ಕುರ್ಚಿ ಒದ್ದ ಗಂಭೀರ್ ಗೆ ದಂಡ, ವಿರಾಟ್ ಕೊಹ್ಲಿಗೂ ನಷ್ಟ

Posted By:
Subscribe to Oneindia Kannada

ಬೆಂಗಳೂರು, ಮೇ 04: ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಂಡದ ನಾಯಕ ಗೌತಮ್ ಗಂಭೀರ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ ಸಿಬಿ) ತಂಡ ನಾಯಕ ವಿರಾಟ್ ಕೊಹ್ಲಿ ಇಬ್ಬರು ಸಮಾನ ದುಃಖಿಗಳಾಗಿದ್ದಾರೆ. ಇಬ್ಬರ ವಿರುದ್ಧ ಬೇರೆ ಬೇರೆ ಕಾರಣಕ್ಕೆ ದಂಡ ವಿಧಿಸಲಾಗಿದೆ.

ಐಪಿಎಲ್ 2016: ವೇಳಾಪಟ್ಟಿ | ಯಾವ ತಂಡದಲ್ಲಿ ಯಾವ ಆಟಗಾರರು | ಗ್ಯಾಲರಿ

ಪಂದ್ಯದ ವೇಳೆ ಅಸಭ್ಯವಾಗಿ ವರ್ತಿಸಿದ್ದ ಗೌತಮ್ ಗಂಭೀರ್ ಅವರು ಡಗ್ ಔಟ್ ನಲ್ಲಿ ಕುರ್ಚಿಯನ್ನು ಒದ್ದು, ಟವೆಲ್ ಎಸೆದು ವೀರಾವೇಶದಲ್ಲಿ ಚೀರಿದ್ದು ನೋಡಿರಬಹುದು. ನೋಡಿಲ್ಲವೆಂದರೆ ಈ ಸುದ್ದಿಯಲ್ಲಿರುವ ವಿಡಿಯೋ ನೋಡಿ [ಉಗ್ರ ಪ್ರತಾಪಿ ಗಂಭೀರ್ ಕುರ್ಚಿ ಒದ್ದು ಚೀರಿದ್ದು ಏಕೆ?]

Gautam Gambhir fined for kicking chair

ಈಗ ಗಂಭೀರ್ ಅವರಿಗೆ ಪಂದ್ಯದ ಸಂಭಾವನೆಯಲ್ಲಿ ಸಿಗುವ ಮೊತ್ತದ ಶೇ 15ರಷ್ಟು ದಂಡ ತೆರುವಂತೆ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪ್ರಕಟಿಸಿದೆ. ಇದೇ ವೇಳೆ ಸ್ಲೋ ಓವರ್ ರೇಟ್ ಹೊಂದಿದ್ದ ಕಾರಣಕ್ಕೆ ಆರ್ ಸಿಬಿ ತಂಡದ ನಾಯಕ ವಿರಾಟ್ ಕೊಹ್ಲಿ ಅವರಿಗೆ 24 ಲಕ್ಷ ರು ದಂಡ ಹಾಕಲಾಗಿದೆ. ಹಳೆ ಬಾಕಿ 12 ಲಕ್ಷ ಸೇರಿ ಒಟ್ಟಾರೆ 36 ಲಕ್ಷ ರು ದಂಡ ಕಟ್ಟಬೇಕಾಗುತ್ತದೆ. [ಪಂದ್ಯ ಸೋಲಿಸುವುದು ಆರ್ ಸಿಬಿ ಬೌಲರ್ಸ್ ಗೆ ಸುಲಭ]

ವಿವೋ ಐಪಿಎಲ್ ನಿಯಾಮಾವಳಿಗಳನ್ನು ಮುರಿದಿರುವ ಆರ್ ಸಿಬಿ ನಾಯಕ ವಿರಾಟ್ ಕೊಹ್ಲಿ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ನಾಯಕ ಗೌತಮ್ ಗಂಭೀರ್ ಅವರಿಗೆ ದಂಡ ವಿಧಿಸಲಾಗಿದೆ ಎಂದು ಐಪಿಎಲ್ ಮಾಧ್ಯಮ ಹೇಳಿಕೆ ನೀಡಿದೆ.

ಗಂಭೀರ್ ಆವರು ಲೆವಲ್ 1 (Article 2.1.8) ನಿಯಮ ಮುರಿದಿದ್ದಾರೆ. ಆಟದ ವೇಳೆ ಮೈದಾನದಲ್ಲಿರುವ ವಸ್ತುಗಳನ್ನು ಹಾನಿ ಪಡಿಸುವುದು, ಕುರ್ಚಿ, ಟವೆಲ್, ಬಾಟಲ್ ಸೇರಿದಂತೆ ಯಾವುದೇ ವಸ್ತುಗಳನ್ನು ಎಸೆಯುವುದು ದಂಡಾರ್ಹ ಅಪರಾಧವಾಗುತ್ತದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Kolkata Knight Riders (KKR) captain Gautam Gambhir was fined 15 per cent of his match fees for his despicable conduct that saw him kick a chair during his team's IPL 2016 victory over Royal Challengers Bangalore (RCB) while rival captain Virat Kohli became poorer by Rs 24 lakh due to slow over-rate for second time.
Please Wait while comments are loading...