕೂ ಮುನ್ನ ಇಲ್ಲಿನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ಟಾಸ್ ಗೆದ್ದ ಅತಿಥೇಯ ತಂಡವಾದ ಸನ್​ರೈಸರ್ಸ್ ಮೊದಲು ಬ್ಯಾಟಿಂಗ್ ಮಾಡಿತು. ಸನ್​ರೈಸರ್ಸ್ ತಂಡ 7 ವಿಕೆಟ್​ಗೆ 142 ರನ್ ಕಷ್ಟಪಟ್ಟು ಗಳಿಸಿತು. ಈ ಗುರಿಯನ್ನು ಕೆಕೆಆರ್ 18.2 ಓವರ್​ಗಳಲ್ಲಿ 2 ವಿಕೆಟ್​ ಕಳೆದುಕೊಂಡು ಸುಲಭವಾಗಿ ದಾಟಿತು. [ಅಂಕ ಪಟ್ಟಿ]

ತಂಡದ ಮೊತ್ತ 50 ರನ್ ಆಗುವಷ್ಟರಲ್ಲೇ 4 ವಿಕೆಟ್ ಕಳೆದುಕೊಂಡಿದ್ದ ಹೈದರಾಬಾದಿಗೆ ಇಂಗ್ಲೆಂಡಿನ ಇಯಾನ್ ಮಾರ್ಗನ್ ಆಸರೆಯಾದರು. ಕೆಕೆಆರ್ ಹಾಗೂ ಸನ್ ರೈಸರ್ಸ್ ಹೈದರಾಬಾದ್ ಪಂದ್ಯದ ಚಿತ್ರಗಳನ್ನು ಗ್ಯಾಲರಿಯಲ್ಲಿ ನೋಡಿ....

ಗೌತಮ್ 'ಗಂಭೀರ' ಆಟ, ಕೆಕೆಆರ್ ಗೆ ಗೆಲುವು

ಗೌತಮ್ 'ಗಂಭೀರ' ಆಟ, ಕೆಕೆಆರ್ ಗೆ ಗೆಲುವು

ಗೌತಮ್ 'ಗಂಭೀರ' ಆಟ, ಕೆಕೆಆರ್ ಗೆ ಗೆಲುವು

ಗೌತಮ್ 'ಗಂಭೀರ' ಆಟ, ಕೆಕೆಆರ್ ಗೆ ಗೆಲುವು

-
-
-
-
-
-
-

ಮಾರ್ಗನ್ 51ರನ್ (43 ಎಸೆತಗಳು, 3 X4, 2X6) ಹಾಗೂ ವಿಕೆಟ್ ಕೀಪರ್ ನಮನ್ ಓಜಾ 37 ರನ್(28 ಎಸೆತಗಳು, 2X4, 2X6) ಇಬ್ಬರ 67 ರನ್ ಜತೆಯಾಟದಿಂದ ತಂಡ ಉತ್ತಮ ಮೊತ್ತ ಕಲೆಹಾಕುವ ಕುರುಹು ತೋರಿತು. ಆದರೆ, ಮಾರ್ಕೆಲ್ ಹಾಗೂ ಸುನಿಲ್ ನಾರಾಯಣ್ ಸೇರಿದಂತೆ ಕೆಕೆಆರ್ ಬೌಲರ್ ಗಳು ಸನ್ ರೈಸರ್ಸ್ ತಂಡವನ್ನು ಕಟ್ಟಿ ಹಾಕಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Kolkata Knight Riders (KKR) rode on an unbeaten 60-ball knock of 90 from captain Gautam Gambhir after an impressive bowling performance to grab an eight-wicket victory over Sunrisers Hyderabad in an Indian Premier League 2016 (IPL 9) encounter
Please Wait while comments are loading...